ತಲೆ ಸ್ನಾನ ಯಾವ ದಿನ ಮಾಡಬೇಕು ಯಾವ ದಿನ ಮಾಡಿದರೆ ಒಳ್ಳೆಯದು!

0
8569

ಇಂದು ನಿಮಗೆ ತಲೆ ಸ್ನಾನವನ್ನು ಯಾವ ದಿನ ಮಾಡಿದರೆ ಒಳ್ಳೆಯದಾಗುತ್ತದೆ, ತಲೆ ಸ್ನಾನ ಮಾಡಿದ ನಂತರ ಯಾವ ನಿಯಮಗಳನ್ನು ಪಾಲನೆ ಮಾಡಿದರೆ ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ಆಗುತ್ತದೆ ಎಂಬುದರ ಬಗ್ಗೆ ಇಂದು ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ, ಸ್ನಾನ ಎನ್ನುವ ವಿಚಾರದಲ್ಲಿ ಸಾಕಷ್ಟು ವಿಧಿವಿಧಾನಗಳು ಇದೆ, ತಲೆಸ್ನಾನ ಆದಮೇಲೆ ತಪ್ಪದೇ ಕೂದಲನ್ನು ಒಣಗಿಸಬೇಕು, ಎಷ್ಟು ಮನೆಯಲ್ಲಿ ಈ ರೀತಿ ತಪ್ಪುಗಳನ್ನು ಮಾಡುತ್ತಾ ಇರುತ್ತೀರಾ, ತಲೆ ಸ್ನಾನ ಮಾಡಿದ ನಂತರ ಕೂದಲನ್ನು ಬಿಟ್ಟುಕೊಂಡು ಅದರಲ್ಲೂ ಒದ್ದೆ ಕೂದಲನ್ನು ಹಾಗೇ ಬಿಟ್ಟುಕೊಂಡು ಮನೆಯ ತುಂಬಾ ಓಡಾಡುವಂತಹ ತಪ್ಪನ್ನು ಮಾಡಬಾರದು, ತಲೆ ಸ್ನಾನ ಮಾಡಿದ ನಂತರ ತಪ್ಪದೇ ಹಣೆಯ ಮೇಲೆ ಕುಂಕುಮವನ್ನು ಇಟ್ಟುಕೊಂಡು ದೇವರ ಪೂಜೆ ಮಾಡಬೇಕು, ಹನಿಯ ಮೇಲೆ ಬೊಟ್ಟು ಅಥವಾ ಕುಂಕುಮವಿಲ್ಲದೆ ದೇವರ ಪೂಜೆ ಮಾಡಿದರೆ ಅದರಿಂದ ಯಾವುದೇ ಪ್ರತಿಫಲ ಸಿಗುವುದಿಲ್ಲ, ಇನ್ನು ಹೆಂಗಸರು ವಾರಕ್ಕೆ ಎಷ್ಟು ದಿನ ತಲೆಸ್ನಾನ ಮಾಡಬೇಕು ಮತ್ತು ಯಾವ ದಿನ ಮಾಡಬೇಕು ಎಂದರೆ.

ಹೆಂಗಸರು ವಾರಕ್ಕೆ ಬಂದು ದಿನ ತಲೆ ಸ್ನಾನ ಮಾಡಬಹುದು ಗುರುವಾರ ಮಾಡಬೇಕು ಅಥವಾ ಶನಿವಾರ ಮಾಡಬಹುದು ಈ ಎರಡು ದಿನಗಳನ್ನು ಬಿಟ್ಟರೆ ಯಾವ ದಿನ ಸ್ನಾನ ಮಾಡಬಹುದು ಎಂದರೆ ಮಂಗಳವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡಿದರೆ ಬಹಳ ಒಳ್ಳೆಯದು, ಗುರುವಾರ ಮಾಡುವ ತಲೆಸ್ನಾನ ಶುಕ್ರವಾರ ಮಾಡುವ ಪೂಜೆಗೆ ಶುಭವನ್ನು ನೀಡುತ್ತದೆ, ಆದ್ದರಿಂದ ಗುರುವಾರ ಶನಿವಾರ ಕೂಡ ಮಾಡಬಹುದು, ಅದನ್ನು ಬಿಟ್ಟರೆ ಮಂಗಳವಾರ ಶುಕ್ರವಾರ ದೇವಿಯ ದಿನ ವಾಗಿರುವುದರಿಂದ ಒಂದು ಮಾಡಬಹುದು.

ಪುರುಷರ ಬಗ್ಗೆ ಹೇಳಬೇಕಾದರೆ ಪುರುಷರು ಯಾವಾಗ ಸ್ಥಾನ ಮಾಡುತ್ತಾರೆ ಎಲ್ಲಾ ಸಮಯದಲ್ಲೂ ತಲೆಸ್ನಾನ ಮಾಡಬೇಕು ಪುರುಷರಿಗೆ ತಲೆಸ್ನಾನ ಅಥವಾ ದೇಹ ಸ್ಥಾನ ಎಂಬುವ ಭೇದವಿಲ್ಲ ಯಾವಾಗಲೇ ಸ್ನಾನ ಮಾಡಿದರೂ ತಲೆ ಸ್ನಾನವನ್ನು ಸೇರಿಸಿ ಮಾಡಬೇಕು, ಹೆಂಗಸರಿಗೆ ತಲೆಯಲ್ಲಿ ಕೂದಲು ಹೆಚ್ಚಾಗಿ ಇರುವುದರಿಂದ ತಲೆ ಸ್ನಾನ ಮಾಡಿದ ನಂತರ ಕೂದಲನ್ನು ಒಣಗಿಸಿ ನಂತರ ಕೂದಲನ್ನು ಎತ್ತಿಕಟ್ಟಿ ನಂತರವೇ ದೇವರಿಗೆ ಪೂಜೆ ಮಾಡಬೇಕು, ಇಲ್ಲವಾದರೆ ನಕಾರಾತ್ಮಕ ಶಕ್ತಿ ಗಳು ಇದರಿಂದ ಆಕರ್ಷಣೆಗೆ ಒಳಪಡುತ್ತದೇ.

ಇದನ್ನು ಬಿಟ್ಟರೆ ಹೆಂಗಸರು ಅಥವಾ ಗಂಡಸರು ಯಾವುದೇ ದಿನವಾಗಲಿ ಸಾವಿನ ಮನೆಗೆ ಹೋಗಿ ಬಂದರೆ ತಪ್ಪದೇ ಆದಿನ ಇಬ್ಬರೂ ತಲೆ ಸ್ಥಾನವನ್ನು ಖಂಡಿತವಾಗಿಯೂ ಮಾಡಲೇಬೇಕಾಗಿ ಬರುತ್ತದೆ.

LEAVE A REPLY

Please enter your comment!
Please enter your name here