ಪ್ರತಿಯೊಂದು ರಾಶಿಯಲ್ಲಿ ಪುರುಷ ಅಥವಾ ಸ್ತ್ರೀ ಗುಣಗಳು ಇದ್ದೇ ಇರುತ್ತದೆ, ಆ ಗುರುಗಳ ಆಧಾರವಾಗಿ ಅವರವರ ಸ್ವಭಾವ ಗಳು ನಿರ್ಣಯವಾಗುತ್ತದೆ, ಅದೇ ಆಧಾರದ ಮೇಲೆ ರಾಶಿ ಆಧಾರವಾಗಿ ಮಹಿಳೆಯರ ಗುಣ ಸ್ವಭಾವಗಳ ಬಗ್ಗೆ ಒಂದು ನೋಟ.
ಮೇಷ ರಾಶಿ : ಹೆಚ್ಚಾಗಿ ಕೋಪಿಸಿಕೊಳ್ಳುವುದು ಇಲ್ಲ, ಮುಕ್ತವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ, ಯಾರನ್ನೂ ಅನುಕರಣೆ ಮಾಡುವುದಿಲ್ಲ, ಯಾರಿಗಾದರೂ ಕಷ್ಟ ಬಂದರೆ ಬಹಳ ಬೇಗ ಕರೆಯುತ್ತಾರೆ, ನಂಬಿದವರಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ, ಈ ರಾಶಿಯ ಮಹಿಳೆಯರು ಬುದ್ಧಿವಂತರು ಹಾಗೂ ಒಬ್ಬರ ಕಷ್ಟಕ್ಕೆ ಬೇಗ ಮಿಡಿಯುತ್ತಾರೆ.
ವೃಷಭ ರಾಶಿ : ಈ ರಾಶಿಯ ಮಹಿಳೆಯರಿಗೆ ವಿಶಿಷ್ಟವಾದ ದೈವಿಕ ಗುಣ ಇರುತ್ತದೆ, ಕೆಲಸಗಳು ಯಾವುದೇ ಆಗಲಿ ಅದನ್ನು ಮನಸ್ಸಿಟ್ಟು ತುಂಬಾ ಪ್ರೀತಿಯಿಂದ ಮಾಡುತ್ತಾರೆ, ತಮ್ಮ ಜೀವನವನ್ನು ಅತಿಯಾಗಿ ನಂಬುವ ಹಾಗೂ ಪ್ರೀತಿಸುವ ವ್ಯಕ್ತಿತ್ವವನ್ನು ಉಳ್ಳವರು, ಜೀವನದಲ್ಲಿ ಕಷ್ಟಗಳ ಬಗ್ಗೆ ಹೆಚ್ಚು ಚಿಂತೆ ಮಾಡದೆ ಮುಂಬರುವ ಒಳ್ಳೆಯ ವಿಚಾರಗಳನ್ನು ನೆನೆಸಿ ಸಂಭ್ರಮದಿಂದ ಜೀವನ ನಡೆಸುತ್ತಾರೆ.
ಮಿಥುನ ರಾಶಿ : ಈ ರಾಶಿಯ ಮಹಿಳೆಯರು ಬುದ್ಧಿವಂತರು, ಇವರ ಕಣ್ಣು ತಪ್ಪಿಸಿ ಯಾವ ಕೆಲಸವೂ ಮಾಡಲು ಸಾಧ್ಯವಿಲ್ಲ ಎಲ್ಲವನ್ನೂ ತೀಕ್ಷ್ಣವಾಗಿ ಗಮನಿಸುತ್ತಾರೆ, ಇವರದೇ ಕಲ್ಪನೆಯ ಲೋಕದಲ್ಲಿ ಯಾವಾಗಲೂ ಹೇಳುತ್ತಾರೆ, ಇವರ ಮನಸ್ಸು ಇತರ ವಿಷಯಗಳ ಮೇಲೆ ಬೇಗ ಹರಿಯುತ್ತದೆ ಇದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಸಾಧ್ಯ.
ಕಟಕ ರಾಶಿ : ಇವರ ಮನಸ್ಸಿನಲ್ಲಿ ದ್ವೇಷ ಕೋಪ ಅಸೂಯೆ ಇರುವುದಿಲ್ಲ, ಬದಲಿಗೆ ತಮ್ಮಲ್ಲಿ ಎಷ್ಟೇ ನೋವಿದ್ದರೂ ಅದನ್ನು ವರೆಗೆ ಹಂಚಿಕೊಳ್ಳುವುದಿಲ್ಲ, ಪ್ರತಿ ಒಬ್ಬರಿಗೂ ಒಳ್ಳೆಯದನ್ನೇ ಬಯಸುತ್ತಾರೆ, ಪರಿಶುದ್ಧವಾದ ಮನಸ್ಸನ್ನು ಹೊಂದಿರುತ್ತಾರೆ, ಇತರರೊಂದಿಗೆ ಬರೆಯುವಾಗ ಗಾಂಭೀರ್ಯವನ್ನು ಹೊಂದಿರುತ್ತಾರೆ.
ಸಿಂಹ ರಾಶಿ : ಈ ರಾಶಿಯ ಹೆಣ್ಣುಮಕ್ಕಳಿಗೆ ಬಹಳ ಧೈರ್ಯ ಹಾಗೂ ನಿಷ್ಠಾವಂತರು, ನೇರಮಾತು ನೇರನುಡಿ ಗಾಂಭೀರ್ಯತೆಯನ್ನು ಹೊಂದಿರುವವರು, ಸಮಾಜದಲ್ಲಿ ಗುರುತಿಸಿ ಕೊಳ್ಳುವ ಶಕ್ತಿಯನ್ನು ಹೊಂದಿರುವವರು, ಪ್ರತಿಯೊಂದು ವಿಷಯದಲ್ಲೂ ಮುಂಚೂಣಿಯಲ್ಲಿ ಇರಬೇಕು ಎಂದು ಬಯಸುತ್ತಾರೆ, ಕುಟುಂಬದ ಜವಾಬ್ದಾರಿ ಇವರ ಮೇಲೆ ಹೊತ್ತು ಕೊಳ್ಳುತ್ತಾರೆ.
ತುಲಾ ರಾಶಿ : ಈ ರಾಶಿಯ ಹೆಣ್ಣು ಮಕ್ಕಳು ಅಷ್ಟು ಬೇಗ ಯಾವ ವಿಚಾರವನ್ನು ನಂಬುವುದಿಲ್ಲ, ಪ್ರತಿಯೊಂದು ವಿಚಾರವನ್ನು ಯೋಚಿಸಿಯೇ ಮಾಡುವುದು, ವೈಯಕ್ತಿಕವಾಗಿ ಇವರು ರೋಮ್ಯಾಂಟಿಕ್ ಪರ್ಸನಾಲಿಟಿ ಹೊಂದಿರುತ್ತಾರೆ, ಜೀವನದಲ್ಲಿ ಯಾವುದೇ ರೀತಿಯ ಏರುಪೇರುಗಳು ಸಂಭವಿಸದಂತೆ ಸಮತೋಲನ ಜೀವನವನ್ನು ಕಾಯ್ದು ಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ.
ಕನ್ಯಾ ರಾಶಿ : ಇವರ ಸೌಂದರ್ಯ ಎಷ್ಟು ಇರುತ್ತೆ ಅಷ್ಟೇ ಬುದ್ದಿ ಯನ್ನು ಸಹ ಹೊಂದಿರುತ್ತಾರೆ, ಈ ರಾಶಿಯವರನ್ನು ನಂಬಬಹುದು, ಪ್ರತಿಯೊಂದು ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡುತ್ತಾರೆ, ಇವರಲ್ಲಿ ನಾಯಕತ್ವ ಗುಣವಿದೆ.
ವೃಶ್ಚಿಕ ರಾಶಿ : ಇವರ ಗುಣ ಹದ್ದಿನಂತೆ ದೂರದಿಂದಲೇ ಎಲ್ಲಾ ಕಾರ್ಯಗಳನ್ನು ಗಮನಿಸುವ ಸೂಕ್ಷ್ಮ ಸ್ವಭಾವದವರು, ಈ ರಾಶಿಯ ಹೆಣ್ಣು ಮಕ್ಕಳು ಗುಣವಂತ ಇರುವ ಹಾಗೂ ರಾಣಿಯಂತೆ ಮಾಡುತ್ತಾರೆ, ಮನಸ್ಸಿಗೆ ಯಾರನ್ನಾದರೂ ತುಂಬಾ ಹಚ್ಚಿ ಕಂಡರೆ ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ, ಆದರೆ ಇವರದು ಸೂಕ್ತ ಸ್ವಭಾವ ಹಾಗಾಗಿ ಅರ್ಥಮಾಡಿಕೊಳ್ಳುವುದು ಕಷ್ಟ.
ಧನು ರಾಶಿ : ಇವರು ಮಾಡಲು ಹೊರಟ ಕೆಲಸ ಎಷ್ಟೇ ಕಷ್ಟವಾಗಿದ್ದರೂ ತಪ್ಪದೇ ಮುಗಿಸುತ್ತಾರೆ, ಇಟ್ಟ ಗುರಿ ಎಂದಿಗೂ ತಪ್ಪದು, ಎಷ್ಟೇ ಕಷ್ಟಗಳು ಬಂದರೂ ಸಕಾರಾತ್ಮಕವಾಗಿ ಬದುಕುತ್ತಾರೆ, ಸಾಹಸಪ್ರಿಯರು ಹಾಗೂ ಸ್ವತಂತ್ರ ಜೀವಿಗಳು, ತಮಗೆ ಏನು ಬೇಕೋ ಅದನ್ನು ತಪ್ಪದೇ ಪಡೆಯುತ್ತಾರೆ.
ಮಕರ ರಾಶಿ : ಪ್ರಾಚೀನ ಪರಂಪರೆ ಹಾಗೂ ಆಧುನಿಕತೆ ಎರಡನ್ನೂ ಸಮವಾಗಿ ಮೈಗೂಡಿಸಿಕೊಂಡಿರುತ್ತಾರೆ, ಬಹಳ ಭಾವನಾತ್ಮಕ ಜೀವಿಗಳು ಹಾಗೂ ಸೂಕ್ಷ್ಮ ಸ್ವಭಾವದವರು, ಆದರೆ ಈ ವಿಚಾರವನ್ನು ಯಾರೊಂದಿಗೂ ತೋರಿಸಿಕೊಳ್ಳುವುದಿಲ್ಲ, ಉತ್ತಮ ಮಾತುಗಾರರು.
ಕುಂಭ ರಾಶಿ : ಬುದ್ಧಿವಂತರು, ಬಹಳಷ್ಟು ಕರುಣೆಯನ್ನು ಹೊಂದಿರುವವರು, ನಾಡಿನ ದಿನಗಳ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ, ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಇವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ, ಒಂಟಿಯಾಗಿ ಬದುಕಲು ಇಷ್ಟ ಪಡುವುದಿಲ್ಲ ತುಂಬು ಕುಟುಂಬ ತುಂಬು ಸಂಸಾರ ಇವರಿಗೆ ಇಷ್ಟ.
ಮೀನ ರಾಶಿ : ಯಾರೊಂದಿಗೂ ಏನನ್ನು ಹಂಚಿಕೊಳ್ಳುವುದಿಲ್ಲ ರಹಸ್ಯವನ್ನು ಕಾಪಾಡುತ್ತಾರೆ, ತಮ್ಮ ಪ್ರಪಂಚದಿಂದ ಹೊರಗೆ ಬರಲು ಇಷ್ಟಪಡುವುದಿಲ್ಲ, ತಮ್ಮ ದೈನಂದಿನ ಕಾರ್ಯವನ್ನು ಶ್ರದ್ಧೆಯಿಂದ ಮಾಡುತ್ತಾರೆ, ದೇಶಪ್ರೇಮಿ ಶ್ರಮಜೀವಿ, ಮಾನಸಿಕವಾಗಿ ಬಲವನ್ನು ಹೊಂದಿರುತ್ತಾರೆ, ಇಷ್ಟೇ ಸಮಸ್ಯೆಗಳು ಬಂದರು ಮುನ್ನುಗ್ಗುತ್ತಾರೆ.