ಹೌದು ಬಿಸಿಲಿಗೆ ಸುತ್ತಾಡುವುದರಿಂದ ಚರ್ಮದ ಮೇಲೆ ಕಪ್ಪು ಕಲೆಗಳು ಮೂಡುತ್ತವೆ ಇದರಿಂದ ತ್ವಚೆಯು ಹಾಳಾಗುತ್ತದೆ, ಈ ಕಪ್ಪು ಕಲೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕ್ರೀಮ್‌ಗಳು ಕೂಡ ಸಿಗುತ್ತವೆ, ಹಾಗು ಅದನ್ನು ನೀವು ಬಳಸಿರುತ್ತೀರಿ ಸಹ.
ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳು ತಕ್ಷಣಕ್ಕೆ ನಮ್ಮ ಸೌಂದರ್ಯವನ್ನ ಹೆಚ್ಚಿಸ ಬಹುದು ಆರದೆ ಅದರಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ, ಇದರ ಬದಲಿಗೆ ನೈಸರ್ಗಿಕವಾಗಿ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಈ ಕಲೆಯನ್ನು ತೆಗೆದು ಹಾಕಬಹುದು.ಇದರಲ್ಲಿ ಪ್ರಮುಖವಾಗಿ ಅಲೋವೆರಾ, ಇದರಲ್ಲಿ ಗ್ಲಿಸರಿನ್ ಮತ್ತು ಸೋಡಿಯಂ ಕಾರ್ಬೋನೇಟ್ ನಂತಹ ಪೋಷಕಾಂಶಗಳು ಇವೆ.
ತ್ವಚೆಗೆ ನೈಸರ್ಗಿಕ ಕಾಂತಿಯನ್ನು ಇದು ನೀಡುವುದು. ‘ಅಲೋವೆರಾ’ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ ಇದಂತೆ, ಕಿರಿಕಿರಿ ಉಂಟು ಮಾಡುವ ಚರ್ಮಕ್ಕೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಉರಿಯೂತ ಶಮನಕಾರಿ ಗುಣ ಹೊಂದಿರುವುದು. ಅಲೋವೆರಾವು ತುಂಬಾ ವೇಗವಾಗಿ ಕಲೆ ನಿವಾರಣೆ ಮಾಡುವುದು.ಬಿಸಿಲಿನಿಂದ ಆದ ಕಲೆಗಳ ನಿವಾರಣೆಗೆ ಅಲೋವೆರಾ ಜೆಲ್ ತುಂಬಾ ಪರಿಣಾಮಕಾರಿ
ಬಳಸುವ ವಿಧಾನ 1. ತಾಜಾ ಅಲೋವೆರಾ ಲೋಳೆ ತೆಗೆದುಕೊಂಡು ಅದನ್ನು ಕಲೆಯಾಗಿರುವ ಭಾಗಕ್ಕೆ ಹಚ್ಚಿಕೊಂಡು ಸರಿಯಾಗಿ ಉಜ್ಜಿಕೊಳ್ಳಿ, 2. ತಣ್ಣೀರಿನಿಂದ ಮುಖ ತೊಳೆಯಿರಿ, 3. ಪರಿಣಾಮಕಾರಿಯಾದ ಫಲಿತಾಂಶ ಪಡೆಯಬೇಕಾದರೆ ದಿನದಲ್ಲಿ ಹಲವಾರು ಸಲ ಇದನ್ನು ಉಪಯೋಗಿಸಿ.
ಅಲೋವೆರಾ ಮತ್ತು ನಿಂಬೆರಸ : ಲಿಂಬೆರಸ ಮತ್ತು ಅಲೋವೆರಾವು ಬಿಸಿಲಿನ ಕಲೆಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು, ಲಿಂಬೆಯಲ್ಲಿ ಚರ್ಮದ ಕಲೆ ನಿವಾರಣೆ ಮಾಡುವ ಗುಣವಿದೆ.
ಬೇಕಾಗುವ ಸಾಮಗ್ರಿಗಳು : ಅಲೋವೆರಾ ಲೋಳೆ ಲಿಂಬೆ-1 ವಿಧಾನ 1. ಲಿಂಬೆಯ ರಸ ತೆಗೆಯಿರಿ. 2. ಈ ರಸಕ್ಕೆ ಅಲೋವೆರಾ ಜೆಲ್ ಹಾಕಿ ಮತ್ತು ಮಿಶ್ರಣವನ್ನು ಕಲೆ ಇರುವ ಜಾಗಕ್ಕೆ ಹಚ್ಚಿ. 3. ಚರ್ಮವು ಇದನ್ನು ಹೀರಿಕೊಳ್ಳುವ ತನಕ ಮಸಾಜ್ ಮಾಡಿ. 4. ನೀರಿನಿಂದ ತೊಳೆದು ಮತ್ತೆ ಪುನರಾವರ್ತಿಸಿ ಅಲೋವೆರಾ ಮತ್ತು ಶ್ರೀಗಂಧದ ಹುಡಿ ಶ್ರೀಗಂಧದ ಹುಡಿಯು ದೇಹಕ್ಕೆ ತಂಪುಕಾರವಾಗಿದೆ, ಬಿಸಿಲಿನಿಂದ ಆಗಿರುವ ಕಲೆಗಳು ಹೆಚ್ಚು ಉಷ್ಣತೆಯನ್ನು ಸೃಷ್ಟಿಸಿ ಕಿರಿಕಿರಿ ಉಂಟು ಮಾಡುತ್ತದೆ. ಶ್ರೀಗಂಧದ ಹುಡಿಯು ಉಷ್ಣವನ್ನು ಕಡಿಮೆ ಮಾಡಿ ಶಮನ ನೀಡುವುದು.
ಅಲೋವೆರಾ – ಒಂದು ಚಮಚ ಶ್ರೀಗಂಧದ ಹುಡಿ, ಎರಡನ್ನು ಒಂದು ಸಣ್ಣ ಪಿಂಗಾಣಿಯಲ್ಲಿ ಸರಿಯಾಗಿ ಮಿಶ್ರಣ ಮಾಡಿ, ಮುಖದ ಮೇಲಿನ ಕಲೆಗಳ ಮೇಲೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ, 3. ತಣ್ಣೀರಿನಿಂದ ಇದನ್ನು ತೊಳೆಯಿರಿ ಮತ್ತು ಪ್ರತೀ ದಿನ ಹೀಗೆ ಮಾಡಿ.
ಅಲೋವೆರಾ ಮತ್ತು ಸೌತೆಕಾಯಿ ಸೌತೆ ಕಾಯಿಯನ್ನು ತೊಳೆದು ಒಂದು ಚಿಕ್ಕ ತುಂಡು ಕತ್ತರಿಸಿಕೊಳ್ಳಿ, ಇದನ್ನು ಅಲೋವೆರಾ ರಸದೊಂದಿಗೆ ಮಿಕ್ಸಿಯಲ್ಲಿ ಆಡಿಸಿ ರಸ ಮಾಡಿಕೊಳ್ಳಿ, ಈ ರಸವನ್ನು ಕ್ರಮವಾಗಿ ವಾರಕ್ಕೆ ಎರಡು ಅಥವಾ ಮೂರು ಸಾರಿ ಹಚ್ಚಿ ಹದಿನೈದು ನಿಮಿಷಗಳ ಕಾಲ ಬಿಡುವುದರಿಂದ ಕಲೆಗಳು ಕೂಡ ಮಾಯಾ ವಾಗುತ್ತವೆ. ಅಲೋವೆರಾ ಹಾಗೂ ಅರಿಶಿನ ಅಲೋವೆರಾ ರಸವನ್ನು ಸ್ವಲ್ಪ ಅರಿಶಿನ ಹಾಕಿ ಕಲೆಸಿ ಮುಖಕ್ಕೆ ಹಚ್ಚಬೇಕು, ಇದರಿಂದ ಅರಿಶಿನ ಹಾಗೂ ಅಲೋವೆರಾ ಎರಡರ ಪೋಷಕಾಂಶಗಳು ಚರ್ಮಕ್ಕೆ ಶಮನಕಾರಿ ಗುಣವನ್ನು ನೀಡುತ್ತವೆ.
ಕಪ್ಪು ಕಲೆಗಳ ನಿವಾರಣೆಗೆ ಅಲೋವೆರಾ ರಸವನ್ನು ಒಂದು ಚಮಚ ಜೇನು ತುಪ್ಪ ಹಾಗೂ ಅರ್ಧ ನಿಂಬೆ ಹಣ್ಣಿನ ರಸಕ್ಕೆ ಕಲೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ದೂರ ಆಗುತ್ತವೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.