ಆಯುರ್ವೇದ ಶಾಸ್ತ್ರದಲ್ಲಿ ಬಿಕ್ಕಳಿಕೆಯನ್ನು ಹಿಕ್ಕ ಎಂದು ಕರೆಯಲಾಗುತ್ತದೆ ಪ್ರಸನ್ನ ಸಂಬಂಧಿ ವ್ಯಾಧಿಗಳ ರೀತಿ ಇದು ಕೂಡ ಒಂದು ವ್ಯಾಧಿ ಎಂದು ಪರಿಗಣಿಸಿ ವಿಸ್ತಾರವಾದ ವಿವರಣೆಯನ್ನು ನೀಡಲಾಗಿದೆ ಚರಕ ಸಂಹಿತೆಯಲ್ಲಿ ಬಿಕ್ಕಳಿಕೆ ಅದರ ಕಾರಣಗಳು ಹಾಗೂ ಚಿಕಿತ್ಸೆಯ ಬಗ್ಗೆ ವಿವರಿಸಲಾಗಿದೆ.
ಬಿಕ್ಕಳಿಕೆ ಬರುವುದು ಸಾಮಾನ್ಯ ಸಂಗತಿ ಶ್ವಾಸಕೋಶ ಮತ್ತು ಜಠರದ ನಡುವಿನ ವಾಪೆ ಮಾಂಸಖಂಡಗಳಲ್ಲಿ ಸಹಜ ಘರ್ಷಣೆಯಿಂದಾಗಿ ಬಿಕ್ಕಳಿಕೆ ಪ್ರಾರಂಭವಾಗುತ್ತದೆ ಇನ್ನು ಕೆಲವರಿಗೆ ಮೆದುಳಿನಲ್ಲಾಗುವ ಗಾಯ ಪಿತ್ತಕೋಶದ ವೇಗವಾದ ಆಹಾರ ಸೇವನೆಯಿಂದಲೂ ಶುರುವಾಗುತ್ತದೆ ಕೆಲವೊಮ್ಮೆ ಬಿಕ್ಕಳಿಕೆ ಬಂದರು ನಿಯಂತ್ರಣಕ್ಕೆ ಬರುವುದಿಲ್ಲ ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ತೋಚುವುದಿಲ್ಲ ಬಿಕ್ಕಳಿಕೆ ನಿಯಂತ್ರಿಸಲು ಈ ಸಲಹೆಗಳನ್ನು ಪಾಲಿಸಿ.
ಬಿಕ್ಕಳಿಕೆ ರಾತ್ರಿ ಸಮಯದಲ್ಲಿ ಬಂದರೆ ತಕ್ಷಣ 1 ಚಮಚ ಜೇನುತುಪ್ಪ ಸೇವಿಸಿದರೆ ನಿಲ್ಲುತ್ತದೆ.
ಒಂದು ಕೈ ಬೆರಳಿನಿಂದ ಮತ್ತೊಂದು ಕೈಯ ಅಂಗೈಯನ್ನು ಜೋರಾಗಿ ಒತ್ತಿ.
ಸುದ್ದಿ ಮಾಡಿದ ಹಿಂಗು ಸೈಂದವ ಲವಣ ಸುಂಟಿ ಇವುಗಳನ್ನು ಚೂರ್ಣ ಮಾಡಿ ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿ.
ಜಾಯಿಕಾಯಿಯನ್ನು ಕಲಗಚ್ಚು ನಲ್ಲಿ ತೆದು ನಾಲಿಗೆಗೆ ಹಾಕಿ ತಿಕ್ಕಿ.
ಒಂದು ಚಮಚ ತುಪ್ಪ ತಿಂದರು ಕಡಿಮೆಯಾಗಿಲ್ಲ ಅಂದರೆ ಸಾಸಿವೆ ಪುಡಿ ಗೆ ತುಪ್ಪ ಹಾಕಿ ಸೇವಿಸಿ.
ಎಡ ಕೈ ಹೆಬ್ಬರಳನ್ನು ಬಲ ಕೈ ಹೆಬ್ಬೆರಳು ಹಾಗೂ ಮಧ್ಯ ಬೆರಳಿನಿಂದ ಗಟ್ಟಿಯಾಗಿ ಚಿವುಟಿ.
ಸುದೀರ್ಘ ಉಸಿರನ್ನು ಒಳಗೆ ಎಳೆದುಕೊಂಡು ನಿಧಾನಕ್ಕೆ ಬಿಡಿ.
ಮೂರರಿಂದ ನಾಲ್ಕು ಗುಟುಕು ನೀರನ್ನು ನಿಲ್ಲಿಸಿದೆ ಕುಡಿಯಿರಿ ಇದರಿಂದ ಕೂಡ ಬಿಕ್ಕಳಿಕೆ ನಿಲ್ಲುತ್ತದೆ.
ನೀರಿಗೆ ಏಲಕ್ಕಿಯನ್ನು ಹಾಕಿ ಸೋಸಿ ಕುಡಿಯಿರಿ.
1 ಚಮಚ ಸಕ್ಕರೆಯನ್ನು ಬಾಯಿಯಲ್ಲಿ ಹಾಕಿಕೊಂಡು ನಿಧಾನವಾಗಿ ಸೇವಿಸಿ.