ಶಸ್ತ್ರಚಿಕಿತ್ಸೆ ಎನ್ನುವುದು ವೈದ್ಯರಿಗೆ ಹೊಸದೇನಲ್ಲ ರೋಗಿಗಳು ಅಥವಾ ರೋಗದ ಅವಶ್ಯಕತೆಗೆ ಅನುಸಾರವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ, ಆದರೆ ಕೆಲವು ಬಾರಿ ಮಾತ್ರ ವೈದ್ಯರೇ ದಿಗ್ಬ್ರಮೆ ಗೊಳ್ಳುವ ಸಂದರ್ಭಗಳು ಬಂದುಬಿಡುತ್ತವೆ, ಅಂತಹ ಒಂದು ಅಪರೂಪದ ಮತ್ತು ವಿಚಿತ್ರ ಎನಿಸಿಕೊಳ್ಳುವ ವೈದ್ಯಕೀಯ ಲೋಕದ ವೈದ್ಯರೇ ಒಂದು ಕ್ಷಣ ಚಿಂತೆ ಮಾಡಿದ ಶಸ್ತ್ರಚಿಕಿತ್ಸೆಯ ಬಗ್ಗೆ ಇಂದು ನಿಮಗೆ ಮಾಹಿತಿ ನೀಡುತ್ತೇವೆ.
ರೋಗಿ ಒಬ್ಬನು ನನಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ವೈದ್ಯರ ಬಳಿ ಬಂದು ಅದಕ್ಕಾಗಿ ಪ್ರಾರ್ಥಮಿಕ ಔಷಧಿಗಳನ್ನು ಪಡೆದು ಮತ್ತೆ ಹಿಂತಿರುಗಿ ಮನೆಗೆ ಹೋಗಿದ್ದ ಆದರೆ ಕೆಲವು ದಿನಗಳ ಬಳಿಕ ಹೊಟ್ಟೆನೋವು ಮತ್ತೆ ಹೆಚ್ಚಾಗಿದೆ, ಈ ಕಾರಣಕ್ಕಾಗಿ ಮತ್ತೆ ವೈದ್ಯರನ್ನು ಸಂಪರ್ಕಿಸಿ ತನಗಾಗುತ್ತಿರುವ ನೋವನ್ನು ಹೇಳಿಕೊಂಡಿದ್ದ ಹಾಗೂ ಹೊಟ್ಟೆ ನೋವಿಗೆ ಕಾರಣ ಏನು ಎಂಬುದನ್ನು ವೈದ್ಯರ ಬಳಿ ವಿವರವಾಗಿ ತಿಳಿಸಿದ್ದ.
ಅದೇನೆಂದರೆ ತನಗೆ ಗೊತ್ತಿಲ್ಲದೆ ಹೆಡ್ ಫೋನ್ ತಂತಿಯನ್ನು ನುಂಗಿರುವ ವಿಚಾರವನ್ನು ತಿಳಿಸಿದ್ದ, ಇದನ್ನು ಕೇಳಿದ ವೈದ್ಯರು ಅದನ್ನು ಹೇಗೆ ತೆಗೆಯಬೇಕು ಎಂದು ಯೋಚನೆ ಮಾಡಲು ಶುರುಮಾಡಿದರು, ಮೊದಲು ಆತನ ಮಲದ ಪರೀಕ್ಷೆ ಮಾಡಿ ಎಂಡೋಸ್ಕೋಪಿ ಮಾಡಿದರು, ಇಲ್ಲಿ ವೈದ್ಯರಿಗೆ ಅಚ್ಚರಿ ಮೂಡಿಸಿದ್ದು ಈ ಪರೀಕ್ಷೆಯಲ್ಲಿ ಹೊಟ್ಟೆಯಲ್ಲಿ ಹೆಡ್ ಫೋನ್ ತಂತಿ ಇರುವುದು ಗೊತ್ತಾಗಲಿಲ್ಲ, ಅದಾದ ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಮುಂದಾದರು.
ಈ ರೀತಿ ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರಿಗೆ ಅಸಲಿ ಸತ್ಯ ಗೊತ್ತಾಗಿದೆ, ರೋಗಿ ವೈದ್ಯರ ಬಳಿ ಸುಳ್ಳು ಹೇಳಿದ್ದ ಆತ ಯಾವುದೇ ಹೆಡ್ಫೋನ್ ತಂತಿಯನ್ನು ನುಂಗಿಲ್ಲ ಹಾಗೂ ಹೆಡ್ಫೋನ್ ತಂತಿ ಈತನ ಹೊಟ್ಟೆಯಲ್ಲಿ ಇರಲೇಇಲ್ಲ ಎಂಬ ಅಚ್ಚರಿ ಸಂಗತಿ ಬೆಳಕಿಗೆ ಬಂದಿದ್ದು, ಹಾಗಾದರೆ ನಡೆದ ವಿಚಾರವಾದರೂ ಏನು ?
ಈ ಶಸ್ತ್ರಚಿಕಿತ್ಸೆಯ ಮುತುವರ್ಜಿ ವಹಿಸಿದ್ದ ವೈದ್ಯರಾದ ವಾಲಿಯನ್ ಸಲ್ಮಾ ಅವರು ಹೇಳುವ ಪ್ರಕಾರ ಇದೊಂದು ವಿಚಿತ್ರ ರೀತಿಯ ಪ್ರಕರಣ ನನ್ನ 25ವರ್ಷದ ಅನುಭವದಲ್ಲಿ ಈ ರೀತಿಯ ಪ್ರಕರಣ ಇದೇ ಮೊದಲು, ಕಾರಣ ಈತ ಬಾಯಿಯ ಮುಖಾಂತರ ಹೆಡ್ ತಂತಿ ನುಂಗಿಲ್ಲ ಬದಲಿಗೆ ಚಾರ್ಜರ್ ಕೇಬಲ್ ಅನ್ನು ತನ್ನ ಗುಪ್ತಂಗದ ಮುಖಾಂತರ ಶರೀರದ ಒಳಗಡೆ ಹಾಕಿಕೊಂಡಿದ್ದ ಎಂದು ತಿಳಿಸಿದ್ದಾರೆ.