ಸಕ್ಕರೆ ಸೇವನೆಯಿಂದ ದೇಹಕ್ಕೆ ಅನೇಕ ಮಾರಕ ಕಾಯಿಲೆಗಳು ಬರುತ್ತವೆ, ಕಾರಣ ಸಕ್ಕರೆಯಲ್ಲಿ ಕೊಬ್ಬಿನ ಅಂಶ ಅತಿ ಹೆಚ್ಚಾಗಿರುತ್ತದೆ, ಇನ್ನು ಸಂಸಾರ ಸಂಸ್ಕರಿಸಿದ ಸಕ್ಕರೆಗಿಂತ ಬೆಲ್ಲ ದಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಸಂಸ್ಕರಿಸಿದ ಸಕ್ಕರೆಯಲ್ಲಿ ಯಾವುದೇ ವಿಟಮಿನ್ ಮತ್ತು ಖನಿಜಾಂಶ ಇರುವುದಿಲ್ಲ, ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಆದ್ದರಿಂದ ಸಂಸ್ಕರಿಸಿದ ಸಕ್ಕರೆಗಿಂತ ಬೆಲ್ಲವೆ ಉತ್ತಮ.
ಇನ್ನು ಪ್ರತಿದಿನ ಬೆಳಗ್ಗೆ ನೀವು ಕುಡಿಯುವ ಹಾಲಿನಲ್ಲಿ ಸಕ್ಕರೆ ಬದಲಿಗೆ ಬೆಲ್ಲವನ್ನು ಮಿಶ್ರ ಮಾಡಿ ಕುಡಿಯುವುದರಿಂದ ಎಷ್ಟೊಂದು ಆರೋಗ್ಯ ಲಾಭಗಳು ನಿಮಗೆ ದೊರೆಯಲಿದೆ ಎಂಬುದರ ಬಗ್ಗೆ ಇಂದು ತಿಳಿಸುತ್ತೇವೆ.
ತಲೆ ಕೂದಲ ಸಮಸ್ಯೆ ಇದ್ದವರು ಬೆಳಗ್ಗೆ ಬಿಸಿ ಹಾಲಿನೊಂದಿಗೆ ಸಕ್ಕರೆ ಬದಲು ಬೆಲ್ಲವನ್ನು ಮಿಶ್ರ ಮಾಡಿ ಕುಡಿಯುವುದರಿಂದ ಅನೇಕ ಕೂದಲಿಗೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ, ಇದರಿಂದ ತಲೆ ಕೂದಲು ಹೊಳಪಾಗುತ್ತದೆ, ತಲೆ ಕೂದಲು ಉದುರುವುದು ನಿಂತು ಹೋಗುತ್ತದೆ ಹಾಗು ತಲೆಯ ಹೊಟ್ಟು ಸಮಸ್ಯೆಗೆ ಸಹ ನಿವಾರಣೆಯಾಗುತ್ತದೆ.
ಕೀಲು ನೋವಿದ್ದವರಿಗೆ, ಋತು ಸಮಸ್ಯೆ ಇದ್ದವರಿಗೆ ಇದರ ಸೇವನೆ ಒಳ್ಳೆಯದು, ನಿಶ್ಶಕ್ತಿಯಿಂದ ಬಳಲುವವರಿಗೆ ಉಪಕಾರಿ, ಮಲಬದ್ಧತೆ ನಿವಾರಿಸುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಶ್ವಾಸನಾಳ ಶುದ್ಧಗೊಳಿಸುತ್ತದೆ, ಪಿತ್ತಕೋಶದ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ, ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ, ಆ್ಯಸಿಡಿಟಿಗೆ ಒಳ್ಳೆಯದು.
ಟಾನಿಕ್‌ಗಳಿಗೂ ಬಳಸಲಾಗುತ್ತದೆ, ರಕ್ತಹೀನತೆ ನಿವಾರಿಸುತ್ತದೆ, ರಕ್ತ ಶುದ್ಧಗೊಳಿಸುತ್ತದೆ, ಬೆಲ್ಲ ಸೇವನೆ ಎಂಡಾರ್ಫಿನ್ ಹಾರ್ಮೋನಿಗೆ ಪ್ರೇರಕವಾಗಿದೆ, ಆದ್ದರಿಂದ ಇದು ಆತಂಕ, ಒತ್ತಡ ಹಾಗೂ ಋತುಸ್ರಾವದ ಮುನ್ನದ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.