ಗಂಟಲು ನೋವು ಕಾಣಿಸಿಕೊಳ್ಳಲು ಕಾರಣ ವೈರಸ್ ಸೋಂಕು ಎಂದರೆ ತಪ್ಪಾಗ ಲಾರದು ಮತ್ತು ಕೆಲವೊಮ್ಮೆ ಬ್ಯಾಕ್ಟೀರಿಯಾ ಸೋಂಕಿನಿಂದ ಸಹ ಬರುತ್ತದೆ, ಇದು ಗರ್ಭಾವಸ್ಥೆಯಲ್ಲಿ ಕೆಲವರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಕಿರಿಕಿರಿಯನ್ನು ಉಂಟುಮಾಡುವುದು ಸಹಜ ಆದರೆ ಇದರ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿಲ್ಲ.
ನೀವು ಮಾಡಬೇಕಾಗಿರುವುದು ಅದರ ಗುಣಲಕ್ಷಣಗಳನ್ನು ಗಮನಿಸಿ ಅದನ್ನು ಶಮನ ಮಾಡುವುದು, ಇದನ್ನು ಉಪಶಮನಗೊಳಿಸಲು ನೀವು ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಳ್ಳಬಹುದು ಇದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಎರಡು ಎಳೆ ಬೆಳ್ಳುಳ್ಳಿ ಜೊತೆಗೆ ಉಪ್ಪು ಸೇರಿಸಿ ಅಗಿದು ಬೆಳಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ ದಿನ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ.
ಲವಂಗ ಮತ್ತು ಮೂಲಂಗಿಯನ್ನು ಅಗಿದು ಸಂಜೆಯ ಸಮಯದಲ್ಲಿ ತಿಂದರೆ ಗಂಟಲಿನ ಯಾವುದೇ ಸಮಸ್ಯೆಯಿದ್ದರೂ ತಕ್ಷಣ ಪರಿಹಾರ ಸಿಗುತ್ತದೆ.
ಅತಿಯಾದ ಬಿಸಿ ಮತ್ತು ತಂಪನೆಯ ಆಹಾರ ಪದಾರ್ಥ ಮತ್ತು ನೀರನ್ನು ಕುಡಿದಾಗ ಗಂಟಲು ಕೆಡುವ ಸಾಧ್ಯತೆ ಇದೆ.ಆದ್ದರಿಂದ ಇಂಥವುಗಳನ್ನು ಸೇವಿಸುವಾಗ ಎಚ್ಚರಿಕೆಯಿರಲಿ.
ಪ್ರತಿದಿನ ಬೆಳಗ್ಗೆ ಎರಡು ತುಳಸಿ ಎಲೆಯನ್ನು ನಿಯಮಿತವಾಗಿ ಸೇವಿಸಿದರೆ ಧ್ವನಿಯು ಇಂಪಾಗುವುದರೊಂದಿಗೆ ಆರೋಗ್ಯವೂ ವೃದ್ದಿಸುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.