ಸಾಮಾನ್ಯವಾಗಿ ಹೊಟ್ಟೆ ನೋವು ಅಜೀರ್ಣ ಮತ್ತು ನಮ್ಮ ನಿರ್ಲಕ್ಷ್ಯದಿಂದ ಬರುವುದು ನಾವು ಅಸುಚಿ ಯಾಗದಿದ್ದರೆ ಹೊಟ್ಟೆನೋವು ಬರುವ ಅವಕಾಶವುಂಟು ಹೊಟ್ಟೆ ನೋವು ಕಡಿಮೆಯಾಗದಿದ್ದರೆ ಹಲವು ರೀತಿಯ ಮನೆಮದ್ದುಗಳನ್ನು ಮನೆಯಲ್ಲೇ ತಯಾರಿಸಿ ಕೊಳ್ಳ ಬಹುದಾಗಿದೆ ಹೊಟ್ಟೆ ನೋವಿಗೆ ತಕ್ಷಣ ಮನೆಯಲ್ಲೇ ಸಿದ್ದ ಮಾಡಬಹುದಾದ ಕೆಲವು ಸುಲಭ ಮನೆಮದ್ದು ಈ ಕೆಳಗಿದೆ.
ಅಜೀರ್ಣದಿಂದ ಹೊಟ್ಟೆ ನೋವು ಉಂಟಾದರೆ ಕಾಳುಮೆಣಸನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿಕೊಳ್ಳಬೇಕು ಸ್ವಲ್ಪ ಉಪ್ಪು ಮತ್ತು ತುಪ್ಪ ಸೇರಿಸಿ ಬಿಸಿ ಅನ್ನಕ್ಕೆ ಕಲೆಸಿ ತಿನ್ನಬೇಕು ಆಗ ಹೊಟ್ಟೆನೋವು ದೂರವಾಗುವುದು.
ಏಲಕ್ಕಿಯ ಕಾಳನ್ನು ಉರಿದು ಹಳೆ ಹುಣಸೆಹಣ್ಣು ಹಾಗೂ ಪುದೀನಾ ಮತ್ತು ಕಾಳು ಮೆಣಸು ಪುಡಿ ಸೇರಿಸಿ ಚೆನ್ನಾಗಿ ಅರೆದು ಪೇಸ್ಟ್ ತಯಾರಿಸಿಕೊಳ್ಳಿ ಆ ಪೇಸ್ಟ್ ಅನ್ನು ಅನ್ನಕ್ಕೆ ಕಲಸಿ ತಿಂದರೆ ಹೊಟ್ಟೆನೋವು ಶಮನಗೊಳ್ಳುತ್ತದೆ.
ಈರುಳ್ಳಿಯನ್ನು ಬೇರೆ ತರಕಾರಿಗಳ ಜೊತೆ ಸೇರಿಸಿ ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನುವುದರಿಂದ ಹೊಟ್ಟೆನೋವು ದೂರವಾಗುವುದು ಹಾಗೂ ಶುಂಠಿ ಮತ್ತು ಬೆಳ್ಳುಳ್ಳಿ ಆಹಾರದ ಪದಾರ್ಥಗಳ ಜೊತೆ ಮಿತವಾಗಿ ಸೇವಿಸುವುದರಿಂದ ಅಜೀರ್ಣ ದೂರವಾಗುವುದು ಹಾಗೆ ಹೊಟ್ಟೆ ನೋವು ಕೂಡ ದೂರವಾಗುತ್ತದೆ.
ಹೊಟ್ಟೆ ನೋವು ಹಾಗೂ ಹೊಟ್ಟೆ ಉಬ್ಬರ ಇರುವವರು ಊಟಕ್ಕೆ ಮೊದಲು ಒಂದು ಚಮಚ ನಿಂಬೆ ರಸವನ್ನು ಸೇವಿಸುವುದರಿಂದ ಶಮನವಾಗುವುದು.
ಊಟವಾದ ನಂತರ ರಾತ್ರಿ ಮಲಗುವಾಗ ಬಾಳೆಹಣ್ಣನ್ನು ಸೇವಿಸಬೇಕು ಆಗ ತಿಂದ ಆಹಾರ ಜೀರ್ಣವಾಗಿ ಹೊಟ್ಟೆನೋವು ಕಾಣಿಸಿಕೊಳ್ಳುವುದಿಲ್ಲ.
ಓಮಿನ ಕಾಳನ್ನು ಹರಳು ಉಪ್ಪಿನ ಜೊತೆ ಸೇರಿಸಿ ಬಾಯಿಗೆ ಹಾಕಿಕೊಂಡು ಅಗೆಯಬೇಕು ಆಗ ಹೊಟ್ಟೆ ನೋವು ದೂರವಾಗುತ್ತದೆ.
ಹೆಚ್ಚು ಕಾಫಿ ಮತ್ತು ಟೀ ಸೇವನೆ ದೂರಮಾಡಬೇಕು ಅಜೀರ್ಣವನ್ನು ಹೋಗಲಾಡಿಸಲು ಜೀರಿಗೆಯನ್ನು ಬಾಯಿಗೆ ಹಾಕಿಕೊಂಡು ಆಗಬೇಕು ಹಾಗೆ ಹಣ್ಣಿನ ರಸವನ್ನು ಕುಡಿಯಬೇಕು.
ಸಾಮಾನ್ಯವಾಗಿ ಹೊಟ್ಟೆನೋವು ಬರುವುದು ಅಜೀರ್ಣ ಸಮಸ್ಯೆಯಿಂದ ಹಸಿವು ಹೆಚ್ಚಿಸಿಕೊಂಡು ಸಮತೋಲನ ಆಹಾರ ಸೇವಿಸುತ್ತಿದ್ದರೆ ಹೊಟ್ಟೆನೋವು ಕಾಣಿಸಿಕೊಳ್ಳುವುದಿಲ್ಲ.