ಗೇರು ಹಣ್ಣು ದಕ್ಷಿಣ ಅಮೇರಿಕಾದ ಬ್ರೆಜಿಲ್ ನ ಮುಖ್ಯ ಬೆಳೆ, ಪೋರ್ಚುಗೀಸರು ನಮ್ಮ ದೇಶದ ಕರಾವಳಿಗೆ ಮೊಟ್ಟ ಮೊದಲು ಬಂದಾಗ ತಮ್ಮ ದೇಶದ ಹಣ್ಣುಗಳನ್ನು ತರುವ ಸಲುವಾಗಿ ಗೇರು ಮರವನ್ನು ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ತಂದರು, ನಂತರ ಈ ಹಣ್ಣು ಜನರ ಮೆಚ್ಚುಗೆಯನ್ನು ಪಡೆದು ಕರಾವಳಿ ತೀರ ಹಾಗೂ ಗುಡ್ಡಗಾಡುಗಳಲ್ಲಿ ಹರಡಿತು, ನಿಮಗೆ ಆಶ್ಚರ್ಯವಾಗಬಹುದು ಇಂದು ಭಾರತಕ್ಕೆ ಆದಾಯ ತರುತ್ತಿರುವ ಎರಡನೇ ಅತಿದೊಡ್ಡ ಬೆಳೆ ಗೇರು ಹಣ್ಣು.
ಇಂತಹ ಗೇರು ಹಣ್ಣಿನಲ್ಲಿ ಹತ್ತು ಹಲವು ಆರೋಗ್ಯ ಲಾಭಗಳು ಮತ್ತು ಇಂದು ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ಚಿಕ್ಕ ಮಕ್ಕಳ ಹೊಟ್ಟೆಯಲ್ಲಿ ಜಂತುಹುಳುಗಳ ಸಮಸ್ಯೆಗಳಿದ್ದಲ್ಲಿ ಈ ಹಣ್ಣುಗಳನ್ನು ತಿನ್ನಿಸಿರಿ ಹಣ್ಣಿನಲ್ಲಿ ಅನಾಕಾರ್ದಿಕ್ ಎಂಬುವ ಆಮ್ಲವು ಹೆಚ್ಚಿರುತ್ತದೆ ಇದು ಬ್ಯಾಕ್ಟೀರಿಯಾ ನಿರೋಧಕ ಇದರಿಂದ ಹೊಟ್ಟೆಯಲ್ಲಿನ ಗಂಟುಗಳು ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.
ಅಷ್ಟೇ ಅಲ್ಲದೆ ಈ ಹಣ್ಣುಗಳನ್ನು ತಿನ್ನುವುದರಿಂದ ಹಲ್ಲಿನಲ್ಲಿರುವ ಹುಳುಕು ಗಳಿಂದ ರಕ್ಷಣೆ ನೀಡುತ್ತದೆ, ಕಣ್ಣಿನ ಊತ ಹಾಗೂ ಕಣ್ಣಿನ ಪೊರೆ ಸಮಸ್ಯೆಗಳು ಬರದಂತೆ ತಡೆಯುತ್ತವೆ.
ವಿಟಮಿನ್ ಸಿ, ಬಿ1, ಬಿ2 ಮತ್ತು ಬೀಟಾ ಕೆರೋಟಿನ್ ಅಂಶಗಳು ಅತ್ಯಧಿಕವಾಗಿದೆ, ಅಷ್ಟೇ ಅಲ್ಲದೆ ಕ್ಯಾಲ್ಸಿಯಂ ಮೆಗ್ನೀಷಿಯಂ ಹಾಗೂ ಪೊಟ್ಯಾಶಿಯಂ ಅಂಶಗಳು ಸಹ ಈ ಹಣ್ಣಿನಲ್ಲಿ ಇದು ಮಾನವನ ಮೂಳೆ ಸವೆತವನ್ನು ತಪ್ಪಿಸಿ ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಅಂದರೆ ಜೀರ್ಣಕ್ರಿಯೆ ಹೊಟ್ಟೆನೋವು ಹೊಟ್ಟೆ ಉರಿ ಯಾವ ಸಮಸ್ಯೆಯೂ ಬಾರದಂತೆ ತಡೆಯುತ್ತದೆ, ಗೇರು ಹಣ್ಣುಗಳನ್ನು ತಿನ್ನುವ ಅಭ್ಯಾಸವಿದ್ದರೆ ಗಾಯಗಳು ಬೇಗ ವಾಸಿಯಾಗುತ್ತದೆ.
ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಕಬ್ಬಿಣ ಅಂಶ ಗೇರು ಹಣ್ಣಿನಲ್ಲಿ ಇದೆ, ಹಾಗಾಗಿ ಕೆಂಪು ರಕ್ತಕಣಗಳು ದೇಹದಲ್ಲಿ ವೃದ್ಧಿಯಾಗುತ್ತವೆ, ಅಷ್ಟೇ ಅಲ್ಲದೆ ದೇಹದಲ್ಲಿನ ಸಕ್ಕರೆಯ ಅಂಶವನ್ನೂ ಸಹ ಈ ಹಣ್ಣು ಕಡಿಮೆ ಮಾಡುತ್ತದೆ.
ಅತಿ ಮುಖ್ಯವಾಗಿ ಗೇರು ಹಣ್ಣಿನ ಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ಸಂಬಂಧಿತ ಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ ಹಾಗೂ ಹೃದಯದ ಸ್ನಾಯುಗಳನ್ನು ಬಲಪಡಿಸಿ ಉದಯ ಸಂಬಂಧಿ ಸಮಸ್ಯೆಗಳು ಬರದಂತೆ ತಡೆಯುತ್ತದೆ.