ನಿಮ್ಮ ಡಯಾಬಿಟಿಸ್, ಕ್ಯಾನ್ಸರ್‌‌‌ ಹೃದಯ ಸಂಬಂಧ ರೋಗಗಳಿಗೆ ರಾಮಬಾಣ ಈ ಕಡಲೆ ಕಾಳು!

0
2865

ಕಡಲೆ ಕಾಳು ನಮ್ಮ ಆರೋಗ್ಯಕ್ಕೆ ತುಂಬ ಉತ್ತಮವಾದ ಆಹಾರ ಸಾಮಗ್ರಿಗಳಲ್ಲಿ ಒಂದಾಗಿದೆ, ಈ ಕಡಲೆ ಕಾಲಿನಲ್ಲಿ ಸಾಕಷ್ಟು ರೀತಿಯಾದ ಉಪಯೋಗಗಳು ಕಂಡುಬರುತ್ತವೆ.ಡಯಾಬಿಟಿಸ್, ಕ್ಯಾನ್ಸರ್‌‌‌ ಹೃದಯ ಸಂಬಂಧ ರೋಗಗಳಿಗೆ ರಾಮಬಾಣ ಈ ಕಡಲೆಕಾಳು.

ಕಡಲೆ ಕಾಳಿನಲ್ಲಿರುವ ಫೈಬರ್ ಅಂಶ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್‌‌ಅನ್ನು ಕಡಿಮೆ ಮಾಡಿದರೆ, ಇದರ ಫೋಲಿಯೇಟ್‌‌‌ ಅಂಶ ಹೃದಯಕ್ಕೆ ಹಾನಿ ಮಾಡುವಂತಹ ಹೊಮೋಸಸ್ಟೈನ್‌‌‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ನು ಕಾಪರ್‌‌‌‌‌‌, ಜಿಂಕ್‌‌‌‌‌‌‌‌‌‌ನಂತಹ ಮಿನರಲ್‌ಗಳು ಸೆಲ್‌‌ ಮತ್ತು ಇಮ್ಯೂನಿಟಿ ಸಿಸ್ಟಮ್‌‌‌‌‌‌‌‌‌‌‌‌‌‌‌‌‌‌‌‌‌‌‌ ಅಭಿವೃದ್ಧಿಯಾಗಲು ಸಹಾಯಕಾರಿಯಾಗಿದೆ.

ಪ್ರತಿದಿನ ಬೇಯಿಸಿದ ಕಡಲೆ ಕಾಳು ಸೇವಿಸಿದರೆ ನಿಮ್ಮ ದೇಹಕ್ಕೆ ಬೇಕಾದ ನ್ಯೂಟ್ರಿಶಿಯನ್ ಸಿಗಲಿದೆ, ಇದರಲ್ಲಿನ ಮೆಗ್ನಿಷಿಯಂ ಅಂಶ ಕೇವಲ ಇಮ್ಯೂನಿಟಿ ಸಿಸ್ಟಮ್ ಅಭಿವೃದ್ಧಿ ಪಡಿಸುವುದಲ್ಲದೆ, ನಿಮ್ಮ ದೇಹಕ್ಕೆ ಬೇಕಾದ ಎನರ್ಜಿಯನ್ನು ಸಪ್ಲೈ ಮಾಡುತ್ತದೆ.

ಕಡಲೆಕಾಳುಗಳಲ್ಲಿ ಸಿಗುವ ವಿಟಮಿನ್ಸ್ : ಒಂದು equiv ವಿಟಮಿನ್ = (0%) 1 μg, ಥಿಯಾಮೈನ್ (ಬಿ 1) = (10%) 0.116 ಮಿಗ್ರಾಂ, ಲಿಂಕಿಂಗ್ (B2) = (5%) 0.063 ಮಿಗ್ರಾಂ, ನಿಯಾಸಿನ್ (B3) = (4%) 0.526 ಮಿಗ್ರಾಂ, ಪಾಂಟೊಥೆನಿಕ್ ಆಮ್ಲ = (ಬಿ 5) (6%) 0.286 ಮಿಗ್ರಾಂ, ಜೀವಸತ್ವ B6 = (11%) 0.139 ಮಿಗ್ರಾಂ, ಫೋಲೇಟ್ = (B9) (43%) 172 μg, ವಿಟಮಿನ್ ಬಿ 12 = (0%) 0 μg, ವಿಟಮಿನ್ ಸಿ = (2%) 1.3 ಮಿಗ್ರಾಂ, ವಿಟಮಿನ್ ಇ =(2%) 0.35 ಮಿಗ್ರಾಂ, ವಿಟಮಿನ್ ಕೆ = (4%) 4 μg.

ಕಡಲೆಕಾಳಿನಲ್ಲಿ ಸಿಗುವ ಮಿನರಲ್ಸ್ : ಕ್ಯಾಲ್ಸಿಯಂ =(5%) 49 ಮಿಗ್ರಾಂ, ಐರನ್ (22%) =2.89 ಮಿಗ್ರಾಂ, ಮೆಗ್ನೀಸಿಯಮ್ =(14%) 48 ಮಿಗ್ರಾಂ, ರಂಜಕ =(24%) 168 ಮಿಗ್ರಾಂ, ಪೊಟ್ಯಾಸಿಯಮ್ =(6%) 291 ಮಿಗ್ರಾಂ, ಸೋಡಿಯಂ =(0%) 7 ಮಿಗ್ರಾಂ, ಝಿಂಕ್ =(16%) 1.53 ಮಿಗ್ರಾಂ.

ಸ್ತನ ಕ್ಯಾನ್ಸರ್‌‌‌ ರೋಗಕ್ಕೆ : ಮಹಿಳೆಯರಿಗೆ ಕೂಡಾ ಕಡಲೆ ಕಾಳು ಸೇವನೆ ಬಹಳ ಸಹಾಯಕಾರಿ, ಈ ಕಾಳಿನಲ್ಲಿರುವ ಫೈಟೊಸ್ಟ್ರೊಜನ್‌‌‌‌‌‌ ಮತ್ತು ಆ್ಯಂಟಿ ಆಕ್ಸಿಡೆಂಟ್‌‌ಗಳು ಸ್ತನ ಕ್ಯಾನ್ಸರ್‌‌‌ ಉಂಟು ಮಾಡುವಂತ ರೋಗಾಣುಗಳನ್ನು ನಾಶ ಮಾಡುತ್ತವೆ.

ಮಲಬದ್ಧತೆ ರೋಗಕ್ಕೆ : ಇದರಲ್ಲಿನ ಪೊಟ್ಯಾಶಿಯಂ, ಮೇಗ್ನೀಶಿಯಂ ಅಂಶಗಳು ರಕ್ತದ ಒತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ, ಅಲ್ಲದೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ್ಗೆ ಕಡಲೆ ಕಾಳು ಸೇವಿಸಿದರೆ ಆ ಸಮಸ್ಯೆಯಿಂದ ಬೇಗ ಹೊರ ಬರಬಹುದು.

ಡಯಾಬಿಟಿಸ್‌‌ ರೋಗಕ್ಕೆ: ಡಯಾಬಿಟಿಸ್‌‌ನಿಂದ ಬಳಲುತ್ತಿರುವವರಿಗೆ ಕಡಲೆ ಕಾಳು ರಾಮಬಾಣ, ಇಂತವರು ಪ್ರತಿದಿನ ಕಡಲೆ ಕಾಳು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಂಟ್ರೋಲ್‌‌ನಲ್ಲಿಟ್ಟು ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ನಿಮ್ಮ ತೂಕ ಮಾಡಲು: ಕಡಲೆ ಕಾಳು ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದು, ನೀವು ಬೆಳಗ್ಗೆ ಅಥವಾ ಮಧ್ಯಾಹ್ನ ಒಂದು ಬೌಲ್ ಬೇಯಿಸಿದ ಕಡಲೆ ಕಾಳು ತಿಂದರೆ ಹೊಟ್ಟೆ ತುಂಬಿರುತ್ತದೆ, ಇದರಿಂದ ನಿಮಗೆ ಹಸಿವು ಆಗದೆ ಹೆಚ್ಚು ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ, ಇದರಿಂದ ನೀವು ತೂಕ ಕಡಿಮೆ ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here