ಸಾಮಾನ್ಯವಾಗಿ ನಮ್ಮ ಜೀರ್ಣ ಕ್ರಿಯೆಗೆ ಅಗತ್ಯವಿರುವ ಆಮ್ಲವನ್ನು ನಮ್ಮ ಹೊಟ್ಟೆಯಲ್ಲಿರುವ ಗ್ರಂತಿಗಳು ಬಿಡುಗಡೆಮಾಡುತ್ತದೆ, ಈ ಆಮ್ಲವು ನಮ್ಮ ಆಹಾರವನ್ನು ಪುಡಿ ಪುಡಿ ಮಾಡಿ ಆಹಾರ ಜೀರ್ಣಗೊಳ್ಳಲು ಸಹಾಯ ಮಾಡುತ್ತದೆ, ಕೆಲವೊಮ್ಮೆ ಕೆಲವು ಕಾರಣಗಳಿಂದಾಗಿ ಹೊಟ್ಟೆಯು ಅಧಿಕ ಆಮ್ಲವನ್ನು ಉತ್ಪತ್ತಿಮಾಡಿ ಅಸಿಡಿಟಿಗೆ ಕಾರಣವಾಗುತ್ತದೆ.
ಅಸಿಡಿಟಿಯ ಕಾರಣಗಳು : ಮಲಗುವ ಮುನ್ನ ಅತಿ ಹೆಚ್ಚು ತಿನ್ನುವುದು, ಅನಿಯಮಿತ ಆಹಾರ ಸೇವನೆ ಮಾಡುವುದು, ಅತಿಯಾದ ಮಸಾಲೆಯುಕ್ತ ಆಹಾರ ಮತ್ತು ಕರಿದ ಪದಾರ್ಥಗಳು ಮತ್ತು ಶಾಖಾಹಾರಿ ಆಹಾರ ಸೇವನ, ಅತಿಯಾದ ಧೂಮಪಾನ ಮಾಡುವುದು ಮತ್ತು ಮದ್ಯಪಾನ ಮಾಡುವುದು, ಸ್ಪೀರಾ ಅಲ್ಯದ ಉರಿಊತ ನಿರೋಧಕ ಔಷಧಗಳ ಸೇವನ ಅಸಿಡಿಟಿ ಲಕ್ಷಣಗಳು, ಹೊಟ್ಟೆಯಲ್ಲಿ ಉರಿದಂತಾಗುವುದು, ಚಡಪಡಿಕ ವಾಕರಿಕೆ ಉಂಟಾಗುತ್ತದೆ ಹಾಗು ಅಸಿಡಿಟಿಗಾಗಿ ಮನೆ ಮದ್ದುಗಳು ಈ ಕೆಳಗಿದೆ.
ತುಳಸಿ ಎಲೆಗಳು : ತುಳಸಿ ಎಲೆಗಳ ಹಿತವಾದ ಮತ್ತು ನೋವುನಿವಾರಕ ಗುಣಲಕ್ಷಣಗಳು ಅಸಿಡಿಟಿಯ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನೂ ನೀಡುತ್ತದೆ, ಇದು ಹುಣ್ಣು ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಹೊಟ್ಟೆಯ ಮೇಲಾಗುವ ಗ್ಯಾಸ್ಮಿಕ್ ಆಮ್ಮಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದ, 5 ರಿಂದ 6 ತುಳಸಿ ಎಲೆಗಳನ್ನು ಅಗಿಯುವುದರಿಂದ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ, ನೀವು ಸ್ವಲ್ಪ ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿ ಕುದಿಸಿ, ಜೊತೆಯಲ್ಲಿ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದಲೂ ಸಹ ಅಸಿಡಿಟಿಯ ನೋವು ಶಮನವಾಗುತ್ತದೆ.
ಬಾಳೆಹಣ್ಣು : ಬಾಳೆಹಣ್ಣು ಪೊಟ್ಯಾಷಿಯಂ ಅನ್ನು ಹೇರಳವಾಗಿ ಬಂದಿದ್ದು ಹೊಟ್ಟೆಯಲ್ಲಿನ ಆಮ್ಲದ ಮಟ್ಟವನ್ನು ಅಂದರೆ ಆಸಿಡ್ ಮಟ್ಟವನ್ನು ಸಮತೋಲನಗೊಳಿಸುತ್ತದೆ, ಇನ್ನು ಬಾಳೆಹಣ್ಣಿನಲ್ಲಿ ಪ್ರಾಕೃತಿಕವಾದ ಅಂತ ಅಂಟೇಸಿಡ್ ಗಳು ಇರುವುದರಿಂದ ಹೊಟ್ಟೆಯಲ್ಲಿನ ಆಮ್ಲವನ್ನು ಸಮತೋಲನ ಗೊಳಿಸಿ ಬಫರ್ ನಂತೆ ಕೆಲಸ ಮಾಡುತ್ತದೆ.
ಜೀರಿಗೆ : ಇದು ಉತ್ತಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುವ ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿದೆ ಮತ್ತು ಇದು ಆಮ್ಲವನ್ನು ತಟಸ್ಥಗೊಳಿಸುವ ನೂಟ್ರಾಲೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ, ಅಸಿಡಿಟಿಯನ್ನು ಕಡಿಮೆ ಮಾಡಲು ನೀವು ಸ್ಟಲ್ಪ ಜೀರಿಗೆಯನ್ನು ಅಗಿಯಬಹುದು ಅಥವಾ ಸ್ವಲ್ಪ ನೀರಿನಲ್ಲಿ ಜೀರಿಗೆಯನ್ನು ಕುದಿಸಿ ತಣ್ಣಗಾದ ಮೇಲೆ ಕುಡಿಯಬಹುದು.
ಶುಂಠಿ : ಶುಂಠಿಯ ಬೇರು ಉತ್ತಮ ಹೀರುವಿಕೆಗೆ ಸಹಾಯ ಮಾಡುತ್ತದೆ ಮತ್ತು ಲೋಳ ಬಿಡುಗಡೆಗೊಳ್ಳಲು ಸಹ ಉತ್ತೇಜಿಸಿ, ಹತ್ಯೆಯನ್ನು ಹುಣ್ಣುಗಳಿಂದ ರಕ್ಷಿಸುತ್ತದೆ ಮತ್ತು ಹೊಟ್ಟೆಯಲ್ಲಿ ಆಮ್ಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ, ನೀವು ಶುಂಠಿಯ ಒಂದು ಚಿಕ್ಕ ತುಂಡನ್ನು ಅಗೆಯಬಹುದು ಇಲ್ಲವೆಂದರೆ ಅದನ್ನು ಸ್ವಲ್ಪ ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಅಥವಾ ಬೆಲ್ಲವನ್ನು ಹಾಕಿ ಮಾಡಿದ ಕಷಾಯವನ್ನು ಕುಡಿಯಿರಿ.
ಲವಂಗ : ಇದು ಹೊಟ್ಟೆಯಲ್ಲಿ ಗ್ಯಾಸ್ ಆಗುವುದನ್ನು ಕಡಿಮೆ ಮಾಡಿ ಅಸಿಡಿಟಿ ಆಗುವುದನ್ನು ತಪ್ಪಿಸುತ್ತದೆ, ಪುಡಿಮಾಡಿದ ಲವಂಗ ಮತ್ತು ಏಲಕ್ಕಿಯನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ತಿನ್ನುವುದರಿಂದ ಸಹ ಅಸಿಡಿಟಿ ಕಡಿಮೆಯಾಗುತ್ತದೆ.
ಬೆಲ್ಲ : ಇದರಲ್ಲಿ ಹೆಚ್ಚಿನ ಮೆಗ್ನಿಷಿಯಂ ಇದ್ದು, ಆಂತರಿಕ ಶಕ್ತಿಯನ್ನು ಮತ್ತು ಜೀರ್ಣ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ, ಹೊಟ್ಟೆಯ ಕ್ಷಾರೀಯ ಪಕೃತಿಯನ್ನು ಕಾಪಾಡಿ, ಅಸಿಡಿಟಿಯನ್ನು ಕಡಿಮೆ ಮಾಡುತ್ತದ.
ಮಜ್ಜಿಗೆ : ಇದರಲ್ಲಿ ಲಾಕ್ ಆಮ್ಲವು ಹಚ್ಚಾಗಿದ್ದು, ಇದು ಹೂಯಲ್ಲಿನ ಅತಿಯಾದ ಆಮ್ಯತೆಯನ್ನು ಸರಿಪಡಿಸುತ್ತದೆ, ಮಚ್ಛಿಗೆಯಲ್ಲಿ ಕಾಳು ಮೆಣಸು ಅಥವಾ ಕೊಮಿರಿ ಸೊಪ್ಪನ್ನು ಹಾಕಿಯೂ ಸಹ ಕುಡಿಯಬಹುದು.
ಅಡುಗೆ ಸೋಡಾ : ಅಸಿಡಿಟಿಯಿಂದ ಬೇಗ ಗುಣವಾಗಲು ಒಂದು ಗ್ಲಾಸ್ ನೀರಿನಲ್ಲಿ ಚಿಟಿಕೆ ಅಡುಗೆ ಸೋಡಾ ಬೆರಸಿ ಸಹ ಕುಡಿಯಬಹುದು.
ತಣ್ಣಗಿನ ಹಾಲು : ಹಾಲಿನಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಇದ್ದು ಇದು ದೇಹದ ಹೆಚ್ಚಿನ ಆಮ್ಲವನ್ನು ಹೀರಿಕೊಂಡು ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.