ಕಷಾಯಗಳು ಮಾನವ ಆರೋಗ್ಯದ ಕವಚಗಳು ಎಂದರೆ ತಪ್ಪಾಗಲಾರದು, ಪ್ರತಿ ದಿನ ಸಾಧ್ಯವಾಗಿಲ್ಲ ಅಂದರು ವಾರಕ್ಕೆ ಒಮ್ಮೆಯಾದರೂ ಕಷಾಯಗಳನ್ನ ಮಾಡಿಕೊಂಡು ಕುಡಿತೀರಬೇಕು, ಇದರಿಂದ ನಿಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿಯ ಟಾನಿಕ್ ಕೊಟ್ಟಂತೆ ಇರುತ್ತದೆ ಹಾಗು ಹೊರಗಿನ ವಾತಾವರಣದಿಂದ ಯಾವುದೇ ಇತರ ಸಮಸ್ಯೆಗಳು ನಿಮ್ಮನ್ನು ಕಾಡಲು ಸಾಧ್ಯವಿಲ್ಲ, ಅಂತಹ ಮೂರೂ ಆರೋಗ್ಯದಾಯಕ ಹಾಗು ಮನೆಯಲ್ಲೇ ಸುಲಭವಾಗಿ ಮಾಡಿ ಕುಡಿಯುವಂತಹ ಕಷಾಯಗಳನ್ನು ಹೇಗೆ ಮನೆಯಲ್ಲಿ ಮಾಡಬಹುದು ಎಂಬುದರ ಬಗ್ಗೆ ತಿಳಿಸಿದ್ದೇವೆ.
ತುಳಸಿ ಕಷಾಯ ಸಾಮಗ್ರಿಗಳು : ತುಳಸಿ (ಭಾರತೀಯ ತುಳಸಿ) ಎಲೆಗಳು – 10 ಎಲೆಗಳು, ನೀರು – 1 ಕಪ್, ಕಾಳು ಮೆಣಸು – 2 ಕಾಳು (ಪುಡಿಮಾಡಿದ), ಬೆಲ್ಲ – 1 ಟೀಸ್ಪೂನ್ ಚಮಚ.
ಮಾಡುವ ವಿಧಾನ : ಪಾತ್ರೆಯಲ್ಲಿ 1 ಕಪ್ ನೀರು, ತುಳಸಿ ಎಲೆಗಳನ್ನು ಹಾಕಿ, ಪುಡಿಮಾಡಿದ ಮೆಣಸು ಮತ್ತು ಬೆಲ್ಲ ಸೇರಿಸಿ, 5 ರಿಂದ 10 ನಿಮಿಷಗಳ ಕಾಲ, ಮಿಶ್ರಣದ ಬಣ್ಣ ಬದಲಾಗುವವರಗೆ ಕುದಿಸಿ, ಮಿಶ್ರಣವನ್ನು ಶೋಧಿಸಿ ವಯಸ್ಕರಿಗೆ ಬಿಸಿಯಾಗಿ ಮತ್ತು ಮಕ್ಕಳಿಗೆ ಬೆಚ್ಚಗೆ ಕೊಡಬಹುದು, ತುಳಸಿ ಕಷಾಯ ಸಿದ್ಧವಾಗಿದೆ.
ಶುಂಠಿ ಕಷಾಯ : ಬೇಕಾಗುವ ಸಾಮಗ್ರಿಗಳು : ಶುಂಠಿ – 1/2 ಇಂಚು ( ತುರಿದದ್ದು ), ನೀರು – 1 ಕಪ್, ಜೇನು ತುಪ್ಪ – 1 ಟಿ ಚಮಚ, ನಿಂಬೆ – ರಸ 1/2 ಟಿ ಚಮಚ.
ಮಾಡುವ ವಿಧಾನ : ಪಾತ್ರೆಗೆ ನೀರು, ತುರಿದ ಶುಂಠಿ ಸೇರಿಸಿ, ನೀರಿನ ಬಣ್ಣ ಬದಲಾಗುವ ತನಕ ಮಿಶ್ರಣವನ್ನು 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಮಿಶ್ರಣವನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಬೇಕು ನಂತರ ಶೋಧಿಸಬೇಕು, ಇದಕ್ಕೆ ನಿಂಬೆ ರಸ ಮತ್ತು ಜೇನು ತುಪ್ಪ ಮಿಶ್ರಣ ಮಾಡಿ ಸ್ವಲ್ಪ ಬಿಸಿ ಇರುವಂತೆಯೇ ಸೇವಿಸಬೇಕು, ಶುಂಠಿ ಕಷಾಯ ಸಿದ್ಧವಾಗಿದೆ.
ಕರಿಬೇವಿನ ಕಷಾಯ : ಬೇಕಾಗುವ ಸಾಮಗ್ರಿಗಳು : ಒಂದು ಹಿಡಿ ಕರಿಬೇವು, ಎರಡು ಕಪ್ ನೀರು, ಸಣ್ಣ ಲೋಟದಲ್ಲಿ ಹಾಲು, ಒಂದು ಚಮಚ ಬೆಲ್ಲ, ಒಂದು ಲವಂಗ, ಸಣ್ಣ ತುಂಡು ಶುಂಠಿ, ಅರ್ಧ ಚಮಚ ದನಿಯ ಪುಡಿ.
ಮಾಡುವ ವಿಧಾನ : ಮೊದಲು ತೊಳೆದ ಕರಿಬೇವನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ನಂತರ ನೀರು, ಬೆಲ್ಲ, ಲವಂಗ, ಶುಂಠಿ ಹಾಗು ದನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ, ನೀರು ಅರ್ಧ ಕಪ್ ಆದಾಗ ಅದನ್ನು ಕೆಳಗಿಳಿಸಿ ಸೋಸಿ ನಂತರ ಹಾಲಲ್ಲಿ ಬೆರಸಿ ಕುಡಿಯಿರಿ ಇದರಿಂದ ಜೀರ್ಣ ಕ್ರಿಯೆ ಸುಲಭವಾಗಿ ತೂಕ ಕಡಿಮೆಯಾಗುತ್ತದೆ.
ಈ ಕಷಾಯಗಳನ್ನ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ನೆಗಡಿ, ಕೆಮ್ಮುಗಳಂತಹ ಸಮಸ್ಯೆಗಳು ಮಾಯವಾಗುತ್ತವೆ, ಹಾಗು ನರದೌರ್ಬಲ್ಯ ದಂತಹ ಸಮಸ್ಯೆಗಳು ದೂರವಾಗುತ್ತದೆ.