ಸ್ನೇಹಿತರೆ ಕಷ್ಟಗಳು ಹೇಗೆ ಬರುತ್ತದೆ ಯಾವ ಸಮಯದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕಷ್ಟಗಳು ಬಂದಾಗ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಲೇ ಬೇಕಾಗುತ್ತದೆ, ಒಂದು ಟೈಮಲ್ಲಿ ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಮಾಲೀಕರ ಮನೆ ಕೆಲಸಕ್ಕೆ ಸೇರಿಕೊಂಡು ಮನೆ ಕೆಲಸ ಅಂದರೆ ಅವರ ಮನೆಯಲ್ಲಿ ಕಸಗುಡಿಸಿ ಪಾತ್ರೆ ತೊಳೆದು ಉಳಿದೆಲ್ಲ ಕೆಲಸ ಮಾಡಿ ಮುಗಿಸುತ್ತಿದ್ದರಂತೆ ಈ ನಟಿ, ಹೀಗಾಗಿ ಮನೆ ಮಾಲೀಕರು ಇವಳ ಬಳಿ ಮನೆ ಬಾಡಿಗೆಯನ್ನು ಕೇಳುತ್ತಿರಲಿಲ್ಲ ವಂತೆ, ಈ ನಟಿ ಯಾರು ಅಲ್ಲ 2014 ರ ಮಿಸ್ ಕರ್ನಾಟಕ ಹಾಗೂ ಬಿಗ್ ಬಾಸ್ ಸ್ಪರ್ಧಿ ಯಾದ ಕ್ರಿಷಿ ತಾಪಂಡ.
ಉನ್ನತ ಅಭ್ಯಾಸಕ್ಕಾಗಿ ಕೊಡಗಿನಿಂದ ಬೆಂಗಳೂರಿಗೆ ಬಂದ ಈ ನಟಿ, ಕೈಯಲ್ಲಿ ಹಣವಿಲ್ಲದೆ ತುಂಬಾ ಒದ್ದಾಡಿದ ರಂತೆ, ಅದೇ ಸಮಯದಲ್ಲಿ ಕ್ರಿಷಿ ಅವರಿಗೆ ನನ್ನ ಸ್ನೇಹಿತೆಯೊಬ್ಬಳು ಮಿಸ್ ಕರ್ನಾಟಕ ಆಡಿಷನ್ ಗೆ ಹೋಗು ಎಂದು ಸಲಹೆ ನೀಡುತ್ತಾಳೆ, ಇದೇ ಸಮಯದಲ್ಲಿ ತನ್ನ ಕುಟುಂಬದಿಂದ ದೂರ ಉಳಿದಿದ್ದ ಕ್ರಿಷಿ ಬೆಂಗಳೂರಿನ ಪಿಜಿ ಒಂದರಲ್ಲಿ ಸೇರಿಕೊಳ್ಳುತ್ತಾರೆ, ಆಗಲೇ ಪಿಜಿಗೆ ಬಾಡಿಗೆ ಕಟ್ಟಲು ಹಣವಿಲ್ಲದೆ ತುಂಬಾ ಒದ್ದಾಡಿ pg ಮಾಲೀಕರ ಮನೆಯಲ್ಲಿ ಮನೆ ಕೆಲಸ ಮಾಡುವುದು, ಇದೇ ವೇಳೆಯಲ್ಲಿ ಇವರಿಗೆ ಮಿಸ್ ಕರ್ನಾಟಕ ಪಟ್ಟ ಕೂಡ ಒಲಿದು ಬರುತ್ತದೆ.
ಇವರು ತುಂಬಾ ಸ್ವಾಭಿಮಾನದ ಹುಡುಗಿಯಾಗಿ, ತನ್ನ ತಂದೆ ತಾಯಿಯರ ಸಹಕಾರ ಅಷ್ಟಾಗಿ ಅಪೇಕ್ಷೆ ಮಾಡದೆ, ತನ್ನ ಸ್ವಂತ ಶಕ್ತಿಯ ಮೇಲೆ ಬದುಕುತ್ತಾರೆ, ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಕೂಡ ಆಯ್ಕೆಯಾಗುತ್ತಾರೆ, ತಾನು ಮನೆ ಕೆಲಸ ಮಾಡಿ ಇಷ್ಟೆಲ್ಲಾ ಕಷ್ಟ ಪಟ್ಟಿರುವುದು ನನ್ನ ಮನೆಯವರಿಗೆ ಇನ್ನು ತಿಳಿದಿಲ್ಲ ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಮಾಧ್ಯಮಗಳ ಮುಂದೆ ಕ್ರಿಷಿ ಹೇಳಿದ್ದಾರೆ.