ಈ ಕಾರಣಕ್ಕಾಗಿಯೇ ಮನೆಯಲ್ಲಿ ದೀಪ ಹಚ್ಚಿದ ಮೇಲೆ ಕಸ ಗುಡಿಸ ಬಾರದು.

0
1946

ನಮ್ಮ ಹಿರಿಯರು ನಮಗೆ ಅನೇಕ ಬುದ್ಧಿಮಾತುಗಳನ್ನು ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ, ಅಂತಹ ಉತ್ತಮ ಸಲಹೆಗಳ ಬಗ್ಗೆ ನಾವು ಮಾಹಿತಿ ನೀಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಇರುತ್ತೇವೆ, ಅದರಂತೆ ಹಿರಿಯರು ಹೇಳುವ ಈ ಒಂದು ಮಾತು ನಿಮಗೆ ನೆನಪಿರಬಹುದು ಯಾವುದೇ ಕಾರಣಕ್ಕೂ ರಾತ್ರಿ ದೀಪ ಹಚ್ಚಿದ ಮೇಲೆ ಕಸವನ್ನು ಗುಡಿಸಬಾರದು.

ಈ ಮಾತಿನ ಹಿಂದೆ ಯಾವುದೇ ತಾತ್ಪರ್ಯ ವಿಲ್ಲ ಮೂಡ ನಂಬಿಕೆಯು ಇಲ್ಲ ಬದಲಿಗೆ ಒಳ್ಳೆಯ ಜ್ಞಾನವಿದೆ ಹೌದು ಇತ್ತೀಚಿನ ಆಧುನಿಕ ಯುಗದಲ್ಲಿ ವಿದ್ಯುತ್ ಸಂಪರ್ಕವನ್ನು ಮಾಡಿದ ನಂತರ ಪ್ರತಿ ಮನೆಗಳಲ್ಲೂ LED ಲೈಟ್ ಗಳು ಬಂದಿವೆ ಕತ್ತಲಿನಲ್ಲಿ ಅತಿ ಹೆಚ್ಚು ಬೆಳಕುಗಳನ್ನು ನಿಮಗೆ ನೀಡುತ್ತಿದೆ ಆದರೆ ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ ಕತ್ತಲಾದ ನಂತರ ಒಂದು ಸಣ್ಣ ದೀಪವನ್ನು ಹಚ್ಚುತ್ತಿದ್ದರು.

ಹಾಗೂ ಹಿಂದಿನ ಕಾಲದಲ್ಲಿ ವಜ್ರ ವೈಡೂರ್ಯ ಚಿನ್ನದಂತಹ ಆಭರಣಗಳು ಮನೆಯಲ್ಲಿ ಹೆಚ್ಚು ಇರುತ್ತಿದ್ದವು ಸಂಜೆ ಸಮಯದಲ್ಲಿ ಕಸ ಗುಡಿಸುವುದರಿಂದ ದೀಪದ ಬೆಳಕಿನ ಕತ್ತಲೆಯಲ್ಲಿ ಇಂತಹ ಅಮೂಲ್ಯವಾದ ವಸ್ತುಗಳೂ ಕೆಳಗೆ ಬಿದ್ದರೆ ಅವುಗಳನ್ನು ಸಹ ಗುಡಿಸಿ ಆಚೆ ಬಿಸಾಕುವ ಸಾಧ್ಯತೆಗಳು ಅತಿ ಹೆಚ್ಚು ಇರುತ್ತಿದ್ದವು.

ಹಿರಿಯರ ಮತ್ತೊಂದು ಮಾತಿದೆ ಗುಡಿಸಿದ ಕಸವನ್ನು ಸಂಜೆಯ ಮೇಲೆ ಆಚೆ ಬಿಸಾಕುವಂತಿಲ್ಲ, ಈ ಮಾತಿನ ಕಾರಣ ಇಷ್ಟೇ ಗುಡಿಸಿದ ಕಸವನ್ನು ಸಂಜೆ ಮನೆಯಲ್ಲಿ ಗುಡ್ಡೆ ಹಾಕಿದರೆ ಬೆಳಗ್ಗೆ ತಿಪ್ಪೆಗೆ ಬಿಸಾಕುವ ಮುನ್ನ ನಾವು ಸಮಾಧಾನದಿಂದ ಗಮನಿಸಿದರೆ ಅಪ್ಪಿ ತಪ್ಪಿ ಬೆಲೆಬಾಳುವ ವಸ್ತುಗಳೇ ಏನಾದರೂ ಅದರಲ್ಲಿ ಇದ್ದರೆ ಅದನ್ನು ಆಯ್ದುಕೊಂಡು ನಂತರ ಕಸವನ್ನು ತಿಪ್ಪೆಗೆ ಬಿಸಾಕ ಬಹುದು ಎನ್ನುವ ಸದುದ್ದೇಶ ನಮ್ಮ ಹಿರಿಯರದಾಗಿತ್ತು.

ಹಿರಿಯರು ಹೇಳುತ್ತಿದ್ದ ಪ್ರತಿಯೊಂದು ಮಾತಿಗೂ ವೈಜ್ಞಾನಿಕವಾದ ಕಾರಣಗಳು ಇದ್ದೇ ಇರುತ್ತದೆ, ಅಂತಹ ಮಾತುಗಳಿಗೆ ಮೂಢನಂಬಿಕೆಗಳ ಹಲವು ದೃಷ್ಟಿಕೋನಗಳನ್ನು ನೀಡದೆ ನಮ್ಮ ಮುಂದಿನ ಪೀಳಿಗೆಗೂ ಜ್ಞಾನವನ್ನು ಹಂಚುವುದು ನಮ್ಮ ಜವಾಬ್ದಾರಿಯಾಗಿದೆ.

LEAVE A REPLY

Please enter your comment!
Please enter your name here