ಕಳ್ಳರು ನಿಮ್ಮ ವಸ್ತುಗಳನ್ನ ಕದಿಯಲು ಬಳಸುವ ಟ್ರಿಕ್ ಗಳು..!! ಒಮ್ಮೆ ನೋಡಿ

0
1071

ಸಾರ್ವಜನಿಕ ಸ್ಥಳಗಳಲ್ಲಿ ನಮ್ಮನ್ನು ಯಾಮಾರಿಸಿ ವಸ್ತುಗಳನ್ನು ಕದಿಯುವ ಕಳ್ಳರು ಎಷ್ಟರ ಮಟ್ಟಿಗೆ ತೊಡಗಿರುತ್ತಾರೆ ಎಂದರೆ ಯಾವುದೋ ಶಾಲೆಯ ತಮ್ಮ ಕಾಲೇಜಿನಲ್ಲಿ ಕಳ್ಳತನದ ಕೋರ್ಸ್ ಒಂದನ್ನು ಮುಗಿಸಿಕೊಂಡು ಬಂದಿದ್ದಾರೆ ಎನ್ನುವಷ್ಟು ಕಳ್ಳತನದಲ್ಲಿ ತೊಡಗಿರುತ್ತಾರೆ, ಸಾರ್ವಜನಿಕರು ತಮ್ಮದೇ ಆದ ಯಾವುದು ಸಮಸ್ಯೆಗಳ ಬಗ್ಗೆ ಯೋಚನೆ ಮಾಡುತ್ತಾ ತಮ್ಮ ಮನೆ ಅಥವಾ ಆಫೀಸಿನ ದಾರಿಯನ್ನು ತಲುಪುವಷ್ಟರಲ್ಲಿ ಯಾಮಾರಿಸಿ ಕಳ್ಳತನ ಮಾಡುತ್ತಾರೆ, ಹೀಗೆ ಕಳ್ಳರು ಯಾವ ರೀತಿಯಲ್ಲಿ ಜನರನ್ನು ಯಾಮಾರಿಸಿ ಸುತ್ತಾರೆ ಎನ್ನುವುದರ ಬಗ್ಗೆ ತಿಳಿಸಲಾಗಿದೆ.

ಸಾಮಾನ್ಯವಾಗಿ ಡಿಕ್ಕಿ ಹೊಡೆದು ನಿಮ್ಮ ಪರ್ಸನ್ನು ಕರೆಯುತ್ತಾರೆ, ನೀವು ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ನಿಮ್ಮ ಎದುರು ಒಬ್ಬ ಬಂದು ನಿಮಗೆ ಡಿಕ್ಕಿ ಹೊಡೆಯುತ್ತಾನೆ, ನಂತರ ನಿಮ್ಮನ್ನು ಕ್ಷಮೆ ಕೇಳುತ್ತಾ ಕೆಳಗೆ ಬಿದ್ದ ನಿಮ್ಮ ವಸ್ತುಗಳನ್ನು ಎತ್ತಿ ಕೊಡುವಲ್ಲಿ ಸಹಾಯ ಮಾಡುತ್ತಾನೆ, ಇದೇ ಸಮಯವನ್ನು ಕಾಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಹಿಂದೆ ಇಂದ ಬಂದು ನಿಮ್ಮ ಪರ್ಸನ್ನು ಕದಿಯುತ್ತಾನೆ, ಇವರಿಬ್ಬರೂ ಒಂದೇ ಗುಂಪಿನವರು.

ಹೆಚ್ಚಾಗಿ ಈ ಕಳ್ಳರು ಹುಡುಕುವುದು ಇಯರ್ ಫೋನ್ ತೊಟ್ಟವರನ್ನು, ಕಾರಣ ಇಯರ್ ಫೋನ್ ನಲ್ಲಿ ಜೋರಾಗಿ ಹಾಡನ್ನು ಕೇಳುತ್ತಿರುತ್ತೇವೆ ಹಾಗೂ ಆ ಹಾಡಿನಲ್ಲಿ ಮೈ ಮರೆತು ಬಿಡುತ್ತಾರೆ ಇಂತಹ ಸಮಯಗಳನ್ನು ಬಲು ನಾಜೂಕಾಗಿ ಬಳಸಿಕೊಳ್ಳುವ ಕಳ್ಳರು ನಿಮ್ಮ ಅತ್ತಿರ ವಿರುವ ಬೆಲೆಬಾಳುವ ವಸ್ತುಗಳನ್ನು ಹಾಗೂ ಹಣವನ್ನು ಸುಲಭವಾಗಿ ದೋಚುತ್ತಾರೆ.

ಸಾರ್ವಜನಿಕ ವಾಹನಗಳಾದ ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸುವಾಗ ಎಚ್ಚರದಿಂದಿರಬೇಕು, ನೀವೇನಾದರೂ ಬಸ್ಸಿನ ಬಾಗಿಲ ಬಳಿ ನಿಂತಿದ್ದರೆ, ಇನ್ನೇನು ಬಸ್ ಬಾಗಿಲು ಮುಚ್ಚುವ ಸಮಯದಲ್ಲಿ ನಿಮ್ಮ ಬಳಿ ಇರುವ ಉಪಯುಕ್ತ ವಸ್ತುಗಳು ಮೊಬೈಲ್ ಗಳು ಹಾಗೂ ಬ್ಯಾಗ್ ಗಳನ್ನು ಕಿತ್ತು ಕೊಂಡು ಹೋಗುತ್ತಾರೆ, ನೀವು ರಿಯಾಕ್ಟ್ ಮಾಡೋ ಮೊದಲೇ ಬಸ್ಸಿನ ಬಾಗಿಲು ಮುಚ್ಚಿರುತ್ತದೆ.

ಕೆಲವೊಮ್ಮೆ ಅಡ್ರೆಸ್ ಕೇಳುವ ನೆಪದಲ್ಲಿ ನಿಮ್ಮ ವಸ್ತುಗಳನ್ನು ಕದಿಯುವ ಟ್ರಿಕ್ ಬಳಸಿದರೆ ಮತ್ತೊಮ್ಮೆ ಮೈ ಮೇಲೆ ಏನಾದರೂ ಚೆಲ್ಲಿ ವಸ್ತುಗಳನ್ನು ಕದಿಯೋ ಟ್ರಿಕ್ಸ್ ಅನ್ನು ಬಳಸುತ್ತಾರೆ.

ಕೊನೆಯದಾಗಿ ಹಾಗೂ ಹಾಗೂ ಬಹಳ ಮುಖ್ಯವಾಗಿ ಚಿಕ್ಕ ಮಕ್ಕಳನ್ನು ಬಳಸಿ ಕಳ್ಳತನ ಮಾಡಿಸುತ್ತಾರೆ, ನಿಮ್ಮ ಮನಸ್ಸು ಕರಗಿ ಪಾಪ ಚಿಕ್ಕ ಮಗುವಿಗೆ ಸಹಾಯ ಮಾಡಲು ಮುಂದಾದರೆ, ಆ ಕಂದಮ್ಮ ನಿಮಗೆ ತಿಳಿಯದ ರೀತಿಯಲ್ಲಿ ನಿಮ್ಮ ವಸ್ತುವನ್ನು ಕದಿಯುತ್ತಾನೆ.

LEAVE A REPLY

Please enter your comment!
Please enter your name here