ಕರೋನ ವೈರಸ್ ಮನೆಯಿಂದ ಹೊರ ಹೋಗಲು ಬಿಡುತ್ತಿಲ್ಲ, ಶಾಪಿಂಗ್ ಇಲ್ಲ, ವಾಕಿಂಗ್ ಸಹ ಇಲ್ಲ, ದೇಹ ಯಾವುದೇ ಶ್ರಮ ಪಡುತ್ತಿಲ್ಲ ಇದ್ದದ್ದನ್ನು ತಿಂದು ಟಿವಿ ನೋಡಿ ಮಾಲಗ ಬೇಕು ಅಷ್ಟೇ ಹೀಗಿರುವಾಗ ಮನೆಯಲ್ಲೇ ಬಂದಿಯಾಗಿರುವ ಮನುಷ್ಯರ ಮಾನಸಿಕವಾದ ಸಮಸ್ಯೆಯನ್ನು ಹೆದುರಿಸುವ ಜೊತೆಯಲ್ಲೇ ದೈಹಿಕ ಸಮಸ್ಯೆ ಕೂಡ ತಲೆದೂರುತ್ತದೆ.
ದೈಹಿಕ ಸಮಸ್ಯೆ ಎಂದರೆ ಬೊಜ್ಜು, ಹೌದು ಶ್ರಮ ಇಲ್ಲದ ದೇಹದಲ್ಲಿ ಗೊತ್ತಾಗದ ರೀತಿಯಲ್ಲಿ ಬೇಡದ ಬೊಜ್ಜಿನ ಶೇಖರಣೆ ಶುರುವಾಗಿರುತ್ತದೆ, ಇದನ್ನು ಖಂಡಿತವಾಗಿಯೂ ಕಡೆಗಣಿಸುವನಿಲ್ಲಾ, ಹಾಗಂತ ಜಿಮ್ ಗು ಹೋಗುವಂತಿಲ್ಲ, ಮನೆಯಲ್ಲೇ ಕೂತು ಬೊಜ್ಜು ಕರಗಿಸುವ ವಿಧಾನ ಇದೆ ಚಿಂತೆ ಬೇಡ ಆದರೆ ಈ ವಿಧಾನವನ್ನು ಪ್ರಾರಂಭಿಸುವ ಮುನ್ನ ಲಘು ಆಹಾರ ಸೇವನಾ ಪದ್ಧತಿ ಶುರು ಮಾಡಿ, ಎಣ್ಣೆ ಪದಾರ್ಥ ಹಾಗು ಸಕ್ಕರೆ ಬಳಕೆ ಕಡಿಮೆ ಮಾಡಬೇಕು, ಅಕ್ಕಿ ಗೋಧಿ ಬದಲಿಗೆ ರಾಗಿ ಸಿರಿಧಾನ್ಯ ಬಳಕೆ ಮಾಡಿದರೆ ಇನ್ನು ಉತ್ತಮ ಹಾಗು ಶೀಘ್ರ ಫಲ ದೊರೆಯುತ್ತದೆ.
ಪ್ರತಿಯೊಬ್ಬರ ಮನೆಯಲ್ಲಿ ದಿನ ಬಳಸುವ ಸಾಮಗ್ರಿ ಜೀರಿಗೆ ಇದ್ದೇ ಇರುತ್ತದೆ, ಜೀರಿಗೆ ನೀರು ದೇಹದ ಕೊಬ್ಬನ್ನು ಕರಗಿಸುತ್ತದೆ, ಆದ್ದರಿಂದ ಪ್ರತಿ ದಿನ ಒಂದು ಲೋಟ ಜೀರಿಗೆ ನೀರು ಕುಡಿಯಲು ಪ್ರಾರಂಭ ಮಾಡಿ, ಜೀರಿಗೆ ನೀರು ಮಾಡುವ ವಿಧಾನ ತಿಳಿಸುತ್ತೇವೆ ಅದಕ್ಕೂ ಮುಂಚೆ ಇದಕ್ಕೆ ಬೇಕಾಗುವ ಸಾಮಗ್ರಿಗಳು : ಜೇನುತುಪ್ಪ, ನೀರು, ಜೀರಿಗೆ, ನಿಂಬೆಹಣ್ಣು.
ಮಾಡುವ ವಿಧಾನ ಮೊದಲಿಗೆ ಒಂದು ಲೋಟ ನೀರನ್ನು ಕುದಿಯಲು ಬಿಡಿ ನಂತರ ಬಿಸಿನೀರಿಗೆ ಜೀರಿಗೆಯನ್ನು ಹಾಕಿ ನಂತರ ಜೀರಿಗೆ ನೀನು ತಣ್ಣಗಾಗಲು ಬಿಡಿ ನಂತರ ನಿಂಬೆರಸ ಒಂದು ಚಮಚ ಜೇನು ತುಪ್ಪ 1 ಚಮಚ ಹಾಕಿ ಇದನ್ನು ಮಿಶ್ರಿತಮಾಡಿ ಜೀರಿಗೆ ನೀರು ತಯಾರಾಗಿದೆ, ಹೀಗೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿದರೆ ನಿಮ್ಮದೇಹದಲ್ಲಿರುವ ಬೊಜ್ಜನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.