ದಂಟು ಸೊಪ್ಪಿನ ರಸ ಅತ್ಯುತ್ತಮ ತ್ರಾನಿಕ, ಈ ಸೊಪ್ಪಿನಲ್ಲಿ ಕಬ್ಬಿಣದಂಶ ಇದೆ, ಸೊಪ್ಪನ್ನು ಸೂರ್ಯ ಮುಳುಗಿದ ನಂತರ ಗಿಡದಿಂದ ಕಿತ್ತು ತಂದು ಹದವಾಗಿ ಬೇಯಿಸಿ ಸೇವಿಸುವುದರಿಂದ, ಸೊಪ್ಪಿನಲ್ಲಿರುವ ಕಬ್ಬಿಣದಂಶ ನಷ್ಟವಾಗುವುದಿಲ್ಲ, ದಂಟುಸೊಪ್ಪು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಜ್ವರದಿಂದ ನರಳುವ ರೋಗಿಗೆ ದಂಟು ಸೊಪ್ಪಿನ ಸಾರು, ಪಲ್ಯ ಉಣಿಸುವುದರಿಂದ ಜ್ವರ ನಿಲ್ಲುವ ಸಾಧ್ಯತೆ ಉಂಟು, ಅತಿಸಾರದಿಂದ ನರಳುವ ರೋಗಿಗಳಿಗೆ ದಂಟು ಸೊಪ್ಪು ಉತ್ತಮ ಆಹಾರ.
ರಕ್ತದ ಕೊರತೆ, ದೃಷ್ಟಿ ದೋಷ, ಮತ್ತೆ ಮತ್ತೆ ಕಾಡುವ ನಗಡಿ, ಕಾಮಾಲೆ, ಬೆಳವಣಿಗೆಯಲ್ಲಿನ ಕುಂತಿಟ, ಸಂಭೋಗ ಶಕ್ತಿ ಹರಣ, ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಧಿಗಳು ಇತ್ಯಾದಿ ಕಾಯಿಲೆಗಳಿಗೆ ದಂಟುಸೊಪ್ಪಿನ ಸೇವನೆ ಹೆಚ್ಚು ಲಾಭವನ್ನು ಉಂಟುಮಾಡುತ್ತದೆ.
ಹಸಿ ದಂಟು ಸೊಪ್ಪಿನಿಂದ ರಸತೆಗೆದು ತಲೆಯ ಕೂದಲಿಗೆ ಹಚ್ಚುತ್ತಿದ್ದರೆ ಕೂದಲು ಸಮೃದ್ಧಿಯಾಗಿ ಬೆಳೆಯುವುದು, ರೇಷ್ಮೆಯಂತೆ ನುಣುಪಾಗಿರುವಂತೆ ಹಾಗೂ ಹೊಳಪಿನಿಂದ ಕೂಡಿದ ಕಪ್ಪು ಬಣ್ಣಕ್ಕೆ ಬರುವುದು, ಅಪ್ರಾಪ್ತ ವಯಸ್ಸಿನಲ್ಲಿ ನೆರೆಕೂದಲು ಕಾಣಿಸಿಕೊಳ್ಳುವುದಿಲ್ಲ.
ಜೊತೆಯಲ್ಲಿ ದೊಡ್ಡಪತ್ರೆ ಸೊಪ್ಪಿನ ಉತ್ತಮ ಆರೋಗ್ಯ ಗುಣಗಳನ್ನು ನೋಡಿ.
ನಾಲ್ಕೈದು ದೊಡ್ಡಪತ್ರೆ ಎಲೆಗಳನ್ನು ಉಪ್ಪು ಸಹಿತ ಅಗಿದು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
ಒಂದು ವಾರ ಕಾಲ ದೊಡ್ಡಪತ್ರೆ ಸೊಪ್ಪು ತಿನ್ನುವುದರಿಂದ ಅರಿಶಿನ ಕಾಮಾಲೆ ನಿವಾರಣೆಯಾಗುತ್ತದೆ.
ಹಾಗಾಗಿ ದೊಡ್ಡಪತ್ರೆ ಸೊಪ್ಪಿನ ತಂಬುಳಿ ತಯಾರಿಸಿ ತಿನ್ನುವುದರಿಂದ ಕೆಮ್ಮು, ದಮ್ಮು, ಉಬ್ಬಸ, ಅಜೀರ್ಣ, ಹೊಟ್ಟೆಯಲ್ಲಿನ ಸಂಕಟ, ಉನ್ಮಾದ ಇತ್ಯಾದಿ ವ್ಯಾಧಿಗಳಿಂದ ದೂರವಿರಬಹುದು, ಪಿತ್ತದಿಂದ ತಲೆದೂರುವ ಕಾಯಿಲೆಗಳು ಈ ತಂಬುಳಿ ಸೇವಿಸುವುದರಿಂದ ಗುಣವಾಗುತ್ತದೆ.
ಎರಡು ದೊಡ್ಡಪತ್ರೆ ಎಲೆ, ನಾಲ್ಕು ತುಳಸಿ ಎಲೆ, ಒಂದು ವಿಲ್ಯೆದೆಳೆ ಜಜ್ಜಿ, ರಸ ತೆಗೆಯಿರಿ, ಈ ರಸವನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಮಗುವಿಗೆ ಕುಡಿಸಿ ಇದರಿಂದ ನೆಗಡಿ ಗುಣವಾಗುವುದು.
ದೊಡ್ಡಪತ್ರೆ ಮತ್ತು ಅರಿಶಿನ ನುಣ್ಣಗೆ ಅರೆದು ಮೈಗೇ ಹಚ್ಚಿ, ಹತ್ತು ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ, ಆ ದಿನ ದೊಡ್ಡ ಪತ್ರೆ ತಂಬುಳಿ ಹಾಗೂ ದೊಡ್ಡಪತ್ರೆ ಚಟ್ನಿ ಸೇವಿಸಿ, ಈ ಬಗೆಯ ಎರಡು ದಿನಗಳ ಉಪಚಾರದಿಂದ ಮೈಮೇಲಿನ ಪಿತ್ತದ ಗುಳ್ಳೆಗಳು ಅದೃಶ್ಯವಾಗಿ ದೇಹಕ್ಕೆ ಆರಾಮ್ ಎನಿಸುವುದು.