ರಾತ್ರಿ ನಿದ್ರೆ ಬಳಿಕ ಬೆಳಗ್ಗೆ ಎದ್ದೊಡನೆ ಹಲವರಿಗೆ ಕಣ್ಣಿನಲ್ಲಿ ಅತಿಯಾದ ಪಿಸಿರು ಹೊರಬರುತ್ತದೆ ಇನ್ನು ಕೆಲವರಿಗೆ ನಿದ್ರೆ ಮಾಡದಿದ್ದರೂ ಅಂದರೆ ತಮ್ಮ ದಿನಚರಿಗೆ ಸಮಯದಲ್ಲಿ ಕಣ್ಣಿನಿಂದ ಪಿಸುರು ಹೊರ ಬರುತ್ತಿರುತ್ತದೆ ಅಂತಹ ಸಮಸ್ಯೆಗಳು ನಿಮ್ಮವರಿಗೆ ಅಥವಾ ನಿಮಗೇನಾದರೂ ಕಾಡುತ್ತಿದ್ದರೆ ಈ ಮಾಹಿತಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ.
ಮನೆಯ ಅಡುಗೆ ಮನೆಯಲ್ಲಿ ಹುಡುಕಿದರೆ ಸಿಗುವ ಸೌತೆಕಾಯಿಗಳನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಸುಮಾರು ಅರ್ಧ ಗಂಟೆ ನೆನೆಸಿಡಿ ನೀರು ತಣ್ಣಗಾದ ಬಳಿಕ ಶುದ್ಧವಾದ ಹತ್ತಿಯನ್ನು ಅದರಲ್ಲಿ ಅದ್ದಿ ಕಣ್ಣಿನ ಸುತ್ತಲೂ ಮಸಾಜ್ ಮಾಡಿ ನಂತರ ನೀರಿನ ಹತ್ತಿಯನ್ನು ಎರಡು ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟುಕೊಂಡು ಮಲಗಿಬಿಡಿ.
ಅಥವಾ ನಿಮ್ಮ ಮನೆಯ ಹೊರಾಂಗಣದಲ್ಲಿ ಆಲೋವೇರ ಗಿಡವನ್ನು ನೀವು ಬೆಳೆದಿದ್ದರೆ ಇನ್ನೂ ಉತ್ತಮ ಕಾರಣ ಅಲೋವೆರಾದ ನೈಸರ್ಗಿಕ ಜಲ್ ನಿಮಗೆ ಬಹಳ ಉಪಕಾರಿ ಅಲೋವೀರ ಜಲ್ ಅನ್ನು ನಿಮ್ಮ ಕಣ್ಣಿನ ಸುತ್ತಲೂ ಸವರಿ ಸ್ವಲ್ಪ ಸಮಯ ವಿಶ್ರಮಿಸಿದರು ಸಾಕು ಮುಂದೆ ನಿಮಗೆ ಕಣ್ಣಿನ ಪಿಸಿರು ಸಮಸ್ಯೆ ಆದಷ್ಟು ಹತೋಟಿಗೆ ಬರುತ್ತದೆ.
ಇನ್ನು ಸುಲಭವಾದ ವಿಧಾನವೆಂದರೆ ಜೇನುತುಪ್ಪ ಹಾಗೂ ನೀರು ಬೆರೆಸಿ ಅದನ್ನು ಕಣ್ಣಿನ ರೆಪ್ಪೆಯ ಮೇಲೆ ಹತ್ತಿಯಿಂದ ಲೇಪಿಸಬಹುದು ಹಾಗೂ ರಾತ್ರಿ ಮಲಗುವ ಮುಂಚೆ ರೋಜ್ ವಾಟರ್ ಮಸಾಜ್ ಮಾಡುವುದರಿಂದ ಪಿತ್ತದಿಂದ ಕಾಡುವ ಪಿಸುರು ಸಮಸ್ಯೆ ಕಡಿಮೆಯಾಗುತ್ತದೆ ಕ್ಯಾರೆಟ್ ಜ್ಯೂಸ್ ದಿನಕ್ಕೆರಡು ಬಾರಿ ಕುಡಿಯುವುದರಿಂದಲೂ ಈ ಸಮಸ್ಯೆಯನ್ನು ನೀವು ಹತೋಟಿಗೆ ತರಬಹುದು.
ರಾತ್ರಿ ಮಲಗುವ ಮೊದಲು ನೀರಿನಲ್ಲಿ ಕೊತ್ತಂಬರಿ ಬೀಜವನ್ನು ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕಣ್ಣಿನ ಪಿಸುರು ಸಮಸ್ಯೆ ಕಡಿಮೆಯಾಗುತ್ತದೆ ಅಥವಾ ಬೆಟ್ಟದ ನಲ್ಲಿಕಾಯಿ, ಅಳಲೇಕಾಯಿ ಹಾಗೂ ತಾರೆಕಾಯಿ ಇವುಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಕಷಾಯ ಮಾಡಿ ನಂತರ ಸೋಸಿಕೊಂಡು ಕಣ್ಣಿನ ಸುತ್ತಲೂ ಮಸಾಜ್ ಮಾಡಿದರೆ ಬಿಳಿ ಕಣ್ಣಿನ ಪಿಸಿರು ಕಡಿಮೆಯಾಗುತ್ತದೆ.
ಅತಿಮುಖ್ಯವಾಗಿ ಬೆಳಿಗ್ಗೆ ಎದ್ದೊಡನೆ ಕಣ್ಣಿನ ಪಿಸಿರು ಅತಿಯಾಗಿ ಕಣ್ಣುರೆಪ್ಪೆ ತಡೆಯಲು ಸಾಧ್ಯವಾಗುತ್ತಿಲ್ಲವಾದರೆ ಮೊದಲು ಬೆಚ್ಚಗಿನ ಬಿಸಿನೀರಿನಲ್ಲಿ ಕಣ್ಣುಗಳನ್ನು ನಿಧಾನವಾಗಿ ತೊಳೆಯಿರಿ ಇದರಿಂದ ಕಣ್ಣಿಗೆ ಯಾವುದೇ ಅಪಾಯವಾಗುವುದಿಲ್ಲ.