ಕರಿಬೇವು ತನ್ನ ಸುಗಂಧಪುರಿತ ಎಲೆಗಳಿಂದಾಗಿ ಬಹು ಪ್ರಾಮುಖ್ಯ ಪಡೆದಿದೆ. ಎಲೆಗಳನ್ನು ಹಲವಾರು ಬಗೆಯ ಅಡಿಗೆಯ ಕೆಲಸಗಳಲ್ಲಿ ಉಪಯೋಗಿಸುವುದು ಎಲ್ಲರಿಗೂ ತಿಳಿದದ್ದೇ. ಎಲೆಗಳ ರಾಸಾಯನಿಕ ಸಂಯೋಜನೆ ಈ ರೀತಿ ಇದೆ: ತೇವಾಂಶ 66.3%; ಪ್ರೋಟೀನು 6.1%; ಕೊಬ್ಬು 1.0%; ಸಕ್ಕರೆ-ಪಿಷ್ಟದ ಅಂಶ 16.0%; ನಾರಿನ ಅಂಶ 6.4%; ಲವಣಾಂಶ 4.2%; ಹಾಗೂ ಪ್ರತಿ 100 ಗ್ರಾಂ. ಎಲೆಗಳಲ್ಲಿ 810 ಮಿಗ್ರಾಂ. ಕ್ಯಾಲ್ಸಿಯಂ, 600 ಮಿಗ್ರಾಂ. ರಂಜಕ. 3.1 ಮಿಗ್ರಾಂ. ಕಬ್ಬಿಣ, 12,600 ಐ. ಯು ಕ್ಯಾರೋಟೀನ್ (ಎ ಜೀವಾತು ರೂಪದಲ್ಲಿ), 4 ಮಿಗ್ರಾಂ, ಸಿ ಜೀವಾತು. ಇವಲ್ಲದೆ ಹಲವಾರು ಬಗೆಯ ಅಮೈನೋ ಅಮ್ಲಗಳೂ ಇವೆ.
ಅತಿಯಾದ ಬಾಯಾರಿಕೆ ಅಥವಾ ಉಷ್ಣ ಸಮಸ್ಯೆಗಳು ನಿಮ್ಮನ್ನು ಕಾಡುವಾಗ ಮತ್ತು ಜ್ವರದ ಸಮಸ್ಯೆ ನಿಮ್ಮನ್ನು ಕಾಡುವಾಗ ಕರಿಬೇವಿನ ಕಷಾಯವನ್ನು ಕುಡಿಯಬೇಕು.
ದೇಹತೂಕ ಹೆಚ್ಚಿದ್ದವರು ಬೊಜ್ಜನ್ನು ಕರಗಿಸಲು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕರಿಬೇವಿನ ಎಲೆ(10ರಿಂದ 20) ತಿಂದರೆ ಸುಲಭವಾಗಿ ಕರಗಿಸ ಬಹುದು.
ಮಧುಮೇಹ ಸಮಸ್ಯೆ ಇಂದ ಬಳಲುತ್ತಿದ್ದರೆ ದಿನಕ್ಕೆ 10 ಎಲೆಗಳನ್ನು ಬೆಳಗ್ಗೆ ತಿನ್ನಬೇಕು.
ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿಂದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.
ಕರಿಬೇವಿನ ಮರದ ತೊಗಟೆಯ ಒಂದು ಚಮಚೆ ಪುಡಿಯನ್ನು ನೀರಲ್ಲಿ ಬೆರೆಸಿ ಸೇವಿಸಿದರೆ ‘ಎಸಿಡಿಟಿ” ಮಂಗಮಾಯವಾಗುತ್ತದೆ.
ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆಬರುವುದನ್ನು ತಡೆಯಬಹುದು.(ರಸ ತಯಾರಿಸುವಾಗ ಎಚ್ಚರ ಅವಶ್ಯ, ಸ್ವಚ್ಛತೆ ಬಹುಮುಖ್ಯ.)
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.