ಕೂದಲಿಗೆ ಸಂಭಂದಿಸಿದ ಯಾವುದೇ ಸಮಸ್ಯೆ ಇದ್ದರು ಇಲ್ಲಿದೆ ಅದಕ್ಕೆ ಅತಿ ಸುಲಭವಾದ ಪರಿಹಾರಗಳು!

0
1217

ಕೂದಲು ಸಂಪಾಗಿ ಬೆಳೆಯಬೇಕು ಬಳಸದೆ ಒಣಗಿದ ಕರಿಬೇವು ನೆಲ್ಲಿಕಾಯಿ ಮುಂತಾದುವುಗಳನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ ದಿನನಿತ್ಯ ಬಳಸಿ ಕೂದಲು ಸೊಂಪಾಗಿ ಬೆಳೆಯುತ್ತದೆ, ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆ ಹಣ್ಣನ್ನು ಹಚ್ಚಿ ಅರ್ಧಗಂಟೆ ಅರ್ಧಗಂಟೆ ಹಚ್ಚಿ ತಿಕ್ಕಿ ಸ್ನಾನ ಮಾಡಿ ನಿಮ್ಮ ಕೂದಲು ಪಳಪಳನೆ ಹೊಳೆಯುತ್ತ ಹುಳುಸಾಗಿ ಸುಂದರವಾಗಿ ಕಾಣಿಸುತ್ತದೆ ಅಲ್ಲದೆ ಉದುರು ಉದುರಾಗಿರದೆ ಜಿಡ್ಡನ್ನು ತೊಲಗಿಸುತ್ತದೆ.

ತಲೆ ಕೂದಲು ಉದುರಲು ಹಲವು ಕಾರಣಗಳುಂಟು ಸತ್ವಪೂರ್ಣ ಆಹಾರ ಕೊರತೆ ಕುಟುಂಬ ನಿಯಂತ್ರಣ ಮಾತ್ರೆಗಳ ಬಳಕೆ ಮಗುವನ್ನು ಹೆರುವುದು ವಿಪರೀತ ಡಯಟ್ ಹೀಗೆ ಯಾವುದೋ ಒಂದು ಕಾರಣವಿರಬಹುದು ಸೂಕ್ತ ಆರೈಕೆ ಮತ್ತು ಆಹಾರದಿಂದ ಕೂದಲನ್ನು ಸಂರಕ್ಷಿಸಬಹುದು.

ಮಂದಾರ ಹೂವಿನ ಗಿಡದ ಎಲೆಯನ್ನು ತಲೆಗೆ ಹಚ್ಚಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು ಕೂದಲು ಉದುರುವುದು ನೆರೆ ಬರುವುದು ಹೋಗುತ್ತದೆ ಮತ್ತು ಕೂದಲು ಕಪ್ಪಾಗಿ ಉದ್ದವಾಗಿ ಬೆಳೆಯುತ್ತದೆ ಮಂದಾರ ಎಲೆಯಿಂದ ತಲೆಗೆ ಅಭ್ಯಂಜನ ಮಾಡಿದರೆ ಮೆದುಳಿಗೂ ಒಳ್ಳೆಯದು, ತಲೆಗೆ ಅಭ್ಯಂಜನ ಸ್ನಾನ ಮಾಡುವುದರಿಂದ ತಲೆ ಕೂದಲು ಸೊಂಪಾಗಿ ಬೆಳೆಯುವುದಲ್ಲದೆ ತಲೆ ಮತ್ತು ಮೆದುಳಿಗೆ ಒಳ್ಳೆಯದು.

ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡಿದ ಮೇಲೆ ಎರಡು ಚಂಬು ಕಣ್ಣೀರಿಗೆ ನಿಂಬೆಕಾಯಿಯ ಒಂದು ಕೋಲು ರಸ ಹಿಂಡಿ ತಲೆಯ ಮೇಲೆ ಹಾಕಿಕೊಂಡರೆ ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ಕೂದಲು ಮೃದು ಮತ್ತು ಹೊಳಪು ನಿಂಬೆ ಹಣ್ಣಿನಿಂದ ಬರುತ್ತದೆ ಮೇಲಾಗಿ ಬಿಸಿ ತಣ್ಣೀರು ಹಿಂದೆ ಹಿಂದೆಯೇ ತಗುಲುವುದರಿಂದ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

ಕೂದಲು ಗುಂಗುರಾಗಿ ಅಂದವಾಗಿ ಕಾಣಬೇಕ, ಬೆಳ್ಳುಳ್ಳಿಯ ಹೊಟ್ಟನ್ನು ಸುಟ್ಟು ಬೂದಿಯನ್ನು ಆಲಿವ್ ಎಣ್ಣೆಯಲ್ಲಿ ಬೆರೆಸಿ ಪ್ರತಿನಿತ್ಯ ಹಚ್ಚಿಕೊಂಡರೆ ಕೂದಲು ಉದುರುವುದಿಲ್ಲ, ಮತ್ತು ಕೂದಲು ವಿಶಾಲವಾಗಿ ಬೆಳೆಯುತ್ತದೆ ಹಾಗೂ ಕೂದಲು ಗುಂಗುರಾಗಿ ಅಂದವಾಗಿ ಕಾಣುತ್ತದೆ.

ಕೂದಲುಗಳಿಗೆ ಜಿಡ್ಡು ದೊರಕುವುದು ಅವಶ್ಯಕವಾಗಿದೆ, ಇದನ್ನು ಪೂರೈಸಲು ರಾತ್ರಿ ಮಲಗುವ ಮುಂಚೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಬುಡದಲ್ಲಿ ಹಚ್ಚಿ ನಯವಾಗಿ ತಿಕ್ಕಬೇಕು, ಜೇನುತುಪ್ಪಕ್ಕೆ ಅದರ ಮೂರು ಪಟ್ಟು ಕೊಬ್ಬರಿಎಣ್ಣೆ ಬೆರೆಸಿ ಈ ಮಿಶ್ರಣವನ್ನು ಒಂದು ದಿನ ಹಾಗೆಯೇ ಇಡಿ, ಮಾರನೆಯ ದಿನ ತಲೆ ತೊಳೆಯುವ ಮುಂಚೆ ಇದನ್ನು ಚೆನ್ನಾಗಿ ಹಚ್ಚಿಕೊಳ್ಳಿ, ಒಂದು ಅಥವಾ ಎರಡು ಗಂಟೆಗಳ ನಂತರ ಸೀಗೇಕಾಯಿಯಿಂದ ತಲೆಗೆ ಸ್ನಾನ ಮಾಡಿ.

ಕೂದಲಿನ ಕಾಂತಿಯನ್ನು ಹೆಚ್ಚಿಸಲು ನೆಲ್ಲಿಯ ಕಟ್ಟನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಹಾಕಿ ಮರುದಿನ ಚೆನ್ನಾಗಿ ಕಿವುಚಿ ನೀರಿನಿಂದ ಕೂದಲನ್ನು ತೊಳೆಯಿರಿ, ಇದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.

ಕೂದಲು ಸುಂದರವಾಗಿ ಕಾಣಲು ಒಂದು ಬಟ್ಟಲಿಗೆ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಇದಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ, 1 2 ಚಮಚ ಗ್ಲಿಸರಿನ್ ಅನ್ನು ಹಾಕಿ ಎಲ್ಲವನ್ನೂ ಕಲಿಸಿ ಬುರುಡೆ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ನಿಂಬೆ ರಸದೊಂದಿಗೆ ತಲೆಗೆ ಸ್ನಾನ ಮಾಡಿದರೆ ಕೂದಲು ಕಾಂತಿಯುತವಾಗಿ ಬೆಳೆಯುತ್ತದೆ ಮತ್ತು ನೋಡಲು ಸುಂದರವಾಗಿ ಕಾಣುತ್ತದೆ.

ಒಂದು ಲೋಟ ಬಿಸಿ ನೀರಿನಲ್ಲಿ ಹಿಡಿಯಷ್ಟು ತುಳಸಿ ಎಲೆಯನ್ನು ಹಾಕಿ ಕುದಿಸಿ ಅದಕ್ಕೆ 2 ಚಮಚ ಚಹಾದ ಸೊಪ್ಪನ್ನು ಹಾಕಿ ಪುನಃ ಎರಡು ಮೂರು ನಿಮಿಷ ಕುದಿಸಿ ನಂತರ ಶೋಧಿಸಿ ತಯಾರಿಕೆಯನ್ನು ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿರಿ, ತಲೆ ಕೂದಲು ಗಟ್ಟಿಯಾಗಿ ನೆಲೆಯೂರಲು ತಲೆಯನ್ನು ನಿತ್ಯವೂ ಮಸಾಜ್ ಮಾಡಬೇಕು ಇದು ಒಂದು ರೀತಿಯ ವ್ಯಾಯಾಮ ಕೂದಲಿನ ಬೇರಿಗೆ ರಕ್ತ ಸರಳವಾಗಿ ಹರಿಯುತ್ತದೆ.

ಕೂದಲು ಉದುರುತ್ತಿದೆಯೇ, ಅರ್ಧ ತೆಂಗಿನಕಾಯಿಯನ್ನು ತುರಿದು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕಲಕಿ ಸೋಸಿ ಹಾಲು ಮತ್ತು ನಿಂಬೆ ರಸ ಸೇರಿಸಿ ನಂತರ ಇದನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿರಿ, ತುಸು ಸಮಯದ ನಂತರ ತಲೆ ಸ್ನಾನ ಮಾಡಿದೆ ಇದರಿಂದ ಉದುರುವ ಕೂದಲು ನಿಲ್ಲುತ್ತದೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಸೆಲೆರಿ ಸೂಪ್ಪನ್ನು ನೀರಿನಲ್ಲಿ ಕುದಿಸಿ ಸೋಸಿ ನಿಂಬೆರಸ ಹಿಂಡಿ ಇದರಿಂದ ತಲೆ ತೊಳೆಯಿರಿ ಕೂದಲು ಉದ್ದವಾಗಿ ಬೆಳೆಯುತ್ತದೆ, ತಲೆಯಲ್ಲಿ ಹೊಟ್ಟು ಹೆಚ್ಚಾಗಿದೆ, ಹುಣಸೇ ನೀರಿಗೆ ಸ್ವಲ್ಪ ಬೆಲ್ಲದ ಹುಡಿ ಸೇರಿಸಿ ಕುದಿಸಿ ತಲೆಗೆ ಹಚ್ಚಿ ಸ್ನಾನ ಮಾಡಿ ಹೊಟ್ಟು ನಿವಾರಣೆ ಆಗುವುದು, ಕಡಲೆಹಿಟ್ಟು ಮತ್ತು ಮೊಸರು ಇವುಗಳನ್ನು ಸೇರಿಸಿ ತಲೆ ಕೂದಲನ್ನು ತೊಳೆಯಿರಿ ಕೂದಲಿನ ಕಾಂತಿ ಹೆಚ್ಚುತ್ತದೆ.

ಕೇಶದ ತುದಿಗಳು ಸೀಳಿದರೆ ತುದಿಯನ್ನು ಕತ್ತರಿಸಿ ಇತರ ಉಪಚಾರವನ್ನು ಮಾಡಿರಿ ಕೇವಲ ಸುಳಿದಾಗ ಕತ್ತರಿಸುವ ಪರಿಪಾಠವನ್ನು ಮಾಡಿಕೊಳ್ಳಬೇಕು, ಒಡೆದ ಹಾಲನ್ನು ಚೆಲ್ಲ ದಿರಿ ಇದರ ನೀರನ್ನು ಕೂದಲನ್ನು ತೊಳೆಯಲು ಬಳಸಿ ಇದೊಂದು ಪ್ರೋಟೀನ್ ಯುಕ್ತ ಉತ್ತಮವಾದ ಕೂದಲನ್ನು ತೊಳೆಯುವ ವಿಧಾನ ವಾಗಿರುತ್ತದೆ.

ತಲೆ ಕೂದಲು ಹಸಿಯಾಗಿರುವಾಗ ಬಾಚಬಾರದು ನಿತ್ಯದಲ್ಲಿ ತಲೆಯನ್ನು ಎರಡು ಬಾರಿ ಬಾಚಿಕೊಳ್ಳಿ ತೊಡಕಾಗಿರುವ ಕೂದಲನ್ನು ಕೈ ಬೇರುಗಳಿಂದ ನಿಧಾನವಾಗಿ ಬಿಡಿಸಿ ಕೂದಲನ್ನು ಕೇಳಬೇಡಿ, ನಿತ್ಯ ಉಪಯೋಗಿಸುವ ಬಾಚಣಿಗೆಯನ್ನು ಹಳೆಯ ಹಲ್ಲು ತಿಕ್ಕುವ ಬ್ರಷ್ ನಿಂದ ಶುಚಿಗೊಳಿಸಿ ನಂತರ ಶಾಂಪು ನಿಂದ ಬೆಚ್ಚಗಿನ ನೀರಿನಿಂದ ತೊಳೆಯಿರಿ.

LEAVE A REPLY

Please enter your comment!
Please enter your name here