ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ನಾವು ಆಧುನಿಕತೆಗೆ ಎಷ್ಟು ಮೊರೆ ಹೋಗುತ್ತಿದ್ದೇವೆ ಅಷ್ಟೇ ನಮ್ಮ ಜೀವನ ಬದಲಾಗು ತ್ತಿದೇ, ಹಿಂದಿನ ಕಾಲದಲ್ಲಿ ಜನರು ಯಾವುದೇ ತೊಂದರೆಗಳು ಇಲ್ಲದೆ ನೂರು ವರುಷ ಬದುಕುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ 30 ವರ್ಷದಲ್ಲಿ ಸಕ್ಕರೆ ಕಾಯಿಲೆ, ಬಿಪಿ, ಕ್ಯಾನ್ಸರ್, ಹಾರ್ಟ್ ಅಟ್ಯಾಕ್ ಈ ರೀತಿಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ, ಇದರ ಬಗ್ಗೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ? ಯಾಕೆ ಹೀಗೆಲ್ಲ ಆಗುತ್ತಿದೆ ಮತ್ತು ಯಾಕೆ ನಮಗೆ ಈ ರೀತಿಯ ಸಮಸ್ಯೆಗಳು ಕಾಡುತ್ತಿದೆ ಅಂತ, ಇದು ತುಂಬಾ ಸುಲಭ ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯ ಮುಂದೆ ಯಾವುದಾದರೂ ಒಂದು ಮರ ಇದ್ದೇ ಇರುತ್ತಿತ್ತು, ಆದರೆ ಈಗಿನ ಮನೆಗಳ ಮುಂದೆ ತಮ್ಮ ವಾಹನಗಳನ್ನು ನಿಲ್ಲಿಸುವ ಜಾಗ ಮಾತ್ರ ಇರುತ್ತದೆ. ಅದರಲ್ಲೂ ಮೊದಲು ಮನೆಯ ಮುಂದೆ ಬೇವಿನ ಮರ ಹಾಗೂ ಪೇರಲೆ ಹಣ್ಣು ( ಚೇಪೆಕಾಯಿ) ಮರ ಇದ್ದೇ ಇರುತ್ತಿದ್ದವು.
ಒಮ್ಮೆ ನಿಮ್ಮ ಮನೆಯಲ್ಲಿ ಅಜ್ಜ-ಅಜ್ಜಿ ಇದ್ದರೆ ಕೇಳಿ ನೋಡಿ ಮುಖದ ಮೇಲೆ ಬರುವ ಗುಳ್ಳೆಗಳು ಅಂದರೆ ಪಿಂಪಲ್ಸ್ ಗಳಿಗೆ ಏನು ಮಾಡಬೇಕು ಎಂದು ಅದಕ್ಕೆ ಅವರು ಹೇಳುವುದು ಬೇವಿನ ಎಲೆಯ ಪೇಸ್ಟ್ ಅನ್ನು ಅಚ್ಚು ಎಂದು ಅಷ್ಟೇ ಅಲ್ಲ ಡಯಾಬಿಟಿಸ್ ಅಂದರೆ ಸಕ್ಕರೆ ಕಾಯಿಲೆ ಬಗ್ಗೆ ಕೇಳಿದರೆ ಇವರು ಹೇಳುವ ಮದ್ದು ಪೇರಳೆ ಮರದ ಎಲೆಗಳನ್ನು ಹೌದು ಸ್ನೇಹಿತರೆ ನಾವು ಎಷ್ಟು ಹಸಿರಿನಿಂದ ದೂರ ಹೋಗುತ್ತೇವೆ ಅಷ್ಟೇ ಅನಾರೋಗ್ಯಕ್ಕೆ ಹತ್ತಿರವಾಗುತ್ತದೆ, ದಿನದಲ್ಲಿ ಎರಡು ಗಂಟೆ ಹಸಿರಿನ ನಡುವೆ ಸಮಯ ಕಳೆದರೆ ಆರೋಗ್ಯಕ್ಕೆ ಉತ್ತಮ ಲಾಭಗಳು ಸಿಗುತ್ತವೆ, ಅಷ್ಟೇ ಅಲ್ಲದೆ ನಮ್ಮ ಕಣ್ಣು ಹಸಿರನ್ನು ಹೆಚ್ಚಾಗಿ ನೋಡುವುದರಿಂದ ದೃಷ್ಟಿ ಶಕ್ತಿ ಹೆಚ್ಚುತ್ತದೆ ಇದನ್ನು ಅನೇಕ ಸಂಶೋಧನೆಗಳು ಕೂಡ ದೃಢಪಡಿಸಿವೆ.
ಇಂದು ನಾವು ನಿಮಗೆ ಸೀಬೆ ಹಣ್ಣಿನ ಬಗ್ಗೆ ಅಲ್ಲ ಅದರ ಎಲೆಯ ಬಗ್ಗೆ ಹಾಗೂ ಅದರ ಉಪಯುಕ್ತವಾದ ಔಷಧಿ ಗುಣಗಳ ಬಗ್ಗೆ ತಿಳಿಸಿಕೊಡುತ್ತೇವೆ, ಒಂದು ವೇಳೆ ನೀವು ಖಾಲಿ ಹೊಟ್ಟೆಯಲ್ಲಿ ಪೇರಳೆ ಮರದ ಎಲೆಯನ್ನು ತಿಂದರೆ ಯಾವ ರೀತಿಯಲ್ಲಿ ನಿಮ್ಮ ದೇಹದಲ್ಲಿ ಇರುವ ಹಲವು ಕಾಯಿಲೆಗಳನ್ನು ದೂರ ಮಾಡಬಹುದು ನೋಡೋಣ.
ಪ್ರತಿದಿನ ಮೂರು ಪೇರಳೆ ಮರದ ಎಲೆಯನ್ನು ಹಲ್ಲು ಉಜ್ಜುವ ಮೊದಲೇ ತಿಂದರೆ ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹಾಗೂ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಕೂಡ ಇದೆ ಆದ್ದರಿಂದ ಕ್ಯಾನ್ಸರ್ನಂತಹ ಬಹುದೊಡ್ಡ ರೋಗದಿಂದಲೂ ಕಾಪಾಡುತ್ತದೆ, ಇದರಲ್ಲಿ ಆಂಟಿ-ಬ್ಯಾಕ್ಟಿರಿಯಾ ಪ್ರಾಪರ್ಟಿ ಮತ್ತು ಆಂಟಿ ಇನ್ಫಾಮೇಟರಿ ಗುಣ ಇರುವುದರಿಂದ ನಮ್ಮನ್ನು ಬ್ಯಾಕ್ಟೀರಿಯಾದಿಂದ ಹಾಗೂ ಯಾವುದೇ ರೀತಿಯ ಅಲರ್ಜಿಯಿಂದ ಕಾಪಾಡುತ್ತದೆ, ಇನ್ನೂ ಸೂಕ್ಷ್ಮವಾಗಿ ಹೇಳುವುದಾದರೆ ಎಲೆಯನ್ನು ಪ್ರತಿದಿನ ತಿನ್ನುವುದರಿಂದ ಡೆಂಗ್ಯೂ ಜ್ವರ ದಿಂದಲೂ ಪಾರಾಗಬಹುದು, ಒಂದು ವೇಳೆ ಡೆಂಗ್ಯೂ ಜ್ವರದಿಂದ ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಬಳಲುತ್ತಿದ್ದರೆ ಪ್ರತಿದಿನ ಬೆಳಗ್ಗೆ ಏಳರಿಂದ ಎಂಟು ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ನಂತರ ಎಲೆಗಳನ್ನು ಸೋಸಿಕೊಂಡು ಬೇಕಿದ್ದರೆ ಸ್ವಲ್ಪ ಜೇನನ್ನು ಬೆರೆಸಿ ಕುಡಿಸುವುದರಿಂದ ಜ್ವರ ಬೇಗ ಕಡಿಮೆಯಾಗುತ್ತದೆ.