ರಕ್ತದ ಒತ್ತಡ ಅಥವಾ ಬ್ಲಡ್ ಪ್ಲೇಶರ್ ನಂತಹ ಸಮಸ್ಯೆ ಇದ್ದವರು ತಮ್ಮ ದೈನಂದಿನ ಆಹಾರ ಸೇವನೆಯ ಮೇಲೆ ಬಹಳ ಗಮನವನ್ನು ನೀಡಬೇಕು, ಯಾವುದೇ ಕಾರಣಕ್ಕೂ ಸೋಡಿಯಂ ನಂತಹ ಅಂಶಗಳು ಇರುವ ಪದಾರ್ಥಗ ಳಿಂದ ದೂರವಿದ್ದಷ್ಟೂ ಬಹಳ ಒಳ್ಳೆಯದು, ಇಂದು ಬಿಪಿ ಇದ್ದವರು ಯಾವ ಆಹಾರಗಳ ಮೇಲೆ ಕಡಿವಾಣ ಆಕಬೇಕು ಎನ್ನುವುದರ ಬಗ್ಗೆ ತಿಳಿಯೋಣ.
ಪಿಜ್ಜಾಗಳು : ಚಿಕನ್ ಸ್ಟ್ರೈಪ್ಸ್ ಮತ್ತು ಐಸ್ ಕ್ರೀಮ್ ಗಳು – ಮೊದಲನೆಯದಾಗಿ ಫ್ರೀಜರ್ ಗಳಲ್ಲಿ ಇಡುವಂತಹ ಅಹಾರಗಳ ತಾಜಾತನವನ್ನು ಕಾಪಾಡಲು ಸೋಡಿಯಂ ಬಳಸುತ್ತಾರೆ, ಸೋಡಿಯಂ ಎಂದರೆ ಉಪ್ಪು ಇದು BP ಹೆಚ್ಚಾಗುವಂತೆ ಮಾಡುತ್ತದೆ.
ಚಾಕೊಲೇಟ್ : ಚಾಕೊಲೇಟ್ ನಲ್ಲಿ ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚಿರುವುದು ಸರ್ವೇ ಸಾಮಾನ್ಯ ಇದು ದೇಹದ ಸಕ್ಕರೆ ಮಟ್ಟವನ್ನು ಹೆಚ್ಚಿಸಿ ಅನಾರೋಗ್ಯ ಉಂಟುಮಾಡುತ್ತದೆ ಇದಲ ಬದಲಾಗಿ ನೀವು ಹಣ್ಣುಗಳನ್ನೂ ಸೇವಿಸುವುದು ಉತ್ತಮ ಯಾಕೆಂದರೆ ಇದರಲ್ಲಿ ಹೆಚ್ಚಿನ ಫೈಬರ್ ಮತ್ತು ಪೊಟಾಷಿಯಂ ಇರುತ್ತದೆ.
ತಂಪು ಪಾನಿಯಾ : ಇದರಲ್ಲೂ ಸಹ ಮೇಲೆ ತಿಳಿಸಿದ ಚಾಕೊಲೇಟ್ ನಂತೆಯ ಇವುಗಳನ್ನು ಪಶ್ಚರಿಕರಿಸಲು ಸೋಡಿಯಂಗಳ ಅಧಿಕ ಬಳಕೆಯಾಗುತ್ತದೆ ಮತ್ತು ಇದರಲ್ಲೂ ಸಹ ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚಿರುತ್ತದೆ.
ಮಧ್ಯವೆಸನ : ಒಂದು ವೇಳೆ ನೀವೇನಾದರೂ ಮದ್ಯವ್ಯಸನಿಯಾಗಿದ್ದರೆ ದಿನದಲ್ಲಿ ಗರಿಷ್ಠ ಒಂದು ಚಿಕ್ಕ ಲೋಟ ವೈನ್ ಅಥವಾ ಒಂದು ಲೋಟ ಬಿಯರ್ ಸೇವಿಸಿದರೆ ಇದು ನಿಮ್ಮ ಆರೋಗ್ಯಕ್ಕೆ ಬೇಕಾದಷ್ಟಾಯಿತು. ಇದಕ್ಕೂ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ನಿಮ್ಮ ರಕ್ತವನ್ನು ಸೇರಿದರೆ ನಿಮಗೆ ಅಧಿಕ ರಕ್ತದೊತ್ತಡದ ಬರುವುದು ಖಂಡಿತ.
ಉಪ್ಪಿನ ಕಾಯಿ : ಇನ್ನು ಉಪ್ಪಿನಕಾಯಿ ಮಾಡುವ ವಿಧಾನವನ್ನು ನಾನು ಹೇಳುವ ಅಗತ್ಯವಿಲ್ಲ ಹೆಚ್ಚಿನ ಪ್ರಮಾಣ ಉಪ್ಪಿನಿಂದ ಶೇಕರಿಸಿ ಇಡುವ ಪದಾರ್ಥವಿದು ರಕ್ತದೊತ್ತಡ ಹೆಚ್ಚಿದ್ದವರು ಇದರ ಕಡೆ ನೋಡುವುದು ಅಪಾಯ.