ಹದಿನೆಂಟನೇ ವಯಸ್ಸಿನಲ್ಲಿ ನೀವು ಎಷ್ಟು ತೂಕವಿದ್ದಿರೋ ಈಗಲೂ ಹೆಚ್ಚು ಕಡಿಮೇ ಅದೇ ತೂಕ ದಲ್ಲಿರುವಂತೆ ನೊಡಿಕೊಳ್ಳಿ, ಮುಖ್ಯವಾಗಿ ನಿಮ್ಮ ಈಗಿನ ಸೊಂಟದ ಸುತ್ತಳತೆ ನಿಮ್ಮ ಹದಿನೆಂಟನೇ ವಯಸ್ಸಿನಲ್ಲಿ ಎಷ್ಟಿತ್ತೊ ಅಷ್ಟೇ ಇರುವಂತೆ ನೋಡಿಕೊಳ್ಳಿ. ಇದರಿಂದ ಹೃದಯದ ಖಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ.
ದಿನದಲ್ಲಿನ ಒಂದು ಹೊತ್ತು ಊಟ ಕಡಿಮೆ ಮಾಡಿ, ಒಂದು ಹೊತ್ತು ಊಟ ಕಡಿಮೆ ಮಾಡಲಾಗದಿದ್ದರೂ ಮಾಡುವ ಪ್ರತಿಯೊಂದು ಊಟವನ್ನೂ ಹೊಟ್ಟೆ ಬಿರಿಯುವಂತೆ ತಿನ್ನದೇ ಇನ್ನು ಸ್ವಲ್ಪ ತಿನ್ನಬಹುದು ಎಂಬಲ್ಲಿಗೆ ಊಟ ಮುಗಿಸದರೆ ಒಳ್ಳೆಯದು, ಹೆಚ್ಚು ಊಟ ಮಾಡುವುದರಿಂದ ನಮ್ಮ ದೇಹದ ಎಲ್ಲ ಕೊಶಗಳಿಗು ಹೆಚ್ಚಿನ ಒತ್ತಡ ತರುತ್ತದೆ, ಈ ಒತ್ತಡವೇ ಹಲವಾರು ಖಾಯಿಲೆಗಳ ತವರೂರು.
ಹೇರಳವಾಗಿ ನೀರು ಕುಡಿಯಬೇಕು, ಮನುಷ್ಯನ ದೇಹ ಶೇಕಡ 70 ಕ್ಕಿಂತ ಹೆಚ್ಚು ನೀರಿನಿಂದ ಮಾಡಲ್ಪಟ್ಟಿದೆ, ಹಾಗಾಗಿ ನೀರು ನಮ್ಮ ಆಹಾರದ ಮುಖ್ಯ ಭಾಗವಾಗಿರಬೇಕು ಹಾಗೆಂದು ನೀವು ಮಾರುಕಟ್ಟೆ ಯಲ್ಲಿ ಸಿಗುವ ತರಾವರಿ ಜ್ಯೂಸ್ ಕುಡಿದರೆ ಅದು ನೀರು ಕುಡಿದಂತಲ್ಲ, ನಮ್ಮ ಸಂಪ್ರದಾಯದಂತೆ ತಾಮ್ರದ ಚಂಬಿನಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ನಮ್ಮ ಲಿವರಿನ ಅರೊಗ್ಯಕ್ಕೆ ಉತ್ತಮ. ನೀರು ನಮ್ಮ ದೇಹದ ಕಲ್ಮಷಗಳನ್ನು ದೇಹದಿಂದ ಹೊರಹಾಕಿಸುತ್ತದೆ, ಪ್ರತಿಯೊಂದು ಕೋಶಕ್ಕೂ ಆಹಾರವನ್ನು ತಲುಪಿಸುತ್ತದೆ.
ನಮ್ಮ ಅಹಾರದ ಶೇಕಡ 70 ಭಾಗ ತರಕಾರಿ ಮತ್ತು ಹಣ್ಣಿನಿಂದ ಕೂಡಿರಬೇಕು, ಸಸ್ಯಾಹಾರ ನಮ್ಮ ದೇಹಕ್ಕೆ ಅತ್ತ್ಯುತ್ತಮ, ಜೀವದಿಂದ ತುಂಬಿರುವ ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವುದು ನಿರ್ಜೀವವಾದ ಮಾಂಸಾಹಾರ ತಿನ್ನುವುದಕ್ಕಿಂತ ಎಷ್ಟೋ ಮೇಲು.
ದಿನದ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಮೂವತ್ತು ನಿಮಿಷಗಳಕಾಲ ಹೊರಗಡೆ ಶುದ್ದವಾದ ಗಾಳಿ ಸಿಗುವಕಡೆ ಓಡಾಡುವುದು ನಮ್ಮ ಆರೊಗ್ಯಕ್ಕೆ ಉತ್ತಮ, ಈ ಸಮಯಗಳಲ್ಲಿ ಹೊರಗಡೆಯಿರುವುದರಿಂದ ನಮ್ಮ ದೇಹದ ಜೈವಿಕ ಗಡಿಯಾರದ ಚಾಲನೆ ಉತ್ತಮಗೊಳ್ಳುತ್ತದೆ, ಹಾಗೆಯೆ ನಮ್ಮ ಪಾದವು ಪಾದರಕ್ಷೆಗಳಿಲ್ಲ್ಸದೇ ಹುಲ್ಲಿನ ಮೇಲಾಗಲಿ ಮಣ್ಣಿನ ಮೇಲಾಗಲಿ ನಡೆದಾಡಿದರೆ ನಮ್ಮಲ್ಲಿನ ನೆಗೆಟಿವ್ ಶಕ್ತಿಯನ್ನು ಭೂಮಿ ಹೀರಿಕೊಳ್ಳುತ್ತದೆ.
ನಿಮ್ಮ ಮನಸ್ಸು ಸದಾ ನೀವು ಉಸಿರಾಡುವುದನ್ನು ಗಮನಿಸುತ್ತಿರಲಿ, ಸಾಮಾನ್ಯ ನಾವ್ಯರೂ ಉಸಿರಾಡುವುದನ್ನು ಗಮನಿಸುವುದೇ ಇಲ್ಲಾ, ನಾವು ಅನ್ನ ನೀರು ಇಲ್ಲದೇ ದಿನಗಟ್ಟಲೇ ಬದುಕಿರಬಹುದು ಆದರೇ ಉಸಿರಾಟವಿಲ್ಲದೇ ಕೆಲವು ಗಂಟೆಗಳ ಕಾಲ ಕೂಡಾ ಬದುಕಿರಲಾರೆವು, ಇಷ್ಟೋಂದು ಮುಖ್ಯವಾಗಿರು ಉಸಿರಾಟವನ್ನು ನಾವ್ಯಾರೂ ಗಮನಿಸುವುದೇ ಇಲ್ಲಾ ಹಾಗಾಗಿ ನಾವು ಉಸಿರಾಡುವ ರೀತಿ ಅನಿಯಮಿತವಾಗಿರುತ್ತದೆ.
ನಾವು ಯಾವಾಗಲೂ ನಿಯಮಿತವಾಗಿ ಧೀರ್ಘವಾಗಿ ಮತ್ತು ಸುಲಲಿತವಾಗಿ ಉಸಿರಾಡುವುದನ್ನು ಕಲಿಯಬೇಕು, ನಮ್ಮ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಮಾತ್ರ ನಮ್ಮ ಉಸಿರಾಟವನ್ನು ನಿಯಮಿತ ಗೊಳಿಸು ವುದು ಸಾಧ್ಯ. ಯೊಗದಲ್ಲಿ ಹೇಳುವ ಪ್ರಾಣಾಯಾಮ ಈ ಅಂಶವನ್ನೇ ಒತ್ತಿ ಹೇಳುತ್ತದೆ ಹಾಗೆ ಯೋಗದ ಅತ್ತ್ಯುತ್ತಮ ಸ್ಟಿತಿಯಾದ ಸಮಾಧಿ ಸ್ಟಿತಿ ಸೇರಲು, ನಮ್ಮ ಉಸಿರಾಟ ಕ್ರಿಯೆಯನ್ನು ನಿಯಮಿತ ಗೊಳಿಸುವ ಮತ್ತು ನಮ್ಮ ಮನಸ್ಸ್ಸನ್ನು ಉಸಿರಾಟದಲ್ಲಿ ಕೇಂದ್ರೀಕರಿಸುವುದು ಮೊದಲನೇ ಹೆಜ್ಜೆ.
ದಿನಕ್ಕೆ ೭ ರಿಂದ ೮ ಗಂಟೆ ನಿದ್ದೆ ಮಾಡುವುದು ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕ, ಧೂಮಪಾನ ಮತ್ತು ಅಲ್ಕೋಹಾಲ್ ಗಳಿಂದ ದೂರವಿರಬೇಕು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.