ಹೊಟ್ಟೆ ಹುಳು ಸಮಸ್ಯೆಗೆ ದಾಳಿಂಬೆ ಬಳಕೆ ಹೀಗಿರಲಿ

0
1549

ದಾಳಿಂಬೆ ಹಣ್ಣು ತಿನ್ನಲು ಬಲು ರುಚಿಯಾದ ಆಹಾರ, ಅಷ್ಟೇ ಅಲ್ಲದೆ ದಾಳಿಂಬೆ ಹಣ್ಣಿನಿಂದ ಪಾನೀಯಗಳನ್ನು ತಯಾರಿಸಿ ಕುಡಿಯಲು ಬಳಸುತ್ತೇವೆ, ದಾಳಿಂಬೆ ಹಣ್ಣು ಗಳನ್ನು ಮಾತ್ರವಲ್ಲದೆ ಅದರ ಸಿಪ್ಪೆ ತೊಗಟೆ ಬೀಜ ಹಾಗೂ ಎಲೆಗಳನ್ನು ಸಹ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ, ಇಂತಹ ದಾಳಿಂಬೆಯನ್ನು ಮನೆಮದ್ದಿನ ರೂಪದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಇಂದು ತಿಳಿಯೋಣ.

ರಕ್ತ ಬೇದಿಯ ಸಮಸ್ಯೆ ಕಾಡುತ್ತಿದ್ದರೆ ದಾಳಿಂಬೆ ಹೂ ಮತ್ತು ಅದರ ಚಿಗುರಿನ ಕಷಾಯವನ್ನು ಮಾಡಿ ಕುಡಿದರೆ ತಕ್ಷಣವೇ ಉಪಶಮನ ಸಿಗುತ್ತದೆ.

ಲಾಡಿ ಹುಳುವಿನ ಸಮಸ್ಯೆ ಕಾಡುತ್ತಿದ್ದರೆ ದಾಳಂಬಿ ಗಿಡದ ಬೇರಿನ ಚಕ್ಕೆಯ ಕಷಾಯವನ್ನು ಮಾಡಿ ಕುಡಿಯುವುದರಿಂದ ಬೇಗ ಉಪಶಮನ ಕಾಣಬಹುದು.

ವಾತಾವರಣ ವ್ಯತ್ಯಾಸದಿಂದ ಕೆಲವೊಮ್ಮೆ ಅತಿಯಾದ ಉಷ್ಣದ ತಲೆ ನೋವು ಶುರುವಾಗಿ ಬಿಡುತ್ತದೆ ಇದನ್ನು ಸುಲಭವಾಗಿ ವಾಸಿ ಮಾಡುವ ಶಕ್ತಿ ದಾಳಿಂಬೆ ಗಿಡದ ಬೇರಿನ ಅಡಕವಾಗಿದೆ ದಾಳಿಂಬೆ ಬೇರನ್ನು ಅರೆದು ಹಣೆಗೆ ಲೇಪಿಸಿದರೆ ಸಾಕು ಬೇಗ ಉಪಶಮನ ಸಿಗುತ್ತದೆ.

ದಾಳಿಂಬೆ ಮೊಗ್ಗುಗಳನ್ನು ಒಣಗಿಸಿ ದಿನಕ್ಕೆ ಎರಡು ಹೊತ್ತು ಗುಲಗಂಜಿಯಷ್ಟು ಸೇವಿಸಿದರೆ ಕೆಮ್ಮು ಬಹಳ ಬೇಗ ಗುಣವಾಗುತ್ತದೆ.

100 ರಲ್ಲಿ 60 ಮಂದಿಗೆ ಗ್ಯಾಸ್ಟಿಕ್ ಸಮಸ್ಯೆ ಕಾಡುವುದು ಸಾಮಾನ್ಯ ಇಂಥವರು ಚಿಗುರಿನ ಎಲೆಯ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಒಳ್ಳೆಯದು.

ಅಷ್ಟೇ ಅಲ್ಲದೆ ಚಿಗುರಿನ ಎಲೆಗಳನ್ನು ಕಷಾಯ ಮಾಡಿ ಮಕ್ಕಳಿಗೆ ಕುಡಿಸಿದರೆ ಬಾಯಲ್ಲಿನ ಹುಣ್ಣು ಬೇಗನೆ ವಾಸಿಯಾಗುತ್ತದೆ, ದಾಳಿಂಬೆ ಅರೋಗ್ಯ ಮಾಹಿತಿ ಇಷ್ಟವಾದರೆ ಇನ್ನು ಅನೇಕ ಮಾಹಿತಿ ಪ್ರತಿದಿನ ಪಡೆಯಲು ನಮ್ಮ ಪೇಜ್ ಲೈಕ್ ಮಾಡಿ.

LEAVE A REPLY

Please enter your comment!
Please enter your name here