ತತ್ವ ಹೇಳುತ್ತಿದ್ದ 4ನೇ ಮಂಗವನ್ನು ಇತಿಹಾಸದಲ್ಲಿ ಮರೆಮಾಚಿದ ರೋಚಕ ಮಾಹಿತಿಯೊಂದನ್ನು ಓದಿ

    0
    2209

    ಪ್ರಪಂಚದಾದ್ಯಂತ ತತ್ವ ಹೇಳುವ ಮೂರು ಮಂಗಗಳು ಬಹಳ ಪ್ರಸಿದ್ಧಿ ಅದರಲ್ಲೂ ನಮ್ಮ ಭಾರತ ದೇಶದಲ್ಲಿ ಈ ಮೂರು ಮಂಗಗಳು ಬಹಳ ಮಾನ್ಯತೆಯನ್ನು ಪಡೆದುಕೊಂಡಿದೆ ಆದರೆ ಸ್ವಲ್ಪ ಇತಿಹಾಸದ ಕಡೆ ಒಮ್ಮೆ ನೋಡಿದರೆ ಈ ತತ್ವ ಹೇಳುವ ಮಂಗಗಳ ಕಲ್ಪನೆ ಬಂದಿದ್ದು ಜಪಾನ್ ದೇಶದಿಂದ, ಈ ಮೂರು ಮಂಗಗಳಿಗೂ ಅದರದೇ ಆದ ಹೆಸರು ಇದೆಯೇ ಹಾಗೂ ತನ್ನದೆಯಾದ ತತ್ವವನ್ನು ಈ ಮಂಗಗಳು ಜಗತ್ತಿಗೆ ಹೇಳುತ್ತೇವೆ, ಆದರೆ ತತ್ವವನ್ನು ಹೇಳುತ್ತಿದ್ದದ್ದು ಮೂರು ಮಂಗ ಬಲ್ಲ ಅಸಲಿಗೆ 4 ಮಂಗ ಹಾಗಾದರೆ ನಾಲ್ಕನೇ ಮಂಗವನ್ನು ಇತಿಹಾಸದಿಂದ ತೆಗೆದುಹಾಕಿದ್ದು ಯಾಕೆ ಇಂದು 4ನೇ ಮಂಗದ ತತ್ವವನ್ನು ರೂಢಿಯಲ್ಲಿ ಯಾಕೆ ಪರಿಗಣಿಸಿಲ್ಲ ಎಂಬುದರ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹಿಂದಿನ ಲೇಖನದಲ್ಲಿ ನೀಡುತ್ತೇವೆ.

    ಮೊದಲನೆಯ ಮಂಗ ಮಿಜೂರು ಈ ಮಂಗ ತನ್ನ ಕಣ್ಣುಗಳನ್ನು ಎರಡೂ ಕೈಗಳಿಂದ ಮುಚ್ಚಿಕೊಂಡು ಕೆಟ್ಟದ್ದನ್ನು ನೋಡಬೇಡಿ ಎಂಬುವ ಸಂದೇಶವನ್ನು ನೀಡಿದರೆ, ಎರಡನೇ ಮಂಗ ಸಿಕ್ಕಿಜುರು ಇದು ತನ್ನ ಎರಡೂ ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು ಕೆಟ್ಟದ್ದನ್ನು ಕೇಳಬೇಡಿ ಎನ್ನುವ ಸಂದೇಶ ಸಾರುತ್ತಿದೆ ಅದರ ಜೊತೆಯಲ್ಲಿ ಇರುವ ಮೂರನೇ ಮಂಗ ಇವಜುರು ತನ್ನ ಬಾಯಿಗಳನ್ನು ಮುಚ್ಚಿ ಕೊಳ್ಳುವ ಮೂಲಕ ಕೆಟ್ಟದ್ದನ್ನು ಮಾತನಾಡಬೇಡಿ ಎಂಬ ಸಂದೇಶ ಜಗತ್ತಿಗೆ ನೀಡುತ್ತಿದೆ, ಅದರ ಜೊತೆಯಲ್ಲಿ ಇರುವ ನಾಲ್ಕನೇ ಮಂಗ ತನ್ನ ಜನನೇಂದ್ರಿಯ ವನ್ನು ಮುಚ್ಚಿಕೊಂಡು ಕೆಟ್ಟದ್ದನ್ನು ಮಾಡಬಾರದು ಎಂಬುವ ಸಂದೇಶವನ್ನು ನೀಡುತ್ತಿದೆ.

    ನಾವು ನಿಮಗೆ ಮೊದಲೇ ತಿಳಿಸಿದ ಹಾಗೆ ಈ ಮಂಗಗಳ ಪರಿಕಲ್ಪನೆ ಜಪಾನ್ ದೇಶದ್ದು ಈ ದೇಶದಲ್ಲಿ ನಾಲ್ಕನೇ ಪದ ಅಥವಾ ನಾಲ್ಕು ಎಂಬ ಪದ ದುರದೃಷ್ಟ ಸಂಖ್ಯೆ ಎಂದು ಪರಿಗಣಿಸುತ್ತಾರೆ, ಕಾರಣ 4 ಎಂದರೆ ಜಪಾನಿ ಭಾಷೆಯಲ್ಲಿ ಶಿ ಎಂದು ಅರ್ಥ ಶೀ ಎಂದರೆ ಸಾವು ಎಂಬುವ ಮುತ್ತೊಂದು ಅರ್ಥ ಜಪಾನ್ ಭಾಷೆಯಲ್ಲಿದೆ, ಇದೇ ಕಾರಣಕ್ಕಾಗಿಯೇ ಜಪಾನ್ ದೇಶದಲ್ಲಿ ಇರುವ ಹೋಟೆಲ್ ಗಳಲ್ಲಿಯೂ ರೂಮ್ ನಂಬರ್ 4 ಇರುವುದಿಲ್ಲ, ಜಗತ್ತಿನ ಇತಿಹಾಸದಲ್ಲಿ ಜಪಾನಿಗರು ಇದೇ ಕಾರಣಕ್ಕಾಗಿ ನಾಲ್ಕನೇ ಮಂಗದ ಪರಿಕಲ್ಪನೆಯನ್ನು ಸಮಾಜಕ್ಕೆ ಸಾಲಲಿಲ್ಲ ಹಾಗೂ ತಾವು ಕೂಡ ಅದನ್ನು ಮಹತ್ವನೀಡಿ ಪರಿಗಣಿಸಲಿಲ್ಲ, ಇದೇ ಕಾರಣಕ್ಕಾಗಿ ನಾಲ್ಕನೇ ಮಂಗವನ್ನು ಇಂದು ಇಡೀ ಜಗತ್ತು ಪರಿಗಣನೆಗೆ ತೆಗೆದುಕೊಂಡಿಲ್ಲ.

    LEAVE A REPLY

    Please enter your comment!
    Please enter your name here