ಇತ್ತಿಚಿಕೆ ಫ್ಯಾಶನ್ ಆಗಿ ಬಿಟ್ಟಿರುವ ಕಪ್ಪು ದಾರ ಕಟ್ಟುವುದರ ಹಿಂದೆ ಅನೇಕ ಉಪಯೋಗಗಳು ಇದೆ ಎಂದು ಹಲವರಿಗೆ ಗೊತ್ತೇ ಇಲ್ಲ, ಸುಮ್ಮನೆ ಶೋಕಿಗೆ ಧರಿಸಿ ಓಡಾಡುತ್ತಿರುತ್ತಾರೆ, ಈ ಕಪ್ಪು ದಾರವನ್ನ ಕಟ್ಟಿಕೊಂಡರೆ ನಮ್ಮ ಮನಸ್ಸಿನ ಆಸೆ ಆಕಾಂಶೆಗಳು ಆದಷ್ಟು ಬೇಗ ಈಡೇರುತ್ತವೆ, ಆದರೆ ಎಲ್ಲಿ ಕಟ್ಟಿಕೊಳ್ಳಬೇಕು ಹೇಗೆ ಕಟ್ಟಿಕೊಳ್ಳಬೇಕು ಎಂಬುದು ಇಲ್ಲಿದೆ ನೋಡಿ.
ನಮಗೆ ಮೊದಲಿಂದಲೂ ಗೊತ್ತಿರುವ ಹಾಗೆ ಕಪ್ಪು ದಾರ ಕಟ್ಟಿಕೊಂಡರೆ ನಮಗೆ ದೃಷ್ಟಿಯಾಗುವುದಿಲ್ಲ ಮತ್ತು ನಮ್ಮ ಮೇಲೆ ಯಾವುದೇ ರೀತಿಯ ಕೆಟ್ಟ ಋಣಾತ್ಮಕ ಶಕ್ತಿಯ ಪ್ರಭಾವ ಬೀಳಬಾರದೆಂದು ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತೇವೆ.
ಮನುಷ್ಯನ ದೇಹಕ್ಕೆ ಪಂಚ ಭೂತಗಳು ತುಂಬಾ ಮುಖ್ಯ, ಕೆಲವು ದುಷ್ಟ ಶಕ್ತಿಗಳು ಈ ಪಂಚ ಭೂತಗಳು ನಮ್ಮ ದೇಹಕ್ಕೆ ತಲುಪದಂತೆ ತಡೆ ಒಡ್ಡುತ್ತವೆ, ಈ ರೀತಿ ಆಗಬಾರದೆಂದರೆ ಕಪ್ಪು ದಾರವನ್ನು ಕತ್ತಿನಲ್ಲಿ ಕಟ್ಟಿಕೊಳ್ಳಬೇಕು, ಈ ರೀತಿ ಧರಿಸುವುದದರಿಂದ ಆ ಕೆಟ್ಟ ದೃಷ್ಟಿ ನಾಶ ಮಾಡಿ, ಬರಿ ಧನಾತ್ಮಕ ಶಕ್ತಿಯನ್ನು ಮಾತ್ರ ನಿಮ್ಮ ದೇಹಕ್ಕೆ ತಲುಪುವಂತೆ ಮಾಡುತ್ತದೆ.
ಅಷ್ಟೇ ಅಲ್ಲದೆ ಕಪ್ಪು ದಾರವನ್ನು ಸೊಂಟಕ್ಕೆ ಕಟ್ಟಿಕೊಳ್ಳುವುದರಿಂದ ನಿಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು, ಅಲ್ಲದೆ ದೇಹದ ಸಮತೋಲನವನ್ನು ಸಹ ಕಾಪಾಡಿಕೊಳ್ಳಬಹುದು, ಕಪ್ಪು ದಾರಕ್ಕೆ ಬಿಪಿ ನಿಯಂತ್ರಿಸುವ ಶಕ್ತಿ ಕೂಡ ಇದೆ, ಅಲ್ಲದೆ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬಹುದು.
ಒಂದು ಕಪ್ಪು ದಾರವನ್ನು ಕರೀದಿಸಿ, ಅದಕ್ಕೆ ಒಂಬತ್ತು ಗಂಟು ಬಿಗಿದು, ಶನಿವಾರ ಅಂಜನೇಯ ದೇವಸ್ಥಾನದಲ್ಲಿ ಕೊಂಕುಮ ಹಚ್ಚಿ ಅದನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿದರೆ ಮನೆಯಲ್ಲಿ ಹಣದ ಅಭಾವ ಇರುವುದಿಲ್ಲ, ಹಾಗೆಯ ಯಾವ ದೃಷ್ಟಿ ಕೂಡ ನಿಮ್ಮ ಮನೆಯ ಮೇಲೆ ಬೀಳುವುದಿಲ್ಲ.