ಮುಖದ ಕಾಂತಿಯ ಬಗ್ಗೆ ಅತಿ ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ನಾವು ಅದಕ್ಕಾಗಿಯೇ ಅತಿ ಹೆಚ್ಚಿನ ಹಣವನ್ನು ವ್ಯಯ ಮಾಡುತ್ತೇವೆ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಕ್ರೀಮ್ಗಳನ್ನು ಪ್ರತಿದಿನ ತಪ್ಪದೆ ಬಳಸುತ್ತೇವೆ ಆದರೂ ಮುಖದಲ್ಲಿ ಹಲವು ರೀತಿಯ ಚರ್ಮದ ಸಮಸ್ಯೆಗಳು ಹೋಗುವುದಿಲ್ಲ ಇಂತಹ ಸಮಸ್ಯೆ ಇದ್ದವರಿಗೆ ಎಂದು ನಾವು ಒಂದಷ್ಟು ಉತ್ತಮ ಮನೆಮದ್ದಿನ ಸಲಹೆಯನ್ನು ನೀಡಲಿದ್ದೇವೆ ನಿಮ್ಮ ಚರ್ಮದ ಸಮಸ್ಯೆಯ ಅನುಸಾರವಾಗಿ ಕ್ರಮಗಳನ್ನು ಒಮ್ಮೆ ಅನುಸರಿಸಿ ನೋಡಿ.
ಒಣಗಿದ ಚರ್ಮದವರು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಮೊದಲು ಹಾಲಿನಲ್ಲಿ ಮುಖ ತೊಳೆಯಿರಿ ನಂತರ ನೀರಿನಲ್ಲಿ ಮುಖವನ್ನು ತೊಳೆಯಿರಿ ಈ ರೀತಿ ಮಾಡುವುದರಿಂದ ಮುಖ ಕಾಂತಿಯುಕ್ತವಾಗುತ್ತದೆ.
ಮೊಟ್ಟೆಯ ಹಳದಿ ಭಾಗಕ್ಕೆ ಮೊದಲು ಬಾದಾಮಿಯನ್ನು ನಂತರ ಹಾಲನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ನಂತರ ಮುಖವನ್ನು ತೊಳೆದರೆ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ.
ಅರ್ಧ ಚಮಚ ಜೇನುತುಪ್ಪ ಒಂದು ಮೊಟ್ಟೆಯ ಹಳದಿ ಭಾಗವನ್ನು ಸ್ವಲ್ಪ ಹಾಲಿಗೆ ಸೇರಿಸಿ ಈ ಮಿಶ್ರಣವನ್ನು ಕುತ್ತಿಗೆಯ ಸುತ್ತ ಹಾಗೂ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಸ್ವಚ್ಛ ಮಾಡಿ, ಈ ರೀತಿ ಸತತ ಏಳು ದಿನ ಮಾಡುವುದರಿಂದ ಮುಖ ಮತ್ತು ಕತ್ತಿನಲ್ಲಿರುವ ಸುಕ್ಕುಗಳು ಮಾಯವಾಗುತ್ತದೆ.
ಒಂದಿಷ್ಟು ಬೀಜರಹಿತ ದ್ರಾಕ್ಷಿ ಹಣ್ಣಿಗೆ ಹಾಲನ್ನು ಬೆರೆಸಿ ಮಿಕ್ಸರ್ ಮೂಲಕ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ, ಇದನ್ನು ರಾತ್ರಿ ಮಲಗುವ ಮೊದಲು ಮುಖದ ಚರ್ಮಕ್ಕೆ ಹಚ್ಚಿಕೊಂಡು ಒಣಗುವ ತನಕ ಹಾಗೆ ಬಿಟ್ಟು ನಂತರ ತೊಳೆಯಿರಿ ಇದು ಕೂಡ ನಿಮ್ಮ ಚರ್ಮದ ಕಾಂತಿಗೆ ಉತ್ತಮ ಪ್ರತಿಫಲ ನೀಡುತ್ತದೆ.
ತಲಾ ಒಂದು ಚಮಚ ಹಾಲು ಕಡಲೆಹಿಟ್ಟು, ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ, ಮೂರು ಅಥವಾ ನಾಲ್ಕು ಹನಿ ನಿಂಬೆರಸ ಮತ್ತು ನಾಲ್ಕು ಹನಿ ಜೇನುತುಪ್ಪ ಇಷ್ಟನ್ನು ಬೆರೆಸಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಕಳೆದ ನಂತರ ತೊಳೆಯಿರಿ ಈ ರೀತಿ ಮಾಡುವುದರಿಂದ ಮುಖದ ಮೇಲಿರುವ ಮೊಡವೆ ಮತ್ತು ಕಲೆಗಳು ಮಾಯವಾಗುತ್ತದೆ.
ಪ್ರತಿದಿನ ಹತ್ತಿಯನ್ನು ಹಾಲಿನಲ್ಲಿ ಅದ್ದಿ ಮುಖವನ್ನು ಬಳಸಿಕೊಳ್ಳುತ್ತಿದ್ದರೆ ಮುಖದ ಮೇಲಿನ ಗುಳ್ಳೆಗಳು ಕಾಲಕ್ರಮೇಣ ಮಾಯವಾಗಿ ಅದರ ಕಲೆಗಳು ನಿವಾರಣೆಯಾಗುತ್ತದೆ.
ಅರ್ಧ ಚಮಚ ಹಾಲಿನ ಕೆನೆಗೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಅದಕ್ಕೆ ಚಿಟಿಕೆ ಅರಿಶಿನಪುಡಿ ಬೆರೆಸಿ ಸ್ನಾನ ಮಾಡುವ ಮುಂಚೆ ಮುಖಕ್ಕೆ ಹಚ್ಚಿಕೊಳ್ಳಿ, ಈ ಕ್ರಮ ಹತ್ತರಿಂದ ಇಪ್ಪತ್ತು ವರ್ಷದ ಮಕ್ಕಳಿಗೂ ಅನ್ವಯ ಮಾಡಬಹುದು.