ಬಹುಶಃ ಮಾನವನ ಲಜ್ಜಾ ಸ್ವಭಾವವು ಹೀಗಿರಲು ಪ್ರೇರಣೆಯಿಂದಲೇ ಪ್ರಾರಂಭವಾಗಿರಬೇಕು ಈ ಮುಟ್ಟಿದರೆ ಮುನಿ ಸೊಪ್ಪು..??

0
1098

ಗಿಡಗಳು ಮನುಷ್ಯರಂತೆ ಹಲವಾರು ಚಟುವಟಿಕೆಗಳನ್ನು ಹೊಂದಿದೆ ಉದಾಹರಣೆಗೆ ಉಸಿರಾಡುವಿಕೆ, ಶಬ್ದಗಳನ್ನು ಆಲಿಸುವಿಕ, ಮಾನಸಿಕ ತೊಳಲಿಕೆ ಇತ್ಯಾದಿ ಇವೆಲ್ಲವುಗಳು ತಕ್ಷಣ ಗೋಚರವಿಲ್ಲದಿರುವುದು ಸತ್ಯ ಸಂಗತಿ, ಆದರೆ ತಕ್ಷಣ ಬಾಹ್ಯ ಪ್ರಪಂಚದ ತರಂಗಗಳನ್ನು ಗ್ರಹಿಸಿ ಪ್ರತಿಕ್ರಿಯೆಯನ್ನು ಹೊರಸೂಸುವ ಕೆಲವೇ ಕೆಲವು ಗಿಡಗಳಲ್ಲಿ ಮುಟ್ಟಿದರೆ ಮುನಿ ಅತಿ ಪ್ರಾಚೀನ ಹಾಗೂ ಚಿರಪರಿಚಿತ ಈ ಗಿಡವು ಸ್ಪರ್ಶದಿಂದಾಗಿ ತನ್ನ ಬಿಡಿಸಿದ ಎಲೆಗಳನ್ನು ಕೂಡಲೇ ಮುದುರಿಕೊಳ್ಳುವುದರಿಂದ ಇದನ್ನು ಸಂಸ್ಕೃತದಲ್ಲಿ ‘ ಲಜ್ಜಾಲು ‘ ಎಂದು ಕರೆದಿದ್ದಾರೆ.

ಈ ಗಿಡವು ಮತ್ತೊಂದು ಹೆಸರಾಂತ ಕಲೆಗಳಲ್ಲಿ ಒಂದು ಇದು ಮುಳ್ಳಿನಿಂದ ಕೂಡಿದ್ದು ನೆಲದಲ್ಲಿ ಹರಡುವ ಗಿಡ ಸಾಮಾನ್ಯ ಎಲ್ಲಾ ಉಷ್ಣವಲಯಗಳಲ್ಲಿ ಬೆಳೆಯುವಂತಹ ಗಿಡ ಇದರ ಹೂಗಳು ‘ ಪಿಂಕ್ ‘ ಬಣ್ಣದಿಂದ ಕೂಡಿದ್ದು ಸುಂದರವಾದ ಚೆಂಡಿನಂತೆ ಇರುತ್ತದೆ ಉಪಯುಕ್ತ ಭಾಗಗಳೆಂದರೆ ಎಲೆಗಳು.

ಎಲೆಗಳನ್ನು ತೊಳೆದು ರಸ ಹಿಂಡಿ ಒಂದರಿಂದ ಮೂರು ಚಮಚೆಯಷ್ಟು ರಸವನ್ನು ಎಳನೀರಿ ನೊಂದಿಗೆ ಸೇವಿಸಿದರೆ ಕೆಮ್ಮು ಮತ್ತು ಶ್ವಾಸಕೋಶಗಳ ತೊಂದರೆ ನಿವಾರಣೆಯಾಗುತ್ತದೆ.

ಹೆಂಗಸರಲ್ಲಿ ಅತಿಯಾದ ಮುಟ್ಟಿನ ಶ್ರವಗಳಲ್ಲಿ ಒಂದು ಭಾಗ ಇಡಿ ಗಿಡಕ್ಕೆ 4 ಭಾಗ ನೀರನ್ನು ಬೆರೆಸಿ ಕುದಿಸಿ ಒಂದು ಭಾಗಕ್ಕೆ ಇಳಿಸಿ ಶೋಧಿಸಿ ಅದಕ್ಕೆ ಒಂದು ಚಿಟಿಕೆ ಸ್ಪಟಿಕ ಅಥವಾ ಆಲಂನ್ನು ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸುವುದರಿಂದ ರಕ್ತ ಸ್ತಂಬನವಾಗುತ್ತದೆ ಇದನ್ನು ಗಾಯ ತೊಳೆಯಲಿಕ್ಕೆ ಸಹ ಬಳಸಬಹುದು.

ಒಂದು ಭಾಗ ಎಲೆಗಳಿಗೆ ಎರಡು ಭಾಗ ಕಾಯಿಸಿದ ಬಿಸಿನೀರನ್ನು ಹಾಕಿ ಸುಮಾರು 3 ಗಂಟೆ ಬಿಟ್ಟು ನಂತರ ಬರುವಂತಹ ಕಷಾಯವನ್ನು ಮೂರರಿಂದ ಆರು ಚಮಚೆಯಷ್ಟನ್ನು ಸೇವಿಸುವುದರಿಂದ ಮೂತ್ರದಲ್ಲಿರುವ ಕಲ್ಲು ನಿವಾರಣೆಯಾಗುತ್ತದೆ.

ಎಲೆಗಳನ್ನು ಹಾಲಿನಲ್ಲಿ ಅರೆದು ಅಥವಾ ಹಾಲಿನಲ್ಲಿ ಕಾಯಿಸಿ ನೀಡುವುದರಿಂದ ರಕ್ತ ಬೀಳುವ ಮೊಳೆ ರೋಗದಲ್ಲಿ ಅತ್ಯುಪಯುಕ್ತ.

LEAVE A REPLY

Please enter your comment!
Please enter your name here