ಸಂಪೂರ್ಣ ಮನೆ ಸ್ವಚ್ಛ ಮಾಡುವ ಕೆಲಸ ಒಂದು ದಿಕ್ಕಿಗೆ ಆದರೆ ಮನೆಯ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಮತ್ತೊಂದು ಕಷ್ಟಕರವಾದ ಕೆಲಸವಾಗಿಬಿಡುತ್ತದೆ, ಎಷ್ಟು ಸ್ವಚ್ಛ ಮಾಡಿದರು ಅದಕ್ಕೆ ಸಂಬಂಧಪಟ್ಟ ಸೋಪಿನ ನೀರನ್ನು ಬಳಸಿದರೂ ಅನೇಕ ಕಲೆಗಳು ಹಾಗೆಯೇ ಟಾಯ್ಲೆಟ್ ನಲ್ಲಿ ಉಳಿದುಬಿಡುತ್ತವೆ, ಬ್ರಷ್ ಮೂಲಕ ಅದನ್ನು ಉಜ್ಜಿ ತೊಳೆದು ಸ್ವಚ್ಛ ಮಾಡುವಷ್ಟರಲ್ಲಿ ಇಂದಿನ ಮೂಲೆ ಸಾಕಷ್ಟು ನೋವನ್ನು ತಿನ್ನುತ್ತದೆ.
ಆದ್ದರಿಂದ ಇಂದು ನಾವು ನಿಮಗೆ ಬಲು ಸುಲಭವಾದ ಟಿಪ್ಸ್ ಒಂದನ್ನು ನೀಡುತ್ತಿದ್ದೇವೆ ಇದನ್ನು ನೀವು ಫಾಲೋ ಮಾಡುವುದರಿಂದ ಅತಿ ಸುಲಭವಾಗಿ ಅಂದರೆ ಕೆಲವೇ ನಿಮಿಷಗಳಲ್ಲಿ ಕಷ್ಟವಿಲ್ಲದೆ ನಿಮ್ಮ ಮನೆಯ ಟಾಯ್ಲೆಟ್ ಹಾಗೂ ಅದರಲ್ಲಿರುವ ಕೊಳವೆ ಗಳನ್ನು ಸಹ ಸ್ವಚ್ಛ ಮಾಡಬಹುದು ಅದಕ್ಕೆ ನಿಮ್ಮ ಬಳಿ ಇರಬೇಕಾದ ವಸ್ತುಗಳು ಈ ಕೆಳಗಿನಂತಿವೆ, ಬಿಸಿನೀರು, ವಿನೆಗರ್, ನಿಂಬೆಹಣ್ಣು, ಪಾತ್ರೆ ತೊಳೆಯುವ ಜೆಲ್, ಅರ್ಧ ಚಮಚ ಉಪ್ಪು.
ತಯಾರಿಸುವ ವಿಧಾನ : ಒಂದು ಪಾತ್ರೆಯಲ್ಲಿ ಒಂದು ಲೀಟರ್ ನಷ್ಟು ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ವಿನೆಗರ್ ಹಾಕಬೇಕು ನಂತರ ಅದರಲ್ಲಿ ಅರ್ಧ ನಿಂಬೆಹಣ್ಣು ಮತ್ತು ಮನೆಯಲ್ಲಿ ಪಾತ್ರೆ ತೊಳೆಯಲು ಬಳಸುವ ಜೆಲ್ ಹಾಗೂ ಅರ್ಧ ಚಮಚ ಉಪ್ಪನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಈ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್ನಲ್ಲಿ ತುಂಬಿಕೊಂಡು ಜಿಡ್ಡು ಮತ್ತು ಕೊಳೆ ಇರುವ ನಿಮ್ಮ ಟಾಯ್ಲೆಟ್ ನಲ್ಲಿ ಸ್ಪ್ರೇ ಮಾಡಿ ಸ್ವಲ್ಪ ಸಮಯ ಬಿಟ್ಟು ಸ್ಕ್ರಬ್ ಮೂಲಕ ಉಜ್ಜಿದರೆ ಸಾಕು ನಿಮ್ಮ ತೊಯ್ಲೆಟ್ ಸ್ವಚ್ಛವಾಗುತ್ತದೆ.