ನಿದ್ರೆ ಮಾಡಲು ಅತ್ಯುತ್ತಮ ಸಮಯ ಎಂಬುದು ಇದೆಯೇ, ನಮ್ಮಲ್ಲಿ ಒಂದು ಸಲಹೆಯ ಮಾತಿದೆ ಬೇಗ ಮಲಗಿ ಬೇಗ ಎದ್ದೇಳಿ, ಅದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು, ಇದು ಎಷ್ಟು ಸಮಂಜಸ, ಹಾಗಿದ್ದರೆ ತಡವಾಗಿ ಮಲಗಿ ತಡವಾಗಿ ಏಳುವುದು ಸೂಕ್ತವೇ, ವಾಸ್ತವವಾಗಿ ಹೇಳಬೇಕೆಂದರೆ, ನಿಮ್ಮ ದೇಹದಲ್ಲಿ ಅದ್ಭುತವಾದ ಜೈವಿಕ ಗಡಿಯಾರವೊಂದು ಚಾಲನೆಯಲ್ಲಿದೆ ಇದು ಅತ್ಯಂತ ನಿಖರವಾದುದು ಅದು ನಿಮ್ಮ ನಿದ್ರೆಯ ಅವಧಿ ಸಹಿತವಾಗಿ ನಿಮ್ಮ ದೇಹದ ವಿವಿಧ ಕಾರ್ಯವಿಧಾನಗಳನ್ನು ನಿಯಂತ್ರಣದಲ್ಲಿ ಇಡುತ್ತದೆ.
ರಾತ್ರಿ 11 ಘಂಟೆಯಿಂದ ಬೆಳಗುಜಾವದ 3 ಘಂಟೆಯವರೆಗೆ, ಬಹುಪಾಲು ನಿಮ್ಮ ರಕ್ತಪರಿಚಲನೆಯು ನಿಮ್ಮ ಯಕೃತ್ತಿ(ಲಿವರ್)ನಲ್ಲಿ ಕೇಂದ್ರೀಕೃತವಾಗಿರುತ್ತದೆ, ನಿಮ್ಮ ಯಕೃತ್ತು ಹೆಚ್ಚಿನ ರ’ಕ್ತಸಂಚಯನ ಹೊಂದಿದ್ದರಿಂದ ಹೆಚ್ಚಿನ ಗಾತ್ರದ್ದಾಗುತ್ತದೆ, ಇದು ಅತ್ಯಂತ ಮಹತ್ವದ ಅವಧಿಯಾಗಿದ್ದು, ಈ ಸಮಯದಲ್ಲಿ ನಿಮ್ಮ ದೇಹವು ವಿಷಪೂರಿತ ಅಂಶಗಳನ್ನು ಹೊರಹಾಕುವ ಕಾರ್ಯವನ್ನು ಮಾಡುತ್ತಿರುತ್ತದೆ, ಇಡೀ ದಿನದಲ್ಲಿ ಸಂಗ್ರಹವಾದ ದೈಹಿಕ ವಿಷಸಂಗ್ರಹವನ್ನು ನಿವಾರಿಸುವ ಹಾಗೂ ವಿಭಜಿಸುವ ಕಾರ್ಯವನ್ನು ನಿಮ್ಮ ಯಕೃತ್ತು ಮಾಡುತ್ತಿರುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ನೀವು ನಿಗದಿತ ಸಮಯದಲ್ಲಿ ನಿದ್ರೆ ಮಾಡದೇ ಇದ್ದರೆ, ನಿಮ್ಮ ಯಕೃತ್ತು ವಿ’ಷಕಾರಿ ತ್ಯಾಜ್ಯಗಳನ್ನು ನಿವಾರಿಸುವ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗದು, ನೀವು ರಾತ್ರಿ 11ರೊಳಗೆ ನಿದ್ರೆಗೆ ಹೋದರೆ ನಿಮ್ಮ ದೇಹದ ಶುದ್ಧೀಕರಣ ಕ್ರಿಯೆಗೆ ಪೂರ್ತಿ ನಾಲ್ಕು ತಾಸುಗಳ ಅವಧಿ ಸಿಗುತ್ತದೆ, ನೀವು ರಾತ್ರಿ 12ಕ್ಕೆ ನಿದ್ದೆ ಹೋದರೆ, ನಿಮಗೆ ಮೂರು ತಾಸುಗಳ ಅವಧಿ ಸಿಗುತ್ತದೆ, ನೀವು ರಾತ್ರಿ 1ಕ್ಕೆ ಮಲಗಿದರೆ, ನಿಮಗೆ ಎರಡು ತಾಸುಗಳ ಅವಧಿ ಲಭ್ಯವಾಗುತ್ತದೆ ಮತ್ತು ನೀವು ರಾತ್ರಿ ಎರಡು ಗಂಟೆಗೆ ಮಲಗಿದರೆ ನಿಮಗೆ ವಿ’ಷಕಾರಿ ವಸ್ತು ನಿವಾರಣೆಗೆ, ಕೇವಲ ಒಂದೇ ತಾಸಿನ ಅವಧಿ ಸಿಗುತ್ತದೆ.
ಒಂದುವೇಳೆ ನೀವು ಬೆಳಗಿನ ಜಾವ ಮೂರು ಘಂಟೆಗೆ ನಿದ್ದೆ ಹೋದರೆ, ದುರ್ದೈವದ ಸಂಗತಿಯೆಂದರೆ ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳ ನಿವಾರಣೆ ಮಾಡಲು ವಸ್ತುಶಃ ಏನೂ ಸಮಯವೇ ಸಿಗುವದಿಲ್ಲ ನೀವು ಇದೇ ರೀತಿ ನಿಮ್ಮ ನಿದ್ರೆಯ ಸಮಯ ಪದ್ಧತಿಯನ್ನು ಮುಂದುವರೆಸಿದ್ದಲ್ಲಿ ಕಾಲಾಂತರದಲ್ಲಿ ವಿಷಕಾರಿ ವಸ್ತುಗಳು ನಿಮ್ಮ ದೇಹದಲ್ಲಿ ಸಂಗ್ರಹವಾಗುತ್ತಲೇ ಇರುತ್ತವೆ, ಇದರ ನಂತರ ಏನು ಆಗುತ್ತದೆ ಎಂಬುದು ನಿಮಗೇ ಗೊತ್ತಲ್ಲವೇ.
ನೀವು ತಡವಾಗಿ ಮಲಗಿ, ತಡವಾಗಿ ಎದ್ದರೆ ಆಗುವ ಪರಿಣಾಮವೇನು, ನೀವು ಎಂದಾದರೂ ರಾತ್ರಿ ತಡವಾಗಿ ನಿದ್ರೆ ಹೋಗಿದ್ದೀರಾ, ಮರುದಿನ ನೀವು ಎಷ್ಟೇ ತಡವಾಗಿ ಎದ್ದರೂ ಸಹ ನಿಮಗೆ ಬಹಳೇ ಆಯಾಸವಾಗುವ ಅನುಭವ ಆಗಿದೆಯೇ ಖಂಡಿತವಾಗಿಯೂ ತಡವಾಗಿ ಮಲಗಿ ತಡವಾಗಿ ಏಳುವ ವಿಧಾನ ನಿಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕರ, ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳ ನಿವಾರಣೆಗೆ ಸಾಕಷ್ಟು ಸಮಯ ಸಿಗದಿರುವುದಷ್ಟೇ ಅಲ್ಲ ನಿಮ್ಮ ದೇಹವು ಅದರ ಅತಿಮುಖ್ಯ ಕಾರ್ಯನಿರ್ವಹಣೆಯಿಂದಲೂ ಸಹ ವಂಚಿತವಾಗುತ್ತದೆ.
ಬೆಳಗಿನ ಜಾವದ 3ಘಂಟೆಯಿಂದ 5 ಘಂಟೆಯವರೆಗೆ ಬಹುಪಾಲು ರಕ್ತಪರಿಚಲನೆಯು ನಿಮ್ಮ ಪುಪ್ಫುಸ(lung)ದಲ್ಲಿ ಕೇಂದ್ರೀಕೃತವಾಗಿರುತ್ತದೆ, ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು, ಸರಿ ಆವಾಗ ನೀವು ವ್ಯಾಯಾಮ ಮಾಡಬೇಕು ಹಾಗೂ ಶುದ್ಧ ಗಾಳಿಯಲ್ಲಿ ಉಸಿರಾಡಬೇಕು, ನಿಮ್ಮ ದೇಹದಲ್ಲಿ ಒಳ್ಳೆಯ ಶಕ್ತಿಯನ್ನು ಹೊಂದಬೇಕು, ಪ್ರಮುಖವಾಗಿ ಒಂದು ಹೂದೋಟದಲ್ಲಿ ಇರಬೇಕು, ಈ ಅವಧಿಯಲ್ಲಿ ವಾತಾವರಣವು ಬಹಳ ಶುದ್ಧವಾಗಿದ್ದು, ಸಾಕಷ್ಟು ಲಾಭದಾಯಕ ಋಣವಿದ್ಯುತ್ ಕಣಗಳನ್ನು ಒಳಗೊಂಡಿರುತ್ತದೆ.
ಬೆಳಗಿನ ಜಾವದ 5ಘಂಟೆಯಿಂದ ಮುಂಜಾನೆ 7 ಘಂಟೆಯ ಅವಧಿಯಲ್ಲಿ ರಕ್ತಪರಿಚಲನೆಯು ಹೆಚ್ಚಿನದಾಗಿ ದೊಡ್ಡ ಕರುಳಿನಲ್ಲಿ ಕೇಂದ್ರೀಕೃತವಾಗಿರುತ್ತದೆ, ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು, ನೀವು ವಿಸರ್ಜನಾ ಕಾರ್ಯ ಮಾಡಬೇಕು, ನಿಮ್ಮ ದೊಡ್ಡ ಕರುಳಿನಲ್ಲಿ ಸಂಗ್ರಹಿತವಾದ ಎಲ್ಲ ಅನವಶ್ಯಕಗಳನ್ನು ಹೊರಹಾಕಬೇಕು, ನಿಮ್ಮ ದೇಹವು ಹೆಚ್ಚು ಪೌಷ್ಟಿಕಾಂಶಗಳನ್ನು ದಿನವಿಡೀ ಸ್ವೀಕರಿಸಲು ನಿಮ್ಮ ದೇಹವನ್ನು ಸಿದ್ಧಗೊಳಿಸಿಕೊಳ್ಳಬೇಕು.
ಮುಂಜಾನೆ 7ರಿಂದ 9ಘಂಟೆಯವರೆಗೆ, ಬಹುತೇಕ ರಕ್ತೊರಿಚಲನೆಯು ನಿಮ್ಮ ಉದರದಲ್ಲಿ ಅಂದರೆ ಹೊಟ್ಟೆಯಲ್ಲಿ ಕೇಂದ್ರೀಕೃತವಾಗಿರುತ್ತದೆ ಈ ಅವಧಿಯಲ್ಲಿ ನೀವು ಏನು ಮಾಡಬೇಕು ನಿಮ್ಮ ಬೆಳಗಿನ ಉಪಾಹಾರವನ್ನು ಮಾಡಬೇಕು, ಇದು ನಮಗೆ ಆ ದಿನದ ಅತ್ಯಂತ ಪ್ರಮುಖವಾದ ಊಟವಾಗಿರುತ್ತದೆ, ಬೆಳಗಿನ ಉಪಾಹಾರದಲ್ಲಿ ಅವಶ್ಯಕವಾದ ಎಲ್ಲ ಪೌಷ್ಟಿಕಾಂಶಗಳು ಸಿಗುವಂತೆ ಖಚಿತಪಡಿಸಿಕೊಳ್ಳಿ ನಿಗದಿತ ಸಮಯದಲ್ಲಿ ಯೋಗ್ಯ ಉಪಾಹಾರವನ್ನು ಸೇವಿಸದೇ ಇರುವುದು ನಿಮಗೆ ಭವಿಷ್ಯದ ದಿನಗಳಲ್ಲಿ ಬಹಳಷ್ಟು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತರುತ್ತದೆ.
ಇದು ನೀವು ನಿಮ್ಮ ದೈನಿಕವಾಗಿ ಅನುಸರಿಸಬೇಕಾದ ವಿಧಾನ ಹಳ್ಳಿಗಳಲ್ಲಿ ಹಾಗೂ ಹೊಲಗದ್ದೆಗಳ ಪರಿಸರದಲ್ಲಿ ಜೀವಿಸುವ ಜನರು ಆರೋಗ್ಯಪೂರ್ಣರಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಅವರು ಬೇಗನೇ ನಿದ್ದೆಹೋಗುತ್ತಾರೆ ಹಾಗೂ ಬೇಗ ಎದ್ದೇಳುತ್ತಾ ಅವರ ಜೈವಿಕ ಗಡಿಯಾರದ ಅನುಸಾರ ಜೀವಿಸುವುದರ ಕಾರಣ ಆರೋಗ್ಯವಂತರಾಗಿ ಇರುತ್ತಾರೆ, ಯಾರೇ ಒಬ್ಬರು ಈ ಮೇಲೆ ವಿವರಿಸಿದ ವಿಧಾನವನ್ನು ಅನುಸರಿಸುತ್ತಾರೋ, ಅವರು ಖಂಡಿತವಾಗಿ ಆಲ್ಹಾದತೆಯ ಅನುಭವ ಪಡೆಯುತ್ತಾರೆ ಹಾಗೂ ದಿನವಿಡೀ ಹೆಚ್ಚು ಉತ್ಸಾಹಭರಿತರಾಗಿರುತ್ತಾರೆ.
ಈ ವಾಸ್ತವಗಳನ್ನು ನಮ್ಮ ಯುವಪೀಳಿಗೆಯು ಅರಿತುಕೊಳ್ಳುವ ಅಗತ್ಯ ಇರುವದರಿಂದ, ಇದನ್ನು ಸಾಧ್ಯವಾದಷ್ಟು ಹೆಚ್ಚು ಮುಂದುವರಿಕೆ ಮಾಡಿರಿ, ಆಂಗ್ಲಭಾಷೆಯಲ್ಲಿ ನನ್ನ ಆತ್ಮೀಯರಿಂದ ನನಗೆ ಬಂದ ಅವತರಣಿಕೆಯನ್ನು ಅನುವಾದಿಸಿ ಕಳಿಸಿದ್ದೇನೆ, ಇದರಿಂದ ಕೆಲವರಿಗಾದರೂ ವಿಶೇಷತಃ ಪ್ರಯೋಜನವಾದಲ್ಲಿ ನನ್ನ ಶ್ರಮ ಸಾರ್ಥಕ.