ಒಣಗಿದ ಅಳಲೆ ಕಾಯಿ ಉಪಯೋಗಗಳು : ಜೀರ್ಣೋತ್ತೇಜಕ, ಜಲವರ್ಧಕ, ವಾತಹಾರಿ ಮತ್ತು ಕಫಾಹಾರಿ, ಆಮಶಂಕೆ, ಉಬ್ಬಸ, ಕೆಮ್ಮು, ದಮ್ಮು, ಗಂಟಲು ಉರಿ, ದಾಹ, ವಾಂತಿ, ಬಿಕ್ಕಳಿಕೆ, ಹೃದಯಬೇನೆ, ಕಣ್ಣುಬೇನೆ, ಉರಿಮೂತ್ರ, ಪಿತ್ತ ಕೆರಳುವಿಕೆ, ಬಾವು, ರಕ್ತಸೋರುವ ಮೂಲವ್ಯಾಧಿ, ಸನ್ನಿಪಾತ, ತೊನ್ನು, ಕಜ್ಜಿ, ಕಷ್ಟಶ್ವಾಸ, ಮಲಬದ್ಧತೆ, ರಕ್ತಹೀನತೆ, ಚಿತ್ತಭ್ರಮೆ, ಉನ್ಮಾದ ಮೊದಲಾದ ರೋಗಗಳಿಗೆ ಔಷಧಿ ತಯಾರಿಸಲು ಇದನ್ನು ಉಪಯೋಗಿಸುತ್ತಾರೆ.
ಮರದ ತೊಗಟೆ : ಅಳಲೆಕಾಯಿಯನ್ನು ಮಾಗುವ ಮೊದಲು ತಿಂದರೆ ಮಲಕಟ್ಟುತ್ತದೆ. ಇದನ್ನು ಆಮಶಂಕೆ, ಅತಿಸ್ರಾವಕ್ಕೆ ಉಪಯೋಗಿಸಬಹುದು. ಹಣ್ಣನ್ನು ತಿಂದರೆ ಭೇದಿಯಾಗುತ್ತದೆ. ಇದು ಶಕ್ತಿವರ್ಧಕ ಮತ್ತು ವಾತಹಾರಿ. ಗುಲ್ಮ (ಪ್ಲೀಹ) ರೋಗಗಳನ್ನೂ ಗುಣಪಡಿಸುತ್ತದೆ. ಜ್ಞಾಪಕಶಕ್ತಿಯನ್ನೂ ಹೆಚ್ಚಿಸುತ್ತದೆ. ಒಣಗಿದ ಹಣ್ಣನ್ನು ಚೆನ್ನಾಗಿ ನುಣುಪಾಗಿ ಪುಡಿಮಾಡಿ ಚೂರ್ಣವಾಗಿ ಉಪಯೋಗಿಸುತ್ತಾರೆ. ಹಲ್ಲುಗಳಲ್ಲಿನ ರಕ್ತಸ್ರಾವಕ್ಕೂ ವಸಡುಗಳ ಗಾಯಕ್ಕೂ ಇದು ಗುಣಕಾರಿಯಾಗಿದೆ.
ಅಳಲೆ ಕಾಯಿ : ಹಣ್ಣನ್ನು ಒರಟಾಗಿ ಪುಡಿಮಾಡಿ ಹೊಗೆಬತ್ತಿ ಮಾಡಿ ಸೇದುವುದರಿಂದ ಅಸ್ತಮ ಕೆಮ್ಮು ಕಡಿಮೆಯಾಗುತ್ತದೆ. ಹಣ್ಣಿನ ಕಷಾಯದಿಂದ ಗಾಯ ತೊಳೆದರೆ ರಕ್ತಸ್ರಾವ ನಿಲ್ಲುತ್ತದೆ. ಕಲ್ಲಿನ ಮೇಲೆ ಹಣ್ಣನ್ನು ತೇದು ಗಂಧವನ್ನು ಸುಟ್ಟಗಾಯ, ಹೊಪ್ಪಳೆಗೆ ಹಚ್ಚಿದರೆ ಗುಣವಾಗುತ್ತದೆ. ಒಂದು ರಾತ್ರಿ ಹಣ್ಣನ್ನು ನೆನೆಹಾಕಿ ಆ ನೀರಿನಿಂದ ಕಣ್ಣುತೊಳೆದರೆ ಕಣ್ಣುಗಳಿಗೆ ತಂಪಾಗುತ್ತವೆ. ಜಜ್ಜಿದ ಗಾಯ, ಉರಿಯುವ ಕುರು, ಹುಣ್ಣು ಮೊದಲಾದವುಗಳಿಗೆ ಹಣ್ಣನ್ನು ಪುಡಿಮಾಡಿ ಬೆಣ್ಣೆಯೊಡನೆ ಬೆರೆಸಿ ಹಚ್ಚಿದರೆ ಜಾಗ್ರತೆ ಗುಣವಾಗುತ್ತದೆ. ಅಳಲೆ ಮರದ ತೊಗಟೆಯನ್ನು ಸೇವಿಸಿದರೆ ಹೃದಯ ಶಕ್ತಿ ಹೆಚ್ಚುತ್ತದೆ ಮತ್ತು ಮೂತ್ರಸ್ರಾವವನ್ನು ಅಧಿಕಗೊಳಿಸುತ್ತದೆ.
ಜೊತೆಯಲ್ಲಿ ಇದನ್ನು ಓದಿ ಈ ಚಿಕ್ಕ ಏಲಕ್ಕಿಯಲ್ಲಿದೆ ನೀವು ತಿಳಿಯದ ಆರೋಗ್ಯಕಾರಿ ಗುಣ.
ಏಲಕ್ಕಿ ಎಲೆಯು ಮೂಲ ಬೇರಿನ ಬಳಿ ಅಥವಾ ಕಾಂಡದ ಮೇಲೆ ಬೆಳೆಯುತ್ತದೆ. ಇದರ ಹೂವುಗಳು ದ್ವಿಲಿಂಗಿಗಳಾಗಿರುತ್ತವೆ. ಏಲಕ್ಕಿಯನ್ನು ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ, ಕೊಡಗು ಮತ್ತು ಸಕಲೇಶಪುರಗಳಲ್ಲಿ ಬೆಳೆಯಲಾಗುತ್ತದೆ.
ಏಲಕ್ಕಿಯನ್ನು ಔಷಧವಾಗಿ ಉಪಯೋಗಿಸುತ್ತಾರೆ ಹಾಗೂ ಸಾಂಬಾರು ಪದಾರ್ಥವಾಗಿಯೂ ಉಪಯೋಗಿಸುತ್ತಾರೆ, ಫ್ಲೂವಿನಂತಹ ಜ್ವರಕ್ಕೆ ಇದನ್ನು ಔಷಧವಾಗಿ ಬಳಸುತ್ತಾರೆ, ದನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆಯು ಕಂಡುಬಂದಾಗಲು ಇದರ ಬಳಕೆಯನ್ನು ಮಾಡಬಹುದಾಗಿದೆ.
ಮಕ್ಕಳ ಬಿಕ್ಕಳುವಿಕೆಗೆ ಇದನ್ನು ಸಕ್ಕರೆಯೊಂದಿಗೆ ಉಪಯೋಗಿಸಬಹುದು, ಅಜೀರ್ಣ ಮತ್ತು ವಾಕರಿಕೆಗೂ ಔಷಧವಾಗಿ ಬಳಸುತ್ತಾರೆ, ಅನಾರೋಗ್ಯದ ಸಂದರ್ಭದಲ್ಲಿನ ಬಾಯಿಯ ವಾಸನೆಗೆ ಏಲಕ್ಕಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಏಲಕ್ಕಿಯನ್ನು ಬಳಸುತ್ತಾರೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.