ಸಾವಿರಾರು ಜನರ ಎದುರಿಗೆ ಸಾಮಾನ್ಯ ಕೋರಸ್ ಗಾಯಕನಿಗೆ ಎಸ್ ಪಿ ಬಿ ಮಾಡಿದ್ದೇನು ಗೊತ್ತಾ. ದಂಗಾಗಿಹೋದ ಜನ.

0
1361

ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಯಾರಿಗೆ ತಾನೇ ಗೊತ್ತಿಲ್ಲ? ಅವರು ದೇಶಾದ್ಯಂತ, ರಾಜ್ಯಾದ್ಯಂತ, ಪ್ರಪಂಚದಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು, ಲಕ್ಷಾಂತರ ಹಾಡುಗಳನ್ನು ಜನರ ಮುಂದೆ ಪ್ರಸ್ತುತಪಡಿಸಿದ್ದಾರೆ. ಅಂತಹ ಮಹಾನ್ ಗಾನಗಾರುಡಿಗ ಇಂದು ಕರೋನ’ವೈ’ರಸ್ ನಂತಹ ಮಹಾಮಾರಿಯಿಂದ ಬಳಲುತ್ತಿದ್ದಾರೆ. ಅವರು ಆದಷ್ಟು ಬೇಗ ಚೇತರಿಕೆ ಕಂಡು ಹೊರಬರಲಿ ಎಂದು ಕೋಟ್ಯಾಂತರ ಜನರು ಪ್ರಾರ್ಥಿಸುತ್ತಿದ್ದಾರೆ.

ಈ ನಡುವೆ ಅವರ ಸರಳತೆಯನ್ನು ಸಾರುವ ಒಂದು ವಿಶೇಷ ಮಾಹಿತಿ ಇಲ್ಲಿದೆ. ಸರಿ ಸುಮಾರು ಎಂಟು – ಒಂಬತ್ತು ತಿಂಗಳ ಕೆಳಗೆ ನಡೆದ ಒಂದು ಘಟನೆ, ಕಳೆದ ವರ್ಷ ವೈಟ್’ಫೀಲ್ಡ್’ನಲ್ಲಿ ನಡೆದ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಮ್ ಅವರು ಬಂದು ಹಾಡಬೇಕಿತ್ತು. ಆ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದರು. ಕಾರ್ಯಕ್ರಮವೆಂದ ಮೇಲೆ ಅವರ ಹಾಡುಗಳಿಗೆ ಕೋರಸ್ ಗಾಯಕರ ಅವಶ್ಯಕತೆ ಬಹಳ ಇರುತ್ತದೆ. ಹಾಗಾಗಿ ಕೋರಸ್ ಗಾಯಕರು ಕೂಡ ಅವರ ತಂಡದಲ್ಲಿ ಇದ್ದರು.

ಎಸ್.ಪಿ.ಬಿ. ಅವರು ವೇದಿಕೆಯ ಮೇಲೆ ಬಂದ ತಕ್ಷಣ ಮೊದಲಿಗೆ ಹಾಡಿನ ಸಾಹಿತ್ಯವನ್ನು ಒಮ್ಮೆ ನೋಡಿಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ‘ಆಸೆಯ ಭಾವ ಒಲವಿನ ಜೀವ’ ಹಾಡಿಗೆ ಕೊನೆಯ ಚರಣದ ಕೆಲವು ಸಾಲುಗಳು ಅವರ ಟ್ಯಾಬ್ಲೆಟ್ ನಲ್ಲಿ ಅಳಿಸಿಹೋಗಿದ್ದವು. ಆಗ ಅಲ್ಲೇ ಇದ್ದ ವಾದ್ಯವೃಂದದವರಲ್ಲಿ ಯಾರಿಗಾದರೂ ಈ ಕೊನೆಯ ಸಾಲುಗಳು ತಿಳಿದಿದೆಯಾ ಎಂದು ಕೇಳಿದರಂತೆ. ಆಗ ಅಲ್ಲೇ ಇದ್ದ ಕೋರಸ್ ಗಾಯಕ ಬಂದು ಆ ಕೊನೆಯ ಸಾಲುಗಳನ್ನು ತುಂಬಿಸಿದರಂತೆ.

ತಕ್ಷಣವೇ ಊಹಿಸಲಾರದ ಒಂದು ಘಟನೆ ನಡೆಯಿತು. ಸಾವಿರಾರು ಜನರ ಮುಂದೆ ಎಸ್.ಪಿ.ಬಿ. ಆ ಹುಡುಗನಿಗೆ ಬಗ್ಗಿ ನಮಸ್ಕರಿಸಿ, ನಾನು ಹಾಡಿರುವ ಸಾವಿರಾರು ಹಾಡುಗಳ ಸಾಹಿತ್ಯವನ್ನು ನೆನಪಿಸಿಕೊಳ್ಳುವುದು ನನಗೆ ಕೊಂಚ ಕಷ್ಟ. ಅಂತಹ ಸಂದರ್ಭದಲ್ಲಿ ಯುವಪೀಳಿಗೆಯ ಬಾಲಕ ನನ್ನ ಹಾಡುಗಳನ್ನು ಇನ್ನೂ ಸಂಪೂರ್ಣವಾಗಿ ನೆನಪಿಟ್ಟುಕೊಂಡಿದ್ದಾನೆ, ಇವನಿಗೊಂದು ಚಪ್ಪಾಳೆ ಬರಲಿ ಎಂದು ಬಗ್ಗಿ ನಮಸ್ಕರಿಸಿ ಸಾವಿರಾರು ಜನರ ಕೈಯಲ್ಲಿ ಚಪ್ಪಾಳೆ ಸಲ್ಲಿಸಿದರಂತೆ.

ಇಂತಹ ಮೇರು ವ್ಯಕ್ತಿಯ ಅದ್ಭುತ ವ್ಯಕ್ತಿತ್ವವನ್ನು ಕಂಡು ವೇದಿಕೆಯಲ್ಲಿ ನೆರೆದಿದ್ದ ವಾದ್ಯವೃಂದದವರು, ವೇದಿಕೆಯ ಮುಂದಿದ್ದ ಸಾವಿರಾರು ಕೇಳುಗರು ದಂಗಾಗಿ ಹೋದರಂತೆ.

LEAVE A REPLY

Please enter your comment!
Please enter your name here