ರಾಧಾ-ಕೃಷ್ಣ ಧಾರಾವಾಹಿಗೆ ಶೀರ್ಷಿಕೆ ಗೀತೆ ಹಾಡಿದ ಗಾಯಕಿ ಇವರೇ.

0
2704

ಕೊರೋನ ದೇಶಕ್ಕೆ ಕಾಲಿಟ್ಟ ಸಂದರ್ಭದಿಂದ, ಭಾರತದಾದ್ಯಂತ ಸುದ್ದಿ ವಾಹಿನಿಗಳು ಹಾಗೂ ಮನರಂಜನಾ ವಾಹಿನಿಗಳ ಮೇಲೆ ಬಹಳ ದೊಡ್ಡ ಹೊ’ಡೆತ ಬಿದ್ದಿತ್ತು. ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿದ್ದರಿಂದ ಚಿತ್ರೀಕರಣ ಮಾಡಬಾರದು ಎಂಬ ಕಠಿಣವಾದ ಕಾಯ್ದೆಯು ಜಾರಿಗೆ ಬಂದಿತ್ತು. ಇದೇ ಕಾರಣದಿಂದಾಗಿ ಹಲವಾರು ಚಲನಚಿತ್ರಗಳು, ಹಲವಾರು ಧಾರವಾಹಿಗಳು ತಮ್ಮ ಚಿತ್ರೀಕರಣವನ್ನು ನಿಲ್ಲಿಸಿದ್ದವು. ಇಂಥ ಸಮಯದಲ್ಲಿ ಮನರಂಜನೆಯ ವಾಹಿನಿಗಳು ಮುನ್ನಡೆಯಬೇಕಾದ್ದರಿಂದ ಇತರೆ ಭಾಷೆಯ ವಾಹಿನಿಗಳಲ್ಲಿ ಪ್ರಸಾರವಾಗಿದ್ದ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಅದನ್ನು ಪ್ರಸಾರ ಮಾಡುವ ನಿರ್ಧಾರಕ್ಕೆ ಬಂದವು. ಆದರೆ ಇದಕ್ಕೂ ಮುನ್ನ ಚಂದನ ವಾಹಿನಿಯ ರಾಮಾಯಣವನ್ನು ಪ್ರಸಾರ ಮಾಡಿ ಅತಿ ಹೆಚ್ಚು ಟಿ.ಆರ್.ಪಿಯನ್ನು ಪಡೆಯಿತು.

ಇದನ್ನು ಗಮನಿಸಿದ ವಾಹಿನಿಗಳು ತಮ್ಮ ಹಿಂದಿ ಅಥವಾ ಬೇರೆ ಭಾಷೆಯ ವಾಹಿನಿಗಳಲ್ಲಿ ಬಂದಿರುವ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಅದನ್ನು ಪ್ರಸಾರ ಮಾಡುವ ನಿರ್ಧಾರಕ್ಕೆ ಬಂದವು. ಡಬ್ಬಿಂಗ್’ಗೆ ಕರ್ನಾಟಕದಲ್ಲಿ ವಿರೋಧವಿದ್ದರೂ ಹೇಗೋ ಡಬ್ಬಿಂಗ್ ಧಾರವಾಹಿಗಳು ಪ್ರಸಾರವಾಗುವುದಕ್ಕೆ ಶುರುವಾಯಿತು. ಸ್ಟಾರ್ ಸುವರ್ಣ ದಲ್ಲಿ ಶುರುವಾದ ಮಹಾಭಾರತ ಧಾರವಾಹಿ ಅತ್ಯಂತ ಜನಪ್ರಿಯ ಧಾರವಾಹಿಯಾಯಿತು. ನಂತರ ಇದೇ ವಾಹಿನಿಯ ಮತ್ತೊಂದು ಧಾರವಾಹಿ ರಾಧಾಕೃಷ್ಣ ಕೂಡ ಉತ್ತಮ ಟಿ.ಆರ್.ಪಿಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ.

ರಾಧಾಕೃಷ್ಣ ಧಾರವಾಹಿಯ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತಿಯನ್ನು ಪಡೆಯಿತು. ಹಾಡುಗಳನ್ನು ಹಾಡಿದವರು ಯಾರು ಎಂಬ ಕುತೂಹಲ ಕರ್ನಾಟಕದ ಜನತೆಗೆ ಈಗಲೂ ಇದೆ. ಡಬ್ಬಿಂಗ್ ಅವತರಣಿಕೆಯ ಧಾರವಾಹಿಗಳಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡುವ ಕಂಠದಾನ ಕಲಾವಿದರು ಹಾಗೂ ಧಾರಾವಾಹಿಗಳಲ್ಲಿ ಬರುವ ಹಾಡುಗಳನ್ನು ಕನ್ನಡಕ್ಕೆ ಹಾಡುವ ಹಾಡುಗಾರರನ್ನು ಸ್ಟುಡಿಯೋಗಳು ಹುಡುಕುವುದಕ್ಕೆ ಶುರುಮಾಡಿದವು. ಅಂತಹ ಸಮಯದಲ್ಲಿ ರಾಧಾಕೃಷ್ಣ ಧಾರವಾಹಿಯ ನೀ ಪ್ರೀ’ತಿಯು ಈ ಪ್ರೇ’ಮವು ಎಂಬ ಹಾಡನ್ನು ಅನಿರುದ್ಧ ಶಾಸ್ತ್ರಿ ಹಾಗೂ ಚಿನ್ಮಯಿ ಚಂದ್ರಶೇಖರ್ ಅವರು ಹಾಡಿದ್ದಾರೆ.

ಚಿನ್ಮಯಿ ಅವರು ಮೂಲತಹ ಬೆಂಗಳೂರಿನವರೇ ಆಗಿದ್ದು ಹಲವಾರು ವರ್ಷಗಳಿಂದ ಹಲವಾರು ಕಾರ್ಯಕ್ರಮಗಳಲ್ಲಿ ಗಾಯನ ಪ್ರದರ್ಶನವನ್ನು ನೀಡಿದ್ದಾರೆ. ಕರ್ನಾಟಕದ ಪ್ರಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಎಸ್ ಪಿ ಬಾಲಸುಬ್ರಹ್ಮಣ್ಯಂ, ಇತರೆ ದಿಗ್ಗಜರ ಜೊತೆ ವೇದಿಕೆ ಹಂಚಿಕೊಂಡಿರುವ ಚಿನ್ಮಯಿ ಚಂದ್ರಶೇಖರ್ ಅವರು ಹಲವು ಚಿತ್ರಗಳಿಗೆ ತಮ್ಮ ಇಂಪಾದ ದನಿಯ ಮೂಲಕ ಜೀವ ತುಂಬಿದ್ದಾರೆ. ಅರ್ಜುನ್ ಜನ್ಯ ಮತ್ತು ಇನ್ನು ಹಲವಾರು ದಿಗ್ಗಜರ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿರುವ ಚಿನ್ಮಯಿ ಅವರು ಕೇವಲ ಕಾನ್ಸರ್ಟ್’ಗಳಿಗಷ್ಟೇ ಸೀಮಿತವಾಗಿರದೆ ಹಲವಾರು ಸಂಗೀತ ನಿರ್ದೇಶಕರ ಮಾರ್ಗದರ್ಶನದಡಿಯಲ್ಲಿ ಕೆಲಸ ಮಾಡಿದ್ದಾರೆ.

ಇತ್ತೀಚೆಗಷ್ಟೇ ಶುರುವಾಗಿರುವ ಹೊಸ ವಾಹಿನಿ ದಂ’ಗಾಲ್ ಕನ್ನಡದಲ್ಲಿ ಬರುತ್ತಿರುವ ಮತ್ತೊಂದು ಧಾರವಾಹಿಗೆ ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ, ಹಾಗೂ ಸರೈನೊಡು ಚಿತ್ರದ ಕನ್ನಡದ ಅವತರಣಿಕೆಯ ತೆಲುಸಾ ಹಾಡಿಗೆ ಹಿನೆಲೆ ಧ್ವನಿಯಾಗಿದ್ದಾರೆ. ಹೀಗೆಯೇ ಮತ್ತಷ್ಟು ಡಬ್ಬಿಂಗ್ ಅವತರಣಿಕೆಯ ಚಿತ್ರಗಳಾದ ಮಿಸ್ಟರ್ ಪರ್ಫೆಕ್ಟ್, ಎಂದಿರನ್, ಪೆಟ್ಟ ಚಿತ್ರಗಳಿಗೆ ಹಾಡಿದ್ದಾರೆ. ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಮುಂಬರುವ ಚಿತ್ರ ‘ಸಾರಾ ವಜ್ರ’ಕ್ಕೆ ಹಿನ್ನೆಲೆ ಗಾಯನವನ್ನು ಕೂಡ ಮಾಡಿದ್ದಾರೆ.

ಇಷ್ಟೇ ಅಲ್ಲದೇ ಇತ್ತೀಚೆಗಷ್ಟೇ ನಡೆದ 58ನೇ ಬೆಂಗಳೂರು ಗಣೇಶೋತ್ಸವದಲ್ಲಿ ಸಂಗೀತ ಪ್ರದರ್ಶನವನ್ನು ನೀಡಿದ್ದಾರೆ. ಕನ್ನಡದ ಖ್ಯಾತ ಧಾರವಾಹಿ ‘ಇವಳು ಸುಜಾತಾ’ಗೆ ಶೀರ್ಷಿಕೆ ಗೀತೆಯನ್ನು ಸಹ ಹಾಡಿದ್ದಾರೆ. ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ಚಿನ್ಮಯಿ ಚಂದ್ರಶೇಖರ್’ರವರು ತನ್ನ ಪೋಷಕರ ಹಾಗೂ ಪತಿಯ ಸಹಕಾರದಿಂದ ಇಷ್ಟೆಲ್ಲ ಸಾಧ್ಯ ಎಂದು ಹೇಳುತ್ತಾರೆ. ಅವರ ಎಲ್ಲಾ ಮುಂಬರುವ ಕಾರ್ಯಗಳಿಗೆ ಅತ್ಯುನ್ನತ ಯಶಸ್ಸು ದೊರೆಯಲಿ ಎಂಬುದು ನಮ್ಮೆಲ್ಲರ ಆಶಯ.

LEAVE A REPLY

Please enter your comment!
Please enter your name here