ಕೆಲವು ವಿಚಾರಗಳನ್ನು ನೀವು ಗಮನಿಸಿರ ಬಹುದು ಅದೆಂದರೆ ನೀವು ನಿಮ್ಮ ಪರ್ಸ್ ನಲ್ಲಿ ಹಣ ಇಟ್ಟರೆ ಅದು ನಿಮಗೆ ತಿಳಿಯದ ರೀತಿಯಲ್ಲಿ ಖರ್ಚಾಗಿ ಬಿಡುತ್ತದೆ, ಇದೆ ಕಾರಣಕ್ಕೆ ಹಲವಾರು ತಮ್ಮ ಪರ್ಸ್ ನಲ್ಲಿ ಹಣ ವಿಡುವುದಿಲ್ಲ ಹಾಗು ಅದೆಷ್ಟೇ ಪರ್ಸ್ ಬದಲಾಯಿಸಿದರು ಪರ್ಸ್ನಲ್ಲಿ ಹಣ ತುಂಬುತ್ತಾಯಿಲ್ಲ ಅಂದ್ರೆ ಮುಂದೆ ಓದಿ.
ಎಲ್ಲರು ತಮ್ಮಲಿರುವ ಅತ್ಯಮೂಲ್ಯ ವಸ್ತುಗಳನ್ನು ಪರ್ಸ್ ನಲ್ಲಿಟ್ಟುಕೊಳ್ಳುತಾರೆ. ಪರ್ಸ್ ಸದಾ ದುಡ್ಡಿನಿಂದ ತುಂಬಿರಬೇಕು ಎಂದು ಅನೇಕರು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಕಷ್ಟ ಕೂಡ ಪಡ್ತಾರೆ, ಆದ್ರೆ ಕೆಲಸ ಮಾಡಿದರೊಂದೇ ಸಾಕಾಗುವುದಿಲ್ಲ, ಜೊತೆಗೆ ಅದೃಷ್ಟ ಕೂಡ ಇರಬೇಕು.
ಶಾಸ್ತ್ರಗಳು ಹಾಗು ಜ್ಯೋತಿಷಿಗಳು ಹೇಳುವ ಕೆಲವೊಂದು ಸಲಹೆ ಅನುಸರಿಸಿದರೆ ನಿಮ್ಮ ಪರ್ಸ್ ಸದಾ ಹಣದಿಂದ ತುಂಬಿರುತ್ತದೆ.
ಕುಳಿತ ಭಂಗಿಯಲ್ಲಿರುವ ಲಕ್ಷ್ಮಿ ಫೋಟೋವನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಬೇಕು, ಕುಳಿತ ಭಂಗಿಯ ಲಕ್ಷ್ಮಿ ಫೋಟೋ ಇಡುವುದರಿಂದ ದುಡ್ಡು ನಿಮ್ಮ ಪರ್ಸಿನಲ್ಲಿ ನಿಲ್ಲುತ್ತದೆ.
ನಿಮ್ಮ ಪರ್ಸ್ ನಲ್ಲಿ ಹಣದ ಜೊತೆಯಲ್ಲಿ ತಿನ್ನುವ ವಸ್ತುಗಳನ್ನ ಇಡಬೇಡಿ, ಎಂಜಿಲು ಆಹಾರ ಇಡಲೇ ಬಾರದು.
ಕೆಂಪು ಕಾಗದದಲ್ಲಿ ನಿಮಗೆನಿಷ್ಟ ಎಂಬುದನ್ನು ಬರೆದ ಕೆಂಪು ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಅದನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಂಡರೆ ನೀವು ಬೇಗ ಹಣವಂತರಾಗಬಹುದು.
ಸ್ವಲ್ಪ ಅಕ್ಕಿ ಕಾಳನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳುವುದರಿಂದ ಅನವಶ್ಯಕ ಖರ್ಚು ಕಡಿಮೆಯಾಗುತ್ತದೆ.
ಯಾವುದೇ ಕಾರಣಕ್ಕೂ ನಿಮ್ಮ ಪರ್ಸ್ ನಲ್ಲಿ ನೋಟುಗಳನ್ನೂ ಉಲ್ಟಾ ಇಡಬೇಡಿ.
ಪರ್ಸ್ ನಲ್ಲಿ ಗಾಜು ಅಥವಾ ಸಣ್ಣ ಚಾಕುವನ್ನು ಅವಶ್ಯಕವಾಗಿಟ್ಟುಕೊಳ್ಳಿ.