ಪ್ರತಿ ದಿನ ನೀವು ಮಾಡುವ ಈ ತಪ್ಪಿನಿಂದಲೇ ಹೊಟ್ಟೆ ನೋವು ಬರುವುದು.

0
1471

ಸಾಮಾನ್ಯವಾಗಿ ಹೊಟ್ಟೆ ನೋವು ಅಜೀರ್ಣದಿಂದ ನಮ್ಮ ಅಲಕ್ಷ್ಯದಿಂದ ಬರುವುದು, ನಾವು ಶುಚಿಯಾಗಿದರೆ ಇದ್ದರೂ ಹೊಟ್ಟೆನೋವು ಬರುವ ಅವಕಾಶ ಉಂಟು, ಹೊಟ್ಟೆ ನೋವು ಕಡಿಮೆಯಾಗದಿದ್ದರೆ ಬೇಧಿಯಾಗುವ ಅವಕಾಶ ಉಂಟು, ಅಜೀರ್ಣದಿಂದ ಹೊಟ್ಟೆ ನೋವು ಉಂಟಾದರೆ ಕಾಳುಮೆಣಸನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿಕೊಳ್ಳಬೇಕು ಸ್ವಲ್ಪ ಉಪ್ಪು ಮತ್ತು ತುಪ್ಪ ಸೇರಿಸಿ ಬಿಸಿ ಅನ್ನಕ್ಕೆ ಕಲೆಸಿ ತಿನ್ನಬೇಕು ಆಗ ಹೊಟ್ಟೆನೋವು ದೂರವಾಗುವುದು.

ಏಲಕ್ಕಿ ಕಾಳನ್ನು ಹುರಿದು ಹಳೆ ಹುಣಸೆಹಣ್ಣು ಪುದಿನ ಕಾಳು ಮೆಣಸಿನ ಪುಡಿ ಸೇರಿಸಿ ಅರೆದು ಪೇಸ್ಟ್ ತಯಾರಿಸಬೇಕು ಹಾಕಿ ತಯಾರಿಸಿದ ಪೇಸ್ಟನ್ನು ಅನ್ನಕ್ಕೆ ಕಲೆಸಿ ತಿನ್ನಬೇಕು ಆಗ ಹೊಟ್ಟೆ ನೋವು ಶಮನಗೊಳ್ಳುತ್ತದೆ.

ಈರುಳ್ಳಿಯನ್ನು ಬೇರೆ ತರಕಾರಿಗಳ ಜೊತೆ ಸೇರಿಸಿ ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನುವುದರಿಂದ ಹೊಟ್ಟೆನೋವು ದೂರವಾಗುವುದು, ಶುಂಠಿ-ಬೆಳ್ಳುಳ್ಳಿ ಆಹಾರದ ಪದಾರ್ಥಗಳ ಜೊತೆ ಮಿತವಾಗಿ ಸೇವಿಸುವುದರಿಂದ ಅಜೀರ್ಣ ದೂರವಾಗಿ ಹೊಟ್ಟೆನೋವು ದೂರವಾಗುವುದು.

ಹೊಟ್ಟೆನೋವು ಹೊಟ್ಟೆ ಉಬ್ಬರ ಇರುವವರು ಊಟಕ್ಕೆ ಮೊದಲು ಒಂದು ಚಮಚ ನಿಂಬೆ ರಸವನ್ನು ಸೇವಿಸುವುದರಿಂದ ಶಮನವಾಗುವುದು.

ಹೊಟ್ಟೆ ನೋವು ಇರುವವರು ಊಟವಾದ ನಂತರ ರಾತ್ರಿ ಮಲಗುವಾಗ ಬಾಳೆ ಹಣ್ಣನ್ನು ಸೇವಿಸಬೇಕು ಆಗ ತಿಂದ ಆಹಾರ ಜೀರ್ಣವಾಗಿ ಹೊಟ್ಟೆನೋವು ಕಾಣಿಸಿಕೊಳ್ಳುವುದಿಲ್ಲ, ಓಮಿನ ಕಾಳನ್ನು ಅರಳು ಉಪ್ಪಿನ ಜೊತೆ ಸೇರಿಸಿ ಬಾಯಿಗೆ ಹಾಕಿಕೊಂಡು ಅಗಿಯಬೇಕು ಆಗ ಒಟ್ಟೆ ನೋವು ದೂರವಾಗುವುದು.

ಹೆಚ್ಚು ಕಾಫಿ ಟೀಯನ್ನು ಸೇವನೆ ಮಾಡಬಾರದು, ಅಜೀರ್ಣವನ್ನು ಹೋಗಲಾಡಿಸಲು ಜೀರಿಗೆಯನ್ನು ಬಾಯಿಗೆ ಹಾಕಿಕೊಂಡು ಅಗಿಯಬೇಕು, ತಕ್ಷಣದಲ್ಲಿ ನಿಮಗೆ ಸಿಗುವ ಯಾವುದಾದರೂ ಹಣ್ಣಿನ ರಸವನ್ನು ಕುಡಿಯಬೇಕು, ಆಗ ತಕ್ಷಣ ನೋವು ಕಡಿಮೆಯಾಗಲು ಶುರುವಾಗುತ್ತದೆ.

ಗಮನಿಸಿ : ಅಜೀರ್ಣದಿಂದ ಹೊಟ್ಟೆ ನೋವು ಬರುವುದು ಹಸಿವು ಹೆಚ್ಚಿಸಿಕೊಂಡು ಸಮತೋಲನ ಆಹಾರವನ್ನು ಸೇವಿಸಬೇಕು.

LEAVE A REPLY

Please enter your comment!
Please enter your name here