ದಕ್ಷಿಣ ಬ್ರೆಝಿಲ್ ಹಾಗೂ ಪೆರುಗ್ವೆ ಮೂಲದ ಅನಾನಸು ಯುರೋಪಿಯನ್ನರ ಆಗಮನಕ್ಕಿಂತ ಮುಂಚೆ ದಕ್ಷಿಣ ಅಮೆರಿಕಾ ಹಾಗೂ ಮೆಕ್ಸಿಕೋ ಮೂಲಕ ಭಾರತಕ್ಕೆ ಬಂದಿತ್ತು. ಅನಾನಸು ಹಣ್ಣಿನ ಆಂಗ್ಲ ಹೆಸರು ಪೈನಾಪಲ್, ಸಸ್ಯಶಾಸ್ತ್ರೀಯ ಹೆಸರು ಅನಾನಸ್, ಇದರ ಕುಟುಂಬ ಬ್ರೂಮಿಲಿಯಾ. ಅನಾನಸ್ ಗಿಡ ಎರಡೂವರೆ ಅಡಿಗಳಿಂದ 5 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಸಣ್ಣ, ದಪ್ಪ ಕಾಂಡವನ್ನು ಹೊಂದಿದ್ದು ಉದ್ದವಾದ ಎಲೆಗಳಿಂದ ಕೂಡಿರುತ್ತದೆ. ಆಫ್ರಿಕಾದಲ್ಲಿ ಇದರ ಎಲೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಹಣ್ಣು ಸಿಹಿ-ಹುಳಿಯಾಗಿದ್ದು ಹಸಿಯಾಗಿ ತಿನ್ನಲು ಮಾತ್ರವಲ್ಲದೆ ಸಾಂಬಾರು, ಪುಡ್ಡಿಂಗ್, ಸಲಾಡ್ ಡೆಸರ್ಟ್’ಗಳಲ್ಲೂ ಬಳಸುತ್ತಾರೆ.
ಔಷಧಿಯಾಗಿ ಅನಾನಸ್ :
ಹಣ್ಣು, ಎಲೆ, ಬೇರು ಇವು ಅನನಾಸಿನ ಔಷಧೋಪಚಾರಿಯಾಗಿರುವ ಭಾಗಗಳು. ಅನಾನಸ್ ಹಣ್ಣಿನ ರಸದಲ್ಲಿ ಹಾಗೂ ಗಿಡದಲ್ಲಿರುವ ಬ್ರೊಮೇಲಿನ್ ಎಂಬ ಕಿಣ್ವವನ್ನು ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಪಚನ ಶಕ್ತಿ ಹೆಚ್ಚಿಸುವ ಕಿಣ್ವವಾಗಿ ಉಪಯೋಗಿಸುತ್ತಾರೆ. ಶಸ್ತ್ರಚಿಕಿತ್ಸೆ ಬಳಿಕ ನೋವು ನಿವಾರಕವಾಗಲು ಹಾಗೂ ಘಾತಗಳ ಸಂದರ್ಭದಲ್ಲಿ ಊತ ಇಳಿಕೆಗೂ ಬ್ರೊಮೇಲಿನ್ ಕಿಣ್ವ ಉಪಯುಕ್ತ. ಹಿಂದಿನ ಕಾಲದಲ್ಲಿ ಸಮುದ್ರಯಾನಿಗಳಿಗೆ ಉಂಟಾಗುತ್ತಿದ್ದ ವಾಂತಿಯನ್ನು ತಡೆಗಟ್ಟಲು ಅನಾನಸ್ ರಸವನ್ನು ಬಳಸುತ್ತಿದ್ದರು.
ಅನಾನಸ್ ಜ್ಯೂಸ್ ಮೂ’ತ್ರ ಸಂದರ್ಭದ ಉ’ರಿಯನ್ನು ಮತ್ತು ಮೂ’ತ್ರ ತಡೆ ಸಮಸ್ಯೆಯನ್ನು ನಿವಾರಿಸುತ್ತದೆ. ಅನಾನಸ್ ಜ್ಯೂಸನ್ನು ಹೆರಿಗೆಗೆ ಮುಂಚೆ ಸೇವಿಸಿದರೆ ಹೆರಿಗೆ ಸುಲಭವಾಗುತ್ತದೆ. ಈ ಹಣ್ಣು ಉಷ್ಣ ಗುಣಗಳನ್ನು ಹೊಂದಿದ್ದು ಅಧಿಕವಾಗಿ ಸೇವಿಸಿದರೆ ಸ್ತ್ರೀಯರಲ್ಲಿನ ಮಾಸಿಕ ಸ್ರಾವ ಬೇಗನೆ ಆಗುತ್ತದೆ. ಗರ್ಭಿಣಿ ಸ್ತ್ರೀಯರು ಮೂರು ತಿಂಗಳವರೆಗೆ ಅನಾನಸು ಹಣ್ಣನ್ನು ಸೇವಿಸಲೇಬಾರದು.
ಗುಹ್ಯ ರೋಗಗಳ (ಹೆಂಗಸರ ಜೀವೋತ್ಪತ್ತಿ ಭಾಗದ ಖಾಯಿಲೆಗಳು) ಚಿಕಿತ್ಸೆಯಲ್ಲಿ ಕಾಯಿ ಅನಾನಸ್’ಅನ್ನು ಜೇನಿನೊಂದಿಗೆ ಬಳಸುತ್ತಾರೆ. ಇದರ ಬೇರಿನ ಪುಡಿಯನ್ನು ನೀರಿನೊಂದಿಗೆ ಕಲಸಿ ಲೇಪದಂತೆ ಮೂಲವ್ಯಾಧಿಯ ಮೊಳಕೆಗಳಿಗೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಬೇರಿನ ಕಷಾಯವನ್ನು ಸೇವಿಸಿದರೆ ಕೈ ಕಾಲುಗಳಲ್ಲಿ ಊತ ಕಡಿಮೆಯಾಗುತ್ತದೆ. ಅನಾನಸ್ ಎಲೆಯ ರಸವು ಭೇದಿಯನ್ನು ಉಂಟುಮಾಡುತ್ತದೆ. ಹಾಗೂ ಜಂತು ಹುಳುಗಳನ್ನು ನಾಶಪಡಿಸುತ್ತದೆ.
ಅಡುಗೆಯಲ್ಲಿ ಅನಾನಸು :
ಅನಾನಸು ಮೊರಬ್ಬ : ಹಣ್ಣಾದ ಅನಾನಸ್’ಅನ್ನು ಚಿಕ್ಕ ತ್ರಿಕೋಣಾಕಾರದ ಬಿಲ್ಲೆಗಳಾಗಿ ಕ’ತ್ತರಿಸಿ. ನಂತರ ನೀರಿನ ಅಂಶ ಆರುವವರೆಗೂ ಒಣಗಿಸಿ. ಒಂದು ಅಗಲ ಬಾಯಿಯ ಪಾತ್ರೆಯಲ್ಲಿ ಒಂದು ಲೋಟ ಸಕ್ಕರೆಗೆ ಸ್ವಲ್ಪ ನೀರು ಬೆರೆಸಿ ಕುದಿಸಿ. ದಪ್ಪವಾಗಿರುವ ಸಕ್ಕರೆಯ ಪಾಕ ಮಾಡಿಕೊಳ್ಳಿ. ಅದರಲ್ಲಿ ಅನಾನಸ್ ನ ಬಿಲ್ಲೆಗಳನ್ನು ಹಾಕಿ ಏಲಕ್ಕಿ ಪುಡಿ ಬೆರೆಸಿ ಆರಿದ ಬಳಿಕ ಜೇನು ಬೆರೆಸಿ. ಇದು ಶಕ್ತಿದಾಯಕ. ನಿತ್ಯವೂ 2 3 ಚಮಚ ಸೇವಿಸಬಹುದು.
ಅನಾನಸ್ಸು ಪುಡ್ಡಿಂಗ್ : ಒಲೆಯ ಮೇಲೆ ಎರಡು ಕಪ್ ನೀರು ಬಿಸಿ ಮಾಡಿಕೊಳ್ಳಿ. ದುಂಡಗಿನ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿ. ಅದರಲ್ಲಿ ಒಂದು ಕಪ್ ರವೆಯನ್ನು ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಅನಾನಸ್ ಹಣ್ಣಿನ ಸಣ್ಣಸಣ್ಣ ಚೂರುಗಳನ್ನು ಬೆರೆಸಿ. 2 ಕಪ್ ಕುದಿಸಿದ ನೀರನ್ನು ಹಾಕಿ ಸಟ್ಟುಗದಿಂದ ಮುಗುಚುತ್ತಿರಿ. ರವೆ ಬೇಯುತ್ತಾ ಬಂದಂತೆ ಒಂದು ಕಪ್ ಸಕ್ಕರೆ ಸೇರಿಸಿ ಪುನಹ ಮುಗುಚಿ. ಕೇಸರಿ ಪುಡಿ, ಏಲಕ್ಕಿ ಪುಡಿಯನ್ನು ಹಾಕಿ ಇನ್ನೊಮ್ಮೆ ಮುಗುಚಿ ಕೆಳಗಿಳಿಸಿ. ಈ ಸಿಹಿತಿನಿಸು ದೇಹಕ್ಕೆ ಪುಷ್ಟಿ ನೀಡುತ್ತದೆ. ವಾರಕ್ಕೊಮ್ಮೆ ಸೇವಿಸಬಹುದು.
ಅನಾನಸ್ ಜೂಸ್’ಅನ್ನು ಹೆರಿಗೆಗೆ ಮುಂಚೆ ಸೇವಿಸಿದರೆ ಹೆರಿಗೆ ಸುಲಭವಾಗುತ್ತದೆ. ಈ ಹಣ್ಣು ಉಷ್ಣ ಗುಣಗಳನ್ನು ಹೊಂದಿದ್ದು ಅಧಿಕವಾಗಿ ಸೇವಿಸಿದರೆ ಸ್ತ್ರೀಯರ ಮಾಸಿಕ ಸ್ರಾವ ಬೇಗನೆ ಆಗುತ್ತದೆ. ಗರ್ಭಿಣಿ ಸ್ತ್ರೀಯರು ಮೂರು ತಿಂಗಳವರೆಗೆ ಅನಾನಸ್ ಹಣ್ಣನ್ನು ಸೇವಿಸಲೇಬಾರದು. ಎಚ್ಚರಿಕೆ : ಅನಾನಸ್ ಚಿಕ್ಕ ಕಾಯಿಗಳನ್ನು ತಿನ್ನಲೇಬಾರದು. ಇದು ವಿ’ಷಕಾರಕ. ಅದು ವಿ’ಷಯುಕ್ತ ಗುಣಗಳನ್ನು ಹೊಂದಿವೆ. ಗಂಟಲಿನಲ್ಲಿ ಕೆರೆತ ಹಾಗೂ ತೀವ್ರ ಭೇದಿಯನ್ನು ಉಂಟುಮಾಡುತ್ತದೆ.