ದೇಶಾದ್ಯಂತ ಉತ್ತಮ ರಸ್ತೆಗಳಿಗಾಗಿ ಹಾಗೂ ನ್ಯಾಷನಲ್ ಹೈವೆಗಳಿಗಾಗಿ ಸರ್ಕಾರವು ಸಾವಿರಾರು ಕೋ’ಟಿ ರೂಪಾಯಿ ಖರ್ಚು ಮಾಡುತ್ತದೆ. ಅಷ್ಟೇ ಅಲ್ಲದೇ ಟೆಂಡರ್’ಗಳನ್ನು ಕೂಗಿ ಕಡಿಮೆ ಬೆಲೆಗೆ ಕೂಗುವ ಟೆಂಡರ್’ಗಳಿಗೆ ರಸ್ತೆ ಕಾಮಗಾರಿಯ ಕೆಲಸವನ್ನು ವಹಿಸುತ್ತದೆ ಸರಕಾರ. ಆದರೆ ಈ ರಸ್ತೆ ಕಾಮಗಾರಿ ಕೆಲಸದಲ್ಲಿ ನಡೆಯುತ್ತಿರುವ ಹ’ಗರ’ಣವು ಇತ್ತೀಚೆಗಷ್ಟೇ ಬೆಳಕಿಗೆ ಬರುತ್ತಿದೆ. ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಾದ ಎನ್ ಹೆಚ್ 75 ಹಾಗೂ ಮತ್ತಿತರ ಟೋಲ್ ಗೇಟ್ ಗಳಲ್ಲಿ ಇತ್ತೀಚೆಗೆ ಈ ಹ’ಗರ’ಣಗಳು ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ಇತ್ತೀಚೆಗೆ ಬಂದಿರುವ ಹೊಸ ರೂ’ಲ್ಸ್ ಪ್ರಕಾರ ನಾವು ಯಾವುದೇ ರೀತಿಯ ಸುಂಕವನ್ನು ಟೋಲ್ ಬೂತ್’ಗಳಿಗೆ ಹೋದಾಗ ನೀಡುವಂತಿಲ್ಲ. ಏಕೆಂದರೆ ಇತ್ತೀಚೆಗಷ್ಟೇ ದೇಶಾದ್ಯಂತ ಫಾಸ್ಟ್ ಟ್ಯಾಗ್ ಗಳನ್ನು ಮಾಡಲಾಗಿರುವುದರಿಂದ ನಮ್ಮ ಖಾತೆಯಲ್ಲಿರುವ ಹಣವನ್ನು ನೇರವಾಗಿ ನಾವು ಟೋಲ್ ಗೇಟ್ ನ ಮೂಲಕ ಸಂಚರಿಸಿದಾಗ ಅದು ನಮ್ಮ ಖಾತೆಯಿಂದ ಹಣವನ್ನು ಕಡಿತ ಮಾಡಿಕೊಳ್ಳುತ್ತದೆ.
ಆದರೆ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿರುವ ಒಂದು ವಿಡಿಯೋವನ್ನು ಆಧರಿಸಿ ಈ ಬರವಣಿಗೆಯನ್ನು ಪ್ರಸ್ತುತಪಡಿಸಲಾಗಿದೆ. ಈ ವಿಡಿಯೋದಲ್ಲಿರುವ ಸ’ತ್ಯಾಸತ್ಯ’ತೆಯು ನಂಬುವ ಹಾಗೆ ಇರುವುದರಿಂದ ಇದನ್ನು ಪ್ರತಿಯೊಬ್ಬರು ಗಮನದಲ್ಲಿಟ್ಟುಕೊಂಡು ಬಹಳ ಹು’ಷಾರಾಗಿ ನಿರ್ವಹಿಸಬೇಕಿದೆ. ಸಾಮಾನ್ಯವಾಗಿ ಮೇಲೆ ಹೇಳಿದ ಹಾಗೆ ನಾವು ಟೋಲ್ ಬೂತ್ ಒಳಗೆ ಸಂಚರಿಸಿದಾಗ ಮೇಲ್ಗಡೆ ಇರುವ ಸ್ಕ್ಯಾ’ನರ್ ಸ್ಕ್ಯಾ’ನಿಂಗ್ ಮೂಲಕ ನಮ್ಮ ಕಾರಿನ ಮೇಲಿರುವ ಸ್ಟಿಕ್ಕರ್ ಅನ್ನು ಸ್ಕ್ಯಾ’ನ್ ಮಾಡುತ್ತದೆ. ಅದರ ಮೂಲಕ ನಮ್ಮ ಖಾತೆಯಲ್ಲಿರುವ ಹಣವು ಟೆಂ’ಡರ್ ಕೂಗಿದ ವ್ಯಕ್ತಿಯ ಅಕೌಂಟ್’ಗಳಿಗೆ ಜಮೆಯಾಗುತ್ತದೆ. ಹೀಗೆ ಪ್ರತಿದಿನವೂ ಸಾವಿರಾರು ಕಾರುಗಳು ಓಡಾಡುತ್ತಿರುತ್ತವೆ.
ಆದರೆ ಕೆಲವೊಮ್ಮೆ ನೀವು ಗಮನಿಸಿರುತ್ತೀರಿ. ಒಮ್ಮೊಮ್ಮೆ ನಾವು ಟೋಲ್ಗೇಟ್ ನ ಒಳಗೆ ಸಂಚರಿಸಿದಾಗ ಒಂದು, ಸ್ಕ್ಯಾನ್ ಆಗುವುದಿಲ್ಲ ಇಲ್ಲವೇ ಯಾವುದೇ ರೀತಿಯ ಚಲಾವಣೆ ನಡೆಯುವುದಿಲ್ಲ. ನಾವು ನಿಂತಿರುವ ವಾಹನದ ಹಿಂದೆ ಬಹಳಷ್ಟು ವಾಹನಗಳು ಇರುವುದರಿಂದ ನಾವು ತುಂಬಾ ಆ’ತುರ ಮಾಡಿಕೊಂಡು ಆತನಿಗೆ ಬೈ’ದು 40 ಅಥವಾ 50 ರೂಪಾಯಿಗಳನ್ನು ಕೊಟ್ಟು ಒಂದು ರಸೀದಿಯನ್ನು ಪಡೆದುಕೊಂಡು ಕಾರನ್ನು ಚಲಾಯಿಸಿಕೊಂಡು ಮುಂದೆ ಬಂದು ಬಿಡುತ್ತೇವೆ. ಆದರೆ ಇಲ್ಲಿ ನಡೆಯುತ್ತಿರುವ ಹ’ಗರ’ಣ ಅಷ್ಟಿ’ಷ್ಟು ಸಣ್ಣದಲ್ಲ.
ಏಕೆಂದರೆ ಯಾವುದೇ ರೀತಿಯ ಸ್ಕ್ಯಾ’ನ್ಗಳು ನಡೆದರು ಅದು ಸರಿಯಾಗಿಯೇ ಇರಬೇಕು. ಏಕೆಂದರೆ ನಮ್ಮ ಕಾರಿನ ಮೇಲಿರುವ ಸ್ಟಿಕ್ಕರ್ ನಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಹಾಗಾದರೆ ತೊಂದರೆ ಇರುವುದು ಟೋಲ್ ಬೂತ್ ನಲ್ಲಿರುವ ಸ್ಕ್ಯಾನಿಂಗ್ ಡಿವೈಸ್ ನಲ್ಲಿ. ಎಷ್ಟೋ ಜನರಿಗೆ ಅಲ್ಲಿ ಸ್ಕ್ಯಾನ್ ಆಗದೆ ಗೇಟ್ ಓಪನ್ ಆಗದೆ ಹಣ ಕಟ್ಟಿ ಸ್ವಲ್ಪದೂರ ಬಂದಮೇಲೆ ಅವರ ಖಾತೆಯಿಂದ ಹಣ ಕಡಿತ ಗೊಂಡಿರುವುದು ಗಮನಕ್ಕೆ ಬಂದಿರುತ್ತದೆ.
ಹಾಗಾಗಿ ಈ ವಿಚಾರವಾಗಿ ಇದು ಕಂಪನಿಯನ್ನೇ ತಪ್ಪು ಎಂದು ಒಬ್ಬ ವ್ಯಕ್ತಿಯು ಟೋಲ್ ಬೂತ್ ಅವರೊಂದಿಗೆ ಜಗ’ಳಕ್ಕೆ ನಿಂತಾಗ ಸತ್ಯ ಬೆಳಕಿಗೆ ಬಂದಿದೆ. ಅದೇನೆಂದರೆ ಬೇಕಂತಲೇ ಅಲ್ಲಿ ಸ್ಕ್ಯಾ’ನ್ ಆದರೂ ಕೂಡ ಇಲ್ಲಿಯ ಗೇಟನ್ನು ಮುಚ್ಚಿ, ತಮ್ಮ ಕಾಫಿ ತಿಂಡಿ ಹಾಗೂ ಸಿ’ಗರೇ’ಟಿನ ಖ’ರ್ಚಿಗಾಗಿ ನಕ’ಲಿ ಬಿಲ್ ಪ್ರೊವೈಡರ್ ಅನ್ನು ತಯಾರಿಸಿಕೊಂಡು ಅದರ ಮೂಲಕ ನಮಗೆ ಹಣವನ್ನು ಪಾವತಿಸಿದ್ದೇವೆ ಎಂಬ ರಸೀದಿಯನ್ನು ಕೊಟ್ಟು ಮೋ’ಸ ಮಾಡಲಾಗುತ್ತಿದೆ.
ಆತುರ ದಲ್ಲಿರುವ ಗ್ರಾಹಕ ಹಿಂದೆ ನಿಂತಿರುವ ವಾಹನಗಳ ಶಬ್ದ ಮಾಲಿನ್ಯ ತಡೆಯಲಾಗದೆ ಆತುರದಲ್ಲಿ ಆ ಬಿಲ್ಲನ್ನು ಸರಿಯಾಗಿ ಗಮನಿಸದೆ ತೆಗೆದುಕೊಂಡು ಸದ್ಯ ದ್ವಾರವೂ ತೆಗೆಯುತ್ತಿಲ್ಲ ಎಂಬ ನೆಮ್ಮದಿಯಿಂದ ಮುಂದೆ ಹೊರಟು ಹೋಗಿರುತ್ತಾನೆ. ಆದರೆ ಸ್ವಲ್ಪ ದೂರದ ಮುಂದೆ ಹೋದಮೇಲೆ ಅವನ ಖಾತೆಯಿಂದಲೂ ಸಹ ಹಣವು ಕಡಿತಗೊಂಡಿರುವುದು ಕಂಡು ಎಷ್ಟು ಜನಕ್ಕೆ ಶಾ’ಕ್ ಆಗಿದೆ.
ಮುಂದಿನ ಬಾರಿ ನೀವು ಟೋಲ್ ಬೂತ್’ಗಳಿಗೆ ಹೋದಾಗ ಹೀಗೆನಾದರೂ ಆದರೆ ತಪ್ಪ’ದೆ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ ಇದನ್ನು ಸರಿಪಡಿಸಿಕೊಂಡು ಯಾವುದೇ ರೀತಿಯ ಹಣವನ್ನು ಪಾವತಿ ಮಾಡದೆ ಆರಾಮವಾಗಿ ನಿಮ್ಮ ವಾಹನವನ್ನು ಚಲಾಯಿಸಿ. ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗಿದೆ. ಇದನ್ನು ನಿಮ್ಮ ಸ್ನೇಹಿತರೊಟ್ಟಿಗೆ ಹಂಚಿಕೊಳ್ಳಿ. ಜಾಗರುಕತೆ ಎಲ್ಲರಿಗೂ ಮುಖ್ಯ.