ನಮ್ಮ ದೇಶದ ತಮಿಳುನಾಡಿನ ದಕ್ಷಿಣದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯು ದೇಶದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಈ ಪ್ರದೇಶವು ಮೂರು ಸಮುದ್ರಗಳಿಂದ ಕೂಡಿದ್ದು, ಪೂರ್ವಕ್ಕೆ ಬಂಗಾಳ ಕೊಲ್ಲಿ, ಪಶ್ಚಿಮಕ್ಕೆ ಹಿಂದೂ ಮಹಾ ಸಾಗರ, ಉತ್ತರಕ್ಕೆ ಅರಬ್ಬಿ ಸಮುದ್ರಗಳಿಂದ ಸುತ್ತುವರೆದಿದೆ. ಈ ಮೂರು ಸಮುದ್ರಗಳ ಸಂಗಮವಾದ ಪವಿತ್ರವಾದ ಸ್ಥಳವೆ ಕನ್ಯಾಕುಮಾರಿ ದೇವಿಯ ಪರಾಶ’ಕ್ತಿಯ ಪುಣ್ಯಕ್ಷೇತ್ರವಾಗಿದೆ. ಇಲ್ಲಿನ ಇತಿಹಾಸದ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನವೆ.
ಕನ್ಯಾಕುಮಾರಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಪ್ರಮುಖ ಸ್ಥಳವಾಗಿದೆ. ಈ ಅದ್ಭುತವಾದ ದೃಶ್ಯ ಸವಿಯಲು ಎಲ್ಲಾ ಧ’ರ್ಮದ ಭಕ್ತರು ಇಲ್ಲಿಗೆ ಬಂದು, ಸಮುದ್ರ ಸ್ನಾನ ಮಾಡಿ ದೇವಿಯ ದರ್ಶನ ಪಡೆಯುತ್ತಾರೆ. ಅಲ್ಲದೆ ಇಲ್ಲಿಗೆ ಭೇಟಿ ನೀಡುವರನ್ನು ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕ ಕೈ ಮಾಡಿ ಕರೆಯುತ್ತದೆ. ಇಲ್ಲಿರುವ ಕನ್ಯಾಕುಮಾರಿ ಅಮ್ಮನ ದೇವಸ್ಥಾನವನ್ನು ವಾಸ್ತುಶಿಲ್ಪದ ಪ್ರಕಾರ ಅದ್ಭುತವಾಗಿ ನಿರ್ಮಿಲಾಗಿದೆ. ಸಮುದ್ರ ತೀರದಲ್ಲಿರುವ ಈ ದೇವಸ್ಥಾನವನ್ನು ಪಾರ್ವತಿ ದೇವಿಗೆ ಅರ್ಪಿಸಲಾಗಿದೆ.
ಪೌರಾಣಿಕ ಕಥೆಯ ಪ್ರಕಾರ ಬನಸುರ ರಾ’ಕ್ಷಸನು ಎಲ್ಲಾ ದೇವರನ್ನು ಸೆ’ರೆಹಿಡಿದಿಟ್ಟುಕೊಂಡಿದ್ದನು. ಕೇವಲ ಕನ್ಯೆ ಮಾತ್ರ ಈ ರಾ’ಕ್ಷಸನನ್ನು ಕೊಲ್ಲಬಹುದಾಗಿತ್ತು. ಆದರೆ ಪರಮಾತ್ಮನಾದ ಶಿವನು ಹಾಗೂ ಈ ಕನ್ಯಾಕುಮಾರಿ ಒಬ್ಬರಿಗೊಬ್ಬರು ಪ್ರೀ’ತಿಸುತ್ತಿದ್ದರು. ಇಬ್ಬರು ಮದುವೆಯಾಗಲು ಬಯಸಿ, ಮದುವೆಯ ಸಮಯವನ್ನು ಮಧ್ಯರಾತ್ರಿ ನಿಗದಿಪಡಿಸುತ್ತಾರೆ. ಆದರೆ ವಾಸ್ತವದ ಅರಿವುಳ್ಳ ನಾರದಮುನಿಗಳು, ಮದುವೆಯನ್ನು ಅನೇಕ ವಿಧಗಳಲ್ಲಿ ರ’ದ್ದು ಮಾಡಲು ಯತ್ನಿಸಿ, ವಿ’ಫಲರಾಗುತ್ತಾರೆ. ಮದುವೆ ದಿನದಂದು ಪರಮಾತ್ಮನಾದ ಪರಶಿವನು ತನ್ನ ಪ್ರ’ಯಾಣವನ್ನು ಕನ್ಯಾಕುಮಾರಿಗೆ ಆರಂಭಿಸಿದಾಗ, ನಾರದಮುನಿಗಳು ಕೊನೆಯದಾಗಿ ತಾವು ಒಂದು ಕೋಳಿಯ ರೂಪವನ್ನು ತಾಳಿ ಕೂಗಲಾರಂಭಿಸಿದರು.
ಕೋಳಿಯ ಧ್ವನಿಯನ್ನು ಕೇಳಿದ ಪರಶಿವನು ಬೆಳಗಾಯಿತು, ಮದುವೆಯ ಮುಹೂರ್ತ ಕಳೆದು ಹೋಯಿತೆಂದು ಕೈಲಾಸಕ್ಕೆ ಹಿಂದಿರುಗಿದನು. ಆದರೆ ದೇವಿಯು ಶಿವನಿಗಾಗಿ ಅಲ್ಲೇ ಕಾಯುತ್ತ ಕುಳಿತಳು. ಶಿವನು ಮರಳಿ ಬಾರದ ಕಾರಣ ಅವಿವಾಹಿತಳಾಗಿ ಉಳಿಯಲು ನಿರ್ಧರಿಸುತ್ತಾಳೆ . ಇದಾದ ಬಳಿಕ ಎಲ್ಲಾ ದೇವತೆಗಳ ಪ್ರಾರ್ಥನೆ ಮತ್ತು ಮನವಿಯ ಮೇರೆಗೆ ಪರಮ ಆದಿಶಕ್ತಿಯಾದ ದೇವಿಯು ಕುಮಾರಿಯ ರೂಪವನ್ನು ಪಡೆದುಕೊಂಡು ಬನಸುರ ರಾ’ಕ್ಷಸನ ಸಂ’ಹಾರ ಮಾಡುವ ಮೂಲಕ ದೇವಾನು ದೇವತೆಗಳನ್ನು ಆ ರಾ’ಕ್ಷಸನಿಂದ ರ’ಕ್ಷಣೆ ಮಾಡುತ್ತಾಳೆ.
೮ ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಪಾಂಡ್ಯರಿಂದ ಕಟ್ಟಲಾಯಿತು. ನಂತರ ವಿಜಯನಗರ ಅರಸರು, ಚೋಳರು ಹಾಗೂ ನಾಯಕ ರಾಜರಿಂದ ನವೀಕರಣಕ್ಕೊಳಪಟ್ಟಿದೆ. ಪಾರ್ವತಿಯೂ ಶಿವನನ್ನು ಗಂ’ಡನಾಗಿ ಪಡೆಯಬೇಕೆಂದು ಈ ಜಾಗದಲ್ಲಿ ಕುಳಿತು ಧ್ಯಾನ ಮಾಡಲು ಆರಂಭಿಸಿದಳು. ಈಗ ಈ ಸ್ಥಳದಲ್ಲಿ ದೇವಿಯ ಭವ್ಯವಾದ ಮಂದಿರವಿದೆ . ಹೀಗಾಗಿ ಇಲ್ಲಿ ದೇವತೆಗಳ ಹೆಜ್ಜೆ ಗುರುತುಗಳನ್ನು ಕಾಣಬಹುದು. ಅಲ್ಲದೆ ಇದು ಮೂರು ಸಮುದ್ರಗಳ ಸಂಗಮವಾದ ಕಾರಣ, ಇಲ್ಲಿಯ ನೀರಿನ ಬಣ್ಣಗಳು ಮೂರು ರೀತಿಯಾಗಿ ವಿಭಿನ್ನವಾಗಿ ಕಾಣುತ್ತವೆ.
ಈ ಮೂರು ಸಮುದ್ರಗಳು ಕೂಡುವ ಘಟ್ಟದಲ್ಲಿ ಸ್ನಾನ ಮಾಡಿದರೆ ಆ’ತ್ಮ ಪರಿಶುದ್ಧತೆಯಾಗಿ ಪಾ’ಪವೆಲ್ಲವೂ ಕಳೆದು ಹೋಗಲಿದೆ ಎಂಬ ಪ್ರತೀತಿಯೂ ಇದೆ. ಸ್ವಾಮಿ ವಿವೇಕಾನಂದರು ಉತ್ತರ ಅಂಚಿನಿಂದ ತಮ್ಮ ತೀರ್ಥ ಯಾತ್ರೆಯನ್ನು ಆರಂಭಿಸಿ ಮಾರ್ಗದಲ್ಲಿ ಸಿಗುವ ಪುಣ್ಯ ಕ್ಷೇತ್ರಗಳಿಗೆ ಸಂದರ್ಶಿಸುತ್ತ, ಕೊನೆಗೆ ಕನ್ಯಾಕುಮಾರಿಗೆ ತಲುಪಿದರು. ಇಲ್ಲಿ ದೇವಿಯ ದರ್ಶನ ಮಾಡಿ, ಈಜುತ್ತ ಈಗ ಅವರ ಶಿಲಾ ಸ್ಮಾರಕ ಇರುವ ಸ್ಥಳಕ್ಕೆ ಬಂದು, ಅಲ್ಲಿ ಧ್ಯಾನಾಸಕ್ತರಾಗಿ ಕುಳಿತರು. ಆದ್ದರಿಂದ ಆ ಸ್ಥಳದಲ್ಲಿ ಅವರ ಹೆಸರಿನಲ್ಲಿ ಶಿಲಾ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಪುಣ್ಯಕಥೆಯನ್ನು ತಿಳಿದರೆ ಎಲ್ಲ ಪಾ’ಪಗಳೂ ನಾ’ಶವಾಗುತ್ತದೆ. ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಎಲ್ಲರಿಗೂ ಒಳಿತಾಗಲಿ. ಜೈ ತಾಯಿ ಪಾರ್ವತಿ ದೇವಿ.