ನಕ್ಷತ್ರಗಳ ರಾಜ ಪುಷ್ಯ ನಕ್ಷತ್ರದ ಪ್ರಾಮುಖ್ಯತೆ ಗೊತ್ತೇ. ಯಾವ ರಾಶಿಗಳ ಮೇಲೆ ಇದರ ಪ್ರಭಾವ ಬೀ’ರಲಿದೆ.

0
3805

ಪುಷ್ಯ ನಕ್ಷತ್ರದ ಪ್ರಾಮುಖ್ಯತೆ ಗೊತ್ತೇ. 2020 ಪುಷ್ಯ ನಕ್ಷತ್ರ ಯಾವೆಲ್ಲಾ ದಿನಗಳಲ್ಲಿ ಬೀಳಲಿದೆ. ಹಿಂದೂ ಧ’ರ್ಮ ಗ್ರಂಥಗಳಲ್ಲಿನ 27 ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರವು ಕೂಡ ಒಂದು. ಪುಷ್ಯ ನಕ್ಷತ್ರದ ಪ್ರಾಮುಖ್ಯತೆ ಯೇನೆಂಬುದು ನಿಮಗೆ ಗೊತ್ತೇ. 2020 ರಲ್ಲಿ ಪುಷ್ಯ ನಕ್ಷತ್ರ ಯಾವೆಲ್ಲಾ ಪ್ರಮುಖ ದಿನಗಳಲ್ಲಿ ಬೀಳಲಿದೆ ಗೊತ್ತಾ. ಪುಷ್ಯ ನಕ್ಷತ್ರವು ನಿಮ್ಮ ರಾಶಿಯ ಮೇಲೆ ಪ್ರಭಾವ ಬೀರಲಿದೆಯೇ. ಒಬ್ಬ ವ್ಯಕ್ತಿ ಕುರಿತು ನಿಖರವಾದ ಭವಿಷ್ಯ ಹೇಳಲು ಆತನ ನಕ್ಷತ್ರವನ್ನು ನೋಡಲೇಬೇಕು.

ನಕ್ಷತ್ರಗಳ ಮೂಲಕ ವ್ಯಕ್ತಿಯ ಗುಣ, ಬೌದ್ಧಿಕ ಚಿಂತನೆಗಳು ಹಾಗೂ ಶ’ಕ್ತಿಯನ್ನು ಸುಲಭವಾಗಿ ವಿಶ್ಲೇಷಿಸಬಹುದು. ಇವುಗಳ ಸಹಾಯಗಳಿಂದ ಗ್ರ’ಹಗತಿಗಳ ಸ್ಥಿತಿಗತಿಗಳನ್ನು ನೋಡುವುದು ಸುಲಭ. ನಿಮ್ಮ ನಕ್ಷತ್ರ ಯಾವುದು ಎಂದು ತಿಳಿದುಕೊಂಡು ಜ್ಯೋತಿಷಿಗಳ ಹತ್ತಿರ ಹೋದರೆ ಅವರು ನಿಮ್ಮ ಭವಿಷ್ಯವನ್ನು ನಕ್ಷತ್ರಗಳನ್ನು ಲೆಕ್ಕಹಾಕಿ ಹೇಳುತ್ತಾರೆ. ಹಿಂದೂ ಧ’ರ್ಮ ಗ್ರಂಥದಲ್ಲಿ ಮುಖ್ಯವಾಗಿ 27 ನಕ್ಷತ್ರಗಳನ್ನು ಗುರುತಿಸಲಾಗುತ್ತದೆ. ಈ ಪೈಕಿ ಪುಷ್ಯ ನಕ್ಷತ್ರವೂ ಒಂದು.

ಹಿಂದೂ ಪಂಚಾಂಗ ಹಾಗೂ ಧರ್ಮ ಗ್ರಂಥಗಳಲ್ಲಿ ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳ ರಾಜ ಎಂದು ಉಲ್ಲೇಖಿಸಲಾಗಿದೆ. ಪುಷ್ಯ ನಕ್ಷತ್ರವನ್ನು ಸಮೃದ್ಧ, ಸರ್ವೋಚ್ಚ, ಫಲಪ್ರದ ಎಂದು ಪರಿಗಣಿಸಲಾಗಿದೆ. ಹಾಗಾಗಿ ಇದು ಶುಭ ಲಾಭವನ್ನು ತರುತ್ತದೆ. ಧ’ರ್ಮ ಗ್ರಂಥಗಳಲ್ಲಿ ಪುಷ್ಯ ನಕ್ಷತ್ರ ತೃಪ್ತಿ ಹಾಗೂ ಕ್ಷಮಾ ಭಾವ ನೀಡುವ ಏಕೈಕ ನಕ್ಷತ್ರವಾಗಿದೆ. ಈ ನಕ್ಷತ್ರವು ಬದುಕಿನ ಪ್ರತೀ ಗುರಿಗಳನ್ನು ಮುಟ್ಟಲು ನೆರವಾಗುತ್ತದೆ. ಪುಷ್ಯ ಎಂದರೆ ಪೋಷಕ ಎಂದರ್ಥ. ಇದು ಶ’ಕ್ತಿ ಮತ್ತು ಸಾಮ’ರ್ಥ್ಯವನ್ನು ಪ್ರತಿನಿಧಿಸುತ್ತದೆ.

ಪುಷ್ಯ ನಕ್ಷತ್ರದ ಪ್ರಾಚೀನ ಹೆಸರು ತಿಷ್ಯ. ಸಂತೃಪ್ತಿ ಹಾಗೂ ಸಮೃದ್ಧಿ ಎಂಬುದು ಇದರ ಅರ್ಥ. ಪಂಡಿತ ಪಾರಮರು ಈ ನಕ್ಷತ್ರವನ್ನು ಶುಭ ಲಾಭ ತರುವ ನಕ್ಷತ್ರ ಎಂದು ಪರಿಗಣಿಸುತ್ತಾರೆ. ಪುಷ್ಯ ನಕ್ಷತ್ರವು ಹಿಂದೂ ಪಂಚಾಂಗದಲ್ಲಿ ಎರಡೇ ಸ್ಥಾನದಲ್ಲಿದೆ. ವೇಗವಾಗಿ ಸಂಚರಿಸುವ ಚಂದ್ರನನ್ನು ಇದು ಸೂಚಿಸುತ್ತದೆ. ಪುಷ್ಯ ನಕ್ಷತ್ರವು ಚಂದ್ರ ಬಲದಿಂದ ಸಂಪತ್ತು ಮತ್ತು ಜ್ಞಾನ ಎರಡನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ. ಬೇರೆ ಬೇರೆ ನಕ್ಷತ್ರಗಳಲ್ಲಿ ಚಂದ್ರನು ಬಂದಾಗ ಬೇರೆ ಬೇರೆ ರೀತಿಯ ಪರಿಣಾಮಗಳು ಉಂಟಾಗುತ್ತದೆ.

ಪುಷ್ಯ ನಕ್ಷತ್ರದಲ್ಲಿ ಬೀಳುವ ಮಹೂರ್ತದಲ್ಲಿ ಯಾವುದೇ ಕಾರ್ಯಕ್ಕೆ ಕೈ ಹಾಕಿದರೆ ಸಿದ್ಧಿಸುತ್ತದೆ ಎಂದು ಪಂಚಾಂಗದಲ್ಲಿ ಹೇಳಲಾಗಿದೆ. ಅದರಲ್ಲೂ ಅಪರೂಪಕ್ಕೆ ಬೀಳುವ ಗುರುಪುಷ್ಯಾಮೃತ ಯೋಗವನ್ನು ಬಹಳ ಶುಭಕರ ಎಂದು ಪರಿಗಣಿಸಲಾಗಿದೆ. ಈ ಯೋಗದಲ್ಲಿ ಕೈ ಹಾಕುವ ಕೆಲಸಗಳು ಯಶಸ್ವಿಯಾಗುತ್ತದೆ. ಉದ್ಯಮಿಗಳಿಗೆ ಗುರುಪುಷ್ಯಾಮೃತ ಯೋಗವು ಲಾಭವನ್ನುಂಟುಮಾಡುತ್ತದೆ. ಈ ಯೋಗದಲ್ಲಿ ಮಂತ್ರ ಪಠಣೆ, ಧ್ಯಾನ ಹಾಗೂ ದಾನ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ.

ಪುಷ್ಯ ನಕ್ಷತ್ರದ ಪ್ರಾಮುಖ್ಯತೆ : ನಿಗದಿತ ಮುಹೂರ್ತಗಳಲ್ಲಿಒಳ್ಳೆಯ ಕೆಲಸಕ್ಕೆ ಕೈ ಹಾಕಿದರೆ ಶುಭ ಲಾಭವಾಗುತ್ತದೆ ಎಂದು ಪಂಚಾಂಗ ಹೇಳುತ್ತದೆ. ಇಂತಹ ಶುಭ ಮುಹೂರ್ತಗಳಲ್ಲಿ ಪುಷ್ಯ ನಕ್ಷತ್ರವೂ ಒಂದು. ಜನ ಸಾಮಾನ್ಯರಿಗೆ ಇದು ಸನ್ಮಂಗಳವನ್ನುಂಟುಮಾಡುತ್ತದೆ. ಕಾರ್ತಿಕ ಅಮಾವಾಸ್ಯೆಗೂ ಮುನ್ನ ಬೀಳುವ ಪುಷ್ಯ ನಕ್ಷತ್ರದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅದು ಕೈಗೂಡುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಸೋಮವಾರ, ಗುರುವಾರ ಹಾಗೂ ರವಿವಾರ ಪುಷ್ಯ ನಕ್ಷತ್ರ ಬಿದ್ದರೆ ಅದನ್ನು ವರ ನಕ್ಷತ್ರ ಯೋಗ ಎಂದು ಕರೆಯುತ್ತಾರೆ.

ಈ ಸಮಯದಲ್ಲಿ ಕೈ ಹಾಕುವ ಕೆಲಸಗಳು ಸಿದ್ಧಿಸುತ್ತವೆ. ಅದರಲ್ಲೂ ಗುರುವಾರ ಬೀಳುವ ಗುರು ಪುಷ್ಯ ಯೋಗವು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಪುಷ್ಯ ನಕ್ಷತ್ರವು ಎಂಟನೇ ಸ್ಥಾನದಲ್ಲಿರುವ ಕಾರಣ ಅದು ಶುಭಕರ ಎಂದು ಹೇಳುತ್ತಾರೆ. ಗುರು ಪುಷ್ಯ ನಕ್ಷತ್ರವು ಯಾವುದೇ ವಸ್ತುಗಳನ್ನು ಖರೀದಿಸಲು ಶುಭ ಘಳಿಗೆ. ಹುಟ್ಟು ನಕ್ಷತ್ರವಾದರೆ : ಶನಿಯು ಪುಷ್ಯ ನಕ್ಷತ್ರದ ಪೋಷಕ ಗ್ರಹವಾಗಿರುತ್ತದೆ. ಈ ನಕ್ಷತ್ರವು ಗುರುವಿನ ನಿಯಂತ್ರಣದಲ್ಲಿರುತ್ತದೆ.

ಹಾಗಾಗಿ ಪುಷ್ಯ ನಕ್ಷತ್ರವನ್ನು ಪರಿಶುದ್ಧತೆ, ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಶನಿಯು ಸ್ಥಿರತೆ ಕಾಯ್ದುಕೊಳ್ಳುವ ಗ್ರಹವಾಗಿದೆ. ಗುರು ಹಾಗೂ ಶನಿ ಬಲದಿಂದ ಪುಷ್ಯ ನಕ್ಷತ್ರವು ಶುಭಕರವಾಗಿರುತ್ತದೆ. ಪಂಚಾಂಗದಲ್ಲಿ ಅತ್ಯಂತ ಶುಭವಾದ ರವಿ ಪುಷ್ಯ ಯೋಗವು ಅಪರೂಪಕ್ಕೆ ಪುಷ್ಯ ನಕ್ಷತ್ರದಲ್ಲಿ ಕಾಣಿಸಿಕೊಳ್ಳುತ್ತದೆ, ಈ ಸಮಯ ಅತ್ಯಂತ ಶ್ರೇಷ್ಠ. ಪುಷ್ಯ ನಕ್ಷತ್ರದಲ್ಲಿ ಜನಿಸುವವರು ಕ’ಷ್ಟದಲ್ಲಿರುವವರಿಗೆ ಕೈ ಚಾಚಲು ಸದಾ ಸಿದ್ಧರಾಗಿರುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಕ’ಷ್ಟಗಳನ್ನು ನೋಡುವ ಅವರು ತಮ್ಮ ಅನುಭವದಿಂದ ಎಲ್ಲವನ್ನೂ ಕಲಿತು ಪ್ರಪಂಚವನ್ನು ನೋಡುವ ದೃಷ್ಟಿಯನ್ನೇ ಬದಲಿಸಿಕೊಂಡಿರುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದವರು ಶ್ರಮದಾಯಕ ಕೆಲಸಗಳನ್ನು ಸುಲಭವಾಗಿ ಮಾಡುತ್ತಾರೆ. ಜೊತೆಗೆ ತಮ್ಮ ಕೆಲಸವನ್ನು ಅಷ್ಟೇ ಪೂಜಿಸುತ್ತಾರೆ. ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರ ಮೇಲೆ ದೈವ ಕೃಪೆ ಯಾವಾಗಲೂ ಇರುತ್ತದೆ. ಸತ್ಯದ ದಾರಿಯನ್ನು ಎಂದೂ ಬಿಡಲೊಪ್ಪದ ಈ ನಕ್ಷತ್ರದವರು ತಮ್ಮ ಸಂಗಾತಿಗಳ ಮೇಲೆ ಕಾಳಜಿ ಹೊಂದಿರುತ್ತಾರೆ. ಪ್ರವಾಸ ಪ್ರಿಯರೂ ಕೂಡ. ಅವರ ಶ್ರಮದಾಯಕ ಕೆಲಸವು ಸ್ವಲ್ಪ ನಿಧಾನವಾಗಿಯಾದರೂ ಉತ್ತಮ ಫಲ ನೀಡುತ್ತದೆ.

ತಮ್ಮ ದಾರಿಯಲ್ಲಿ ಎಷ್ಟೇ ಕ’ಷ್ಟ ಬಂದರೂ ಅವರು ಸತ್ಯ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತಾರೆ. ಯಾವ ಕೆಲಸಕ್ಕೆ ಪುಷ್ಯ ನಕ್ಷತ್ರ ಶ್ರೇಷ್ಠ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು. ಪ್ರವಾಸ ಆರಂಭಿಸಲು. ಹೊಸ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು. ಗುರುವಿನಿಂದ ಮಂತ್ರಗಳನ್ನು ಕಲಿಯಲು. ಕಾರ್ಯಕ್ರಮಗಳನ್ನು ಆಯೋಜಿಸಲು. ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು. ಪುಷ್ಯ ನಕ್ಷತ್ರವಿದ್ದರೂ ಈ ವಾರದಂದು ಶುಭಕರವಲ್ಲ: ಈಗಾಗಲೇ ಹೇಳಿರುವ ವಾರಗಳ ಹೊರತಾಗಿ ಇನ್ಯಾವುದೇ ದಿನ ಪುಷ್ಯ ನಕ್ಷತ್ರದಲ್ಲಿ ಕೆಲಸಗಳಿಗೆ ಕೈ ಹಾಕಿದರೆ ಅದು ಕೈಗೂಡುವುದಿಲ್ಲ.

ಇದು ವರದ ಬದಲು ಗ್ರಹದೋ’ಷದಿಂದ ಶಾ’ಪವಾಗಿ ಪರಿಣಮಿಸಬಹುದು. ಶುಕ್ರವಾರ ಪುಷ್ಯ ನಕ್ಷತ್ರವಿದ್ದು ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅದು ವಿ’ಫಲವಾಗುವ ಜೊತೆಗೆ ನಿಮಗೆ ಬಹಳಷ್ಟು ನ’ಷ್ಟವನ್ನೂ ತರುತ್ತದೆ. ಅದೇ ರೀತಿ ಪುಷ್ಯ ನಕ್ಷತ್ರವು ಬುಧವಾರ ಬಿದ್ದಾಗಲೂ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ವಿ’ಫಲರಾಗುತ್ತೀರಿ. ಶುಕ್ರವಾರ ಹಾಗೂ ಬುಧವಾರವನ್ನು ಹೊರತುಪಡಿಸಿ ಇನ್ನೆಲ್ಲಾ ದಿನಗಳಲ್ಲೂ ಪುಷ್ಯ ನಕ್ಷತ್ರವು ಶುಭ ಎಂದು ಪರಿಗಣಿಸಲಾಗುತ್ತದೆ. ರವಿ ಹಾಗೂ ಗುರು ಪುಷ್ಯ ಯೋಗವು ಯಶಸ್ಸು ಹಾಗೂ ಶುಭ ತರುವ ಯೋಗಗಳಾಗಿವೆ. ಪುಷ್ಯ ನಕ್ಷತ್ರವು ಮದುವೆಯಂತಹ ವಿಷಯದಲ್ಲಿ ಅಷ್ಟು ಶುಭಕರವಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ.

ಮುಂಬರಲಿರುವ ಪುಷ್ಯ ನಕ್ಷತ್ರ ಬೀಳುವ ದಿನಗಳು. 11 ಅಕ್ಟೋಬರ್ 2020, ರವಿವಾರ. 08 ನವೆಂಬರ್ 2020 ರವಿವಾರ. 28 ಜನವರಿ 2021 ಗುರುವಾರ. 25 ಫೆಬ್ರವರಿ 2021 ಗುರುವಾರ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಳ್ಳೆಯ ವಿಷಯ ಹಾಗೆ ಮರೆಯದೆ ನಮ್ಮ ಪೇಜ್ ನ್ನು ಲೈಕ್ ಮಾಡಿ ಹೆಚ್ಚಿನ ದಿನ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಶಾಸ್ತ್ರಗಳ ಬಗ್ಗೆ ಅಪ್ಡೇಟ್ಗಳನ್ನು ಪಡೆಯಿರಿ.

LEAVE A REPLY

Please enter your comment!
Please enter your name here