ಯಾರು ಆತ್ಮವಿಶ್ವಾಸದಲ್ಲಿ ಅಚಲ ನಂಬಿಕೆ ಇರಿಸಿ ಮುನ್ನಡೆಯುತ್ತಾರೋ, ಅವರು ದು’ರ್ಬಲರೇ ಆಗಿದ್ದರೂ ದೈವ ರಕ್ಷಿಸುತ್ತದೆ. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ. ವಾಲಿ-ಸುಗ್ರೀವ ಕಾ’ಳಗದ ಒಂದು ತರ್ಕ ಇದು. ನ್ಯಾಯ ಸಮ್ಮತವಾದ ಪಕ್ಷಕ್ಕೆ ಇನವಂಶೋತ್ತಮನು ಬೆಂಬಲ ನೀಡುವುದು ಇನವಂಶದ ಧರ್ಮವಾಗಿತ್ತು. ಆ ಇನವಂಶದ ಪ್ರತಿನಿಧಿ ಶ್ರೀರಾಮ ಚಂದ್ರನು ಸುಗ್ರೀವನಿಗೆ ಬೆಂಬಲವಾಗಿ ನಿಲ್ಲುತ್ತಾನೆ. ಆದರೆ ಸುಗ್ರೀವನಿಗೆ ಎದುರಾಳಿಯೇ ಮಹಾ ಬಲಾ’ಢ್ಯ ವಾಲಿ. ಸುಗ್ರೀವನ ಅಗ್ರಜನಾಗಿ ಮಾಡಬಾರದ್ದನ್ನು ಮಾಡಿದುದರಿಂದ ಚಕ್ರವರ್ತಿಗಳ ಅವಕೃಪೆ, ದೇವರ ಅವಕೃಪೆ ಉಂಟಾಯಿತು.
ತನ್ನ ಬಲದ ದು’ರುಪಯೋಗವಿದು. ಅಂದರೆ ಈತನಿಗೆ ಇಂದ್ರನ ವಿಶೇಷ ವರವಿದೆ. ನಿನ್ನೆದುರು ಹೋ’ರಾಡುವ ಯೋಧನ ಅರ್ಧ ಬಲವನ್ನು ನೀನು ಹರಣ ಮಾಡುವಂತಾಗಲಿ ಎಂಬ ವರ. ಆಗ ಸ್ವಯಂ ಹರನೇ ಬಂದರೂ ಸೋಲಲೇಬೇಕು. ಆದರೆ ವಾಲಿಯು ಹರನೇ ಯುದ್ಧಕ್ಕೆ ಬಂದರೂ ಯುದ್ಧ ಮಾಡಿಯಾನೇ ಹೊರತು ದೇವರಿಗೆ ಶರಣಾಗಲಾರ. ಇದು ಆತನ ದು’ರಹಂ’ಕಾರ ಪ್ರವೃತ್ತಿ. ಇದು ಎಲ್ಲರಿಗೂ ತಿಳಿದ ವಿಚಾರವಾಗಿದ್ದು, ರಾಮನಿಗೂ ಇದನ್ನು ಮುತ್ಸದಿಗಳು ತಿಳಿಸಿದ್ದರು. ಅದಕ್ಕಾಗಿ ಮರೆಯಲ್ಲಿ ನಿಂತು ದುಷ್ಟ ವಾಲಿಯ ಸಂ’ಹಾರಕ್ಕೆ ಮುಂದಾದ. ಇದು ಧರ್ಮ ರಕ್ಷಣಾ ಕಾರ್ಯದಲ್ಲಿ ಕಾನೂನು ಬಾ’ಹಿರವೆಂದಾಗದು.
ನಾಡಿನ ದಂ’ಡ ಶಾಸನಾಧಿಕಾರಿಯಾದ ವಾಲಿಯೇ ಶಾಸನವನ್ನು ಅತಿಕ್ರಮಿಸಿದ ಮೇಲೆ ಈತನಲ್ಲಿ ರಣ ನಿಯಮವೇನು ಎಂದು ಶ್ರೀರಾಮನೇ ಹೇಳಿದ್ದ. ಸುಗ್ರೀವನು ರಾಮನಿಂದ ಉತ್ತೇ’ಜಿತನಾಗಿ ಹೋ’ರಾಡಿದ, ಪೆ’ಟ್ಟು ತಿಂದ. ಆದರೆ ರಾಮನ ರ’ಣ ತಂ’ತ್ರ ಕೆಲಸ ಮಾಡಲಿಲ್ಲ. ಕಾರಣ ವಾಲಿ ಸುಗ್ರೀವರ ಸಾಮ್ಯತೆಯ ಫಲ. ಇಬ್ಬರೂ ತದ್ರೂಪಿ ಯೋಧರು. ಹೀಗಿದ್ದಾಗ, ಸುಗ್ರೀವ ಯಾರು, ವಾಲಿ ಯಾರು ಎಂದು ಗುರುತಿಸಲಾಗದೆ ರಾಮನ ಬಾಣವು ಧನುಸ್ಸಿನಿಂದ ಹೊರಗೆ ಬರಲಿಲ್ಲ. ಪೆಟ್ಟು ತಿಂದ ಸುಗ್ರೀವನು ರಾಮನಲ್ಲಿ ದುಃ’ಖಿತನಾಗಿ ನಿಂ’ದನೆಗೆ ತೊಡಗಿದ.
ನಿನ್ನನ್ನು ನಂಬಿ ನಾನು ಕೆಟ್ಟೆ. ನನಗೆ ವಿಜಯ ಮಾಲೆಯ ಬದಲು ಸಿಕ್ಕಿದ್ದು ಒಂದಷ್ಟು ಪೆ’ಟ್ಟುಗಳು ಮಾತ್ರ ಎಂದ. ರಾಮನು ಆಗ ತನಗೆದುರಾದ ಸಮ’ಸ್ಯೆಗಳನ್ನು ಹೇಳಿದ. ಪ್ರತೀ ಸಲವೂ ಸೋಲುವವನು ಸುಗ್ರೀವನಲ್ಲವೇ ಪ್ರಭೂ. ಆಗ ಗೆಲ್ಲುವವನು ವಾಲಿಯೇ. ಇದನ್ನರಿತು ತಾವು ಶರಸಂ’ಧಾನ ಮಾಡಬಹುದಿತ್ತಲ್ವೇ ಎಂದ ಸುಗ್ರೀವ. ಆಗ ಶ್ರೀರಾಮನು, ಸುಗ್ರೀವಾ ನಿನ್ನ ತ’ರ್ಕವನ್ನು ಒಪ್ಪಬಹುದು. ಆದರೆ ಈಸಲ ಯು’ದ್ದಕ್ಕೆ ಇಳಿದದ್ದು ನನ್ನ ಧೈರ್ಯದಲ್ಲೇ ಅಲ್ಲವೇ.
ಹೀಗಿದ್ದಾಗ ಗೆಲ್ಲುವವನು ಸುಗ್ರೀವನೇ ಯಾಕೆ ಆಗಿರಬಾರದು. ಒಂದು ವೇಳೆ ನೀನು ಹೇಳಿದಂತೆ ಗೆಲ್ಲುವವ ವಾಲಿಯೆಂದು ತಿಳಿದು ಬಾ’ಣ ಪ್ರಯೋಗ ಮಾಡುತ್ತಿದ್ದರೆ ಏನಾಗುತ್ತಿತ್ತು ಹೇಳು. ಮಿತ್ರದ್ರೋ’ಹಿ ಎಂಬ ಕ’ಳಂ’ಕ ನನಗೆ ಬರುತ್ತಿತ್ತು. ಆದರೆ ನಿನ್ನಲ್ಲೊಂದು ಅಪದೈರ್ಯ, ಅವಿಶ್ವಾಸ ಇತ್ತೆಂದು ಈಗ ಗೊತ್ತಾಗುತ್ತಿದೆ. ಎಲ್ಲಾದರೂ ನಾನು ಸೋತರೆ. ಸೋಲುವವನೇ ನಾನು ಎಂಬುದೇ ನಿನ್ನೊಳಗಿತ್ತು. ಯಾರು ಆತ್ಮ ವಿಶ್ವಾಸ ಇರಿಸಿಕೊಂಡು ಮುಂದೆ ನಡೆಯುತ್ತಾರೋ ಅವನು ಸೋಲುವುದಿಲ್ಲ. ಸೀತೆಯನ್ನು ಕಳೆದುಕೊಂಡು ನಾನು ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದರೆ ಇಲ್ಲಿಯ ವರೆಗೆ ತಲುಪುತ್ತಿದ್ದೆನೆಯೋ ಸುಗ್ರೀವ.
ಸಂಶಯಾತ್ಮಾ ವಿನಶ್ಯತಿ ಎಂದು ಪ್ರಾಜ್ಞರು ಹೇಳಿದ್ದು ನಿನ್ನ ವಿಚಾರದಲ್ಲಿ ಸತ್ಯವಾಯ್ತು. ವಾಲಿಯನ್ನು ಕರೆಯುವ ಮೊದಲು ನೀನು ನನ್ನ ಶಕ್ತಿ ಪರೀಕ್ಷೆ ನಡೆಸಿದ್ದಿ.ನಾನು ನಿನ್ನೊಡನೆ ಸಂ’ಶಯ ಪಡಲಿಲ್ಲ. ಕಾರಣ ಮಿತ್ರನನ್ನು ಮಾಡಿಕೊಳ್ಳುವ ಮೊದಲು ಪರೀಕ್ಷಿಸುವುದು ತಪ್ಪಲ್ಲ. ಆದರೆ ಮಿತ್ರನಾದ ಮೇಲೆ ಸಂಶಯ ಪಡುವುದು ಘೋ’ರ ಅ’ಪರಾಧ. ದುಂದುಬಿಯ ಅಟ್ಟೆಯನ್ನೆತ್ತಿ ಒಗೆದೆ. ಸಪ್ತ ತಾಳಾ ವೃಕ್ಷಗಳನ್ನು ಒಂದೇ ಬಾ’ಣದಿಂದ ಛೇ’ದಿಸಿದ್ದು ನೋಡಿದೆ. ಇದನ್ನೇ ವಾಲಿಯೂ ಮಾಡುತ್ತಿದ್ದ ಎಂದು ಹೇಳಿದ್ದೆ. ಆದರೆ ನಿನ್ನಂತೆ ಮಾಡಲಾಗುತ್ತಿದ್ದಿಲ್ಲ.
ದುಂದುಬಿಯ ಅಟ್ಟಯನ್ನೆತ್ತುವಲ್ಲಿಯ ವರೆಗೆ ಮಾತ್ರ ಆತನ ಸಾಮರ್ಥ್ಯ ಇತ್ತು. ನೀನದನ್ನು ಕಾಲ ತುದಿಯಿಂದ ಯೋಜನಾಂತರಕ್ಕೆ ಎಸೆದೆ. ಸಪ್ತತಾಳಾ ವೃಕ್ಷಗಳ ಗರಿಯನ್ನು ಒಂದೇ ಬಾಣದಿಂದ ಕ’ತ್ತರಿಸುವಲ್ಲಿಯವರೆಗಿತ್ತು ಆತನ ಸಾಮರ್ಥ್ಯ. ಆದರೆ ನೀನದನ್ನು ಒಂದೇ ಬಾಣದಿಂದ ಮತ್ತೆ ಚಿಗುರದಂತೆ ಅದರ ಕೊಂಬೆಯನ್ನೇ ಕತ್ತರಿಸಿದೆ ಎಂದು ನನ್ನ ಪ’ರಾಕ್ರ’ಮವನ್ನು ನಿನ್ನಣ್ಣ ವಾಲಿಯ ಪ’ರಾಕ್ರ’ಮದೊಂದಿಗೆ ಹೋಲಿಸಿ, ನನ್ನ ಪ’ರಾಕ್ರ’ಮವನ್ನು ಶ್ಲಾಘಿಸಿದೆ.
ಅಂದರೆ ನನ್ನ ಪ’ರಾಕ್ರ’ಮದಲ್ಲಿ ನಿನಗೆ ಆ ಕ್ಷಣದಲ್ಲೊಮ್ಮೆ ವಿಶ್ವಾಸ ಬಂತೇ ವಿನಃ ಶಾಶ್ವತ ವಿಶ್ವಾಸ ಬರಲಿಲ್ಲ ಎಂಬುದಕ್ಕೆ ನೀನು ತಿಂದ ಹೊ’ಡೆತವೇ ಸಾಕ್ಷಿ ಎಂದ ಶ್ರೀರಾಮ. ಸಪ್ಪೆ ಮೊಗದಿಂದ ಸುಗ್ರೀವನು, ಹೇ ಪ್ರಭೂ ನನ್ನ ಗೆಲುವು ಅನಿಶ್ಚಿತ. ಯಾಕೆಂದರೆ ಮತ್ತೊಮ್ಮೆ ನಿನ್ನ ಧೈರ್ಯದಿಂದ ವಾಲಿಯನ್ನು ಧುರಕ್ಕೆ ಆಹ್ವಾನಿಸಿದರೂ ನನ್ನ ಹುಟ್ಟುಗುಣ ಹೋಗಲಾರದು ಎಂದು ತನ್ನ ಅ’ಸಹಾಯಕತೆಯನ್ನು ಹೇಳಿಕೊಂಡ ಸುಗ್ರೀವ. ಆಗ ಶ್ರೀರಾಮನು, ಹೇ ವಾನರ ಶ್ರೇಷ್ಟನೇ, ನಾನು ಒಮ್ಮೆ ಎದೆಯೇರಿಸಿದ ಬಾಣವನ್ನು ಯಾವುದೇ ಕಾರಣಕ್ಕೂ ಮತ್ತೆ ಬ’ತ್ತಳಿಕೆಯಲ್ಲಿ ಇರಿಸಲಾರೆ.
ಇದು ನನ್ನ ನಿಷ್ಟೆ ಮತ್ತು ನನ್ನ ಆ’ತ್ಮ ವಿಶ್ವಾಸ. ಮತ್ತೆ ಧುರಕ್ಕೆ ಮುಂದಾಗು. ಈ ಸಲ ನಿನ್ನೊಳಗಿನ ಆತ್ಮವಿಶ್ವಾಸದ ಧೈರ್ಯವನ್ನು ನಾನು ನಿರೀಕ್ಷಿಸುವುದಿಲ್ಲ. ಅದಕ್ಕಾಗಿ ತಮ್ಮ ಲಕ್ಷ್ಮಣ ತಂದಂತಹ ಮಂದಾರ ಪುಷ್ಪದ ಮಾಲೆಯನ್ನು ನಿನ್ನ ಕೊರಳಲ್ಲಿ ಧರಿಸಿಕೋ. ಅಣ್ಣನನ್ನು ಮತ್ತೊಮ್ಮೆ ಯುದ್ಧಕ್ಕೆ ಆಹ್ವಾನಿಸು. ಈಸಲ ನಿನ್ನ ಆತ್ಮ ವಿಶ್ವಾಸವನ್ನು ನನ್ನ ಶರವು ನೋಡುವುದಿಲ್ಲ. ಸುಗ್ರೀವನ ಗುರುತಿಗಾಗಿರುವ ಮಂದಾರ ಪುಷ್ಪದ ಮಾಲೆಯನ್ನು ನೋಡುತ್ತದೆ.
ವಿಳಂಬ ಮಾಡದಿರು. ಮಾಲೆಯನ್ನು ಧರಿಸಿ ರಣಕ್ಷೇತ್ರಕ್ಕೆ ನಡೆ ಎಂದು ಸುಗ್ರೀವನನ್ನು ವಾಲಿಯೊಂದಿಗೆ ಮತ್ತೆ ಸಂಗ್ರಾಮಕ್ಕೆ ಕಳುಹಿಸಿದ. ವಾಲಿಯ ವ’ಧೆಯೂ ನಡೆದು ಹೋಯ್ತು. ಇಲ್ಲಿ ಮುಖ್ಯ ಸಂದೇಶ : ಯಾರು ಆತ್ಮವಿಶ್ವಾಸದಲ್ಲಿ ಅಚಲ ನಂಬಿಕೆ ಇರಿಸಿ ಮುನ್ನಡೆಯುತ್ತಾರೋ, ಅವರು ದು’ರ್ಬಲರೇ ಆಗಿದ್ದರೂ ದೈವ ರಕ್ಷಿಸುತ್ತದೆ ಎಂದರ್ಥ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.