ಗ್ರಹ ದೋ’ಷಕ್ಕೆ ಸುಲಭ ಪರಿಹಾರ, ಒಮ್ಮೆ ಟ್ರೈ ಮಾಡಿ ನೋಡಿ.

0
2183

ಗ್ರಹ ದೋ’ಷಕ್ಕೆ ಸುಲಭ ಪರಿಹಾರ, ಒಮ್ಮೆ ಟ್ರೈ ಮಾಡಿ ನೋಡಿ. ಸುತ್ತಣ ಪರಿಸರ ರಕ್ಷಣೆ, ಹಸಿದ ಪ್ರಾಣಿಗಳಿಗೆ, ರೋಗಿಗಳಿಗೆ, ಅಶಕ್ತರಿಗೆ ಆಹಾರ ನೀಡುವುದು, ಯೋಗ್ಯರಿಗೆ ದಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿಯಾಗುತ್ತದೆ. ಮನೋ ನೆಮ್ಮದಿಯೇ ಗ್ರಹ ದೋ’ಷ ನಿವಾರಣೆಗೂ ಪೂರಕವಾಗಿದೆ. ಗ್ರಹ ದೋ’ಷ ನಿವಾರಣೆಗೆ ಸಾಮಾನ್ಯವಾಗಿ ಕೆಲವರು ಮಂತ್ರ ಜಪ ಮಾಡಲು ಹೇಳುತ್ತಾರೆ. ಹಾಸಿಗೆಯ ಮೇಲೆ ನರಳುತ್ತಿರುವ ರೋಗಿಗೆ ಅಥವಾ ಸಂಕಷ್ಟದಲ್ಲಿ ಸಿಲುಕಿ ಅದೇ ಚಿಂತನೆಯಲ್ಲಿರುವವನಿಗೆ ಒಂದೆಡೆ ಕೂತು ಕ್ಲಿಷ್ಟವಾದ ಮಂತ್ರ ಜಪ ಮಾಡು ಎಂದರೆ ಹೇಗೆ. ಸಮಸ್ಯೆಗೆ ಪರಿಹಾರವೆಂತು. ಇಲ್ಲಿದೆ ಸುಲಭ ಪರಿಹಾರ. ಒಮ್ಮೆ ಟ್ರೈ ಮಾಡಿ ನೋಡಿ.

ರವಿ ದೋ’ಷ : ರವಿ ದೋ’ಷ ನಿವಾರಣೆಗೆ ಪ್ರತಿನಿತ್ಯ ಬೆಳಿಗ್ಗೆ ಸೂರ್ಯೋದಯದ ಕಾಲದಲ್ಲಿ ಕನಿಷ್ಠ ಪಕ್ಷ 12 ಸೂರ್ಯ ನಮಸ್ಕಾರವನ್ನಾದರೂ ಹಾಕಿ. ಬೆಳಗಿನ ಸೂರ್ಯ ಕಿರಣಗಳಲ್ಲಿ ವಿಟಮಿನ್‌ ಡಿ, ವಿಟಮಿನ್‌ ಇ ಮತ್ತಿತರ ಪೌಷ್ಟಿಕಾಂಶಗಳಿರುತ್ತವೆ. ಅವುಗಳ ಕಾರಣ ದೇಹ ಕಾಂತಿಯುಕ್ತವಾಗುತ್ತದೆ. ಬೆಳಗಿನ ಆಲಸ್ಯವೂ ದೂರಾಗುತ್ತದೆ. ರವಿಯ ಧಾನ್ಯ ಗೋಧಿ. ವಾರ ಭಾನುವಾರ. ಹಾಗಾಗಿ ಭಾನುವಾರದಂದು ಸೂರ್ಯನ ಪ್ರೀತ್ಯರ್ಥವಾಗಿ ಗೋಧಿ ಪಾಯಸ ಮಾಡಿ ನೈವೇದ್ಯಕ್ಕಿಡಿ. ಕುಟುಂಬದವರೊಂದಿಗೆ ಹಂಚಿಕೊಂಡು ಸೇವಿಸಿ. ರವಿ ಪಿತೃಕಾರಕನಾದ್ದರಿಂದ ತಂದೆ, ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಿ.

ಚಂದ್ರ : ಚಂದ್ರ ಶ್ವೇತವರ್ಣ. ರಜತ ಅವನ ಆಭರಣ. ಮನೋಕಾರಕ ಚಂದ್ರನ ಪ್ರೀತ್ಯರ್ಥವಾಗಿ ಬೆಳ್ಳಿಯ ಕಡಗವನ್ನು ಮುಂಗೈಗೆ ಧರಿಸಿ. ಬೆಳ್ಳಿಯ ಪ್ರಭಾವದಿಂದ ನ’ರಮಂ’ಡಲದಲ್ಲಿ ರ’ಕ್ತದ ಹರಿವು ಚೆನ್ನಾಗಿರುತ್ತದೆ. ಮನಸ್ಸೂ ಶಾಂತವಾಗುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಕೇಸರಿ ಮಿಶ್ರಿತ ಹಾಲು ಕೊಡುವುದರಿಂದ ಸಂತೃಪ್ತಿಯೂ ಉಂಟಾಗುತ್ತದೆ. ಚಂದ್ರ ಮಾತೃ ಕಾರಕನಾದ್ದರಿಂದ ತಾಯಿಗೆ ನಮಸ್ಕರಿಸಿ, ಗೌರವಿಸಿ, ಉಪಚರಿಸಿ.

ಕುಜ : ಮಂಗಳೀಕ ದೋ’ಷ ಎನ್ನುತ್ತಾರೆ. ಈ ದೋ’ಷದ ಕಾರಣ ಸಂತಾನ ಭಾಗ್ಯ, ಕಳತ್ರ ಭಾಗ್ಯ, ದಾಂಪತ್ಯದಲ್ಲಿ ಸುಖವಿಲ್ಲದಿರುವುದು ಮತ್ತಿತರ ಸಮಸ್ಯೆಗಳು ಕಾಡುತ್ತವೆ. ಕುಜ ಋುಣಮೋಚಕ. ಋುಣ ಎನ್ನುವುದು ಭ್ರಾತೃತ್ವದ ಸಂಕೇತ. ಸೋದರ, ಸೋದರಿಯರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರೊಂದಿಗೆ ವೈಮನಸ್ಯ ತೊರೆದು ಪ್ರೀತಿ, ವಿಶ್ವಾಸದಿಂದ ವರ್ತಿಸಿ. ಅವರ ಮನಸ್ಸಿಗೆ ಸಂತೋಷವಾಗುವ ಕೆಲಸಗಳನ್ನು ಮಾಡಿ, ಊಟ, ಉಪಚಾರಗಳನ್ನು ಕೊಟ್ಟು ಸತ್ಕರಿಸಿ. ಬಡ ಹೆಣ್ಣು ಮಕ್ಕಳಿಗೆ ಮಾಂಗಲ್ಯದಾನ ಮಾಡಿ ಅವರ ಕಷ್ಟಕ್ಕೆ ನೆರವಾಗಿ.

ಬುಧ : ಬುಧ ಬುದ್ದಿಯ ಸಂಕೇತ. ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾಗುವ ಸಹಾಯ ಮಾಡಿ. ಅವರ ಸಂತೋಷದಲ್ಲಿ ಭಾಗಿ ನೀವೂ ಸಂಭ್ರಮಿಸಿ. ಮನೆಯಲ್ಲಿ ನಕಾರಾತ್ಮಕ ಅಂಶಗಳಿದ್ದರೆ ಮನಸ್ಸು ಚಂಚಲವಾಗುತ್ತದೆ. ವ್ಯಾಸಂಗವೂ ಹಿನ್ನಡೆಯಾಗುತ್ತದೆ. ಹಾಗಾಗಿ ಮನೆಯ ಮುಂದೊಂದು ತುಳಸಿ ಗಿಡ ನೆಡಿ. ಪ್ರತಿನಿತ್ಯ ತುಳಸಿ ಗಿಡಕ್ಕೆ ನೀರು ಹಾಕಿ. ಪರಿಸರಕ್ಕೆ ಪೂರಕವಾದ ಗಿಡಗಳನ್ನು ಸಾಧ್ಯವಾದಷ್ಟು ಬೆಳೆಸಿ. ಉತ್ತಮ ಪರಿಸರ ದೇಹದ, ಮನಸ್ಸಿನ ಆರೋಗ್ಯಕ್ಕೆ ಪೂರಕ ಎನ್ನುವುದನ್ನು ನೀವೇ ಮನಗಾಣುವಿರಿ.

ಗುರು : ಗುರುವಿಗಿಂತ ದೇವರಿಲ್ಲ. ಬ್ರಹ್ಮ ಬರೆದದ್ದನ್ನೂ ಬದಲಿಸುವ ಶಕ್ತಿ ಗುರುವಿಗಿದೆ ಎನ್ನುವುದು ಶಾಸ್ತ್ರದ ಮಾತು. ಗುರು ಬಲವಿದ್ದಾಗ ಯಾವ ದೋಷವೂ ತಟ್ಟುವುದಿಲ್ಲ. ಯಶಸ್ಸು ಶತಸ್ಸಿದ್ಧ ಎನ್ನುವುದು ಬಲ್ಲವರ ಮಾತು. ಗುರುವಿನ ಸಂಕೇತವೇ ಪಿಪ್ಪಲ (ಅಶ್ವತ್ಥ) ವೃಕ್ಷ. ಸೂರ್ಯೋದಯದ ಸಂದರ್ಭದಲ್ಲಿ ಅಶ್ವತ್ಥ ವೃಕ್ಷವು ಪರಿಶುದ್ಧವಾದ ಆಮ್ಲಜನಕವನ್ನು ಹೊರಸೂಸುತ್ತದೆ. ಈ ಸಮಯದಲ್ಲಿ ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ. ಒಂದಕ್ಷರ ಕಲಿಸಿದಾತನೂ ಗುರು ಎಂಬಂತೆ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಕೊಡಿ. ಅವರ ಅಗತ್ಯತೆಗೆ ನೆರವಾಗಿ.

ಶುಕ್ರ : ಶುಕ್ರ ಎಂದರೆ ಭಾಗ್ಯೋದಯದ ಸಂಕೇತ. ಭಾಗ್ಯೋದಯಕ್ಕೆ ಪೂರಕವಾದವರೇ ಒಡಹುಟ್ಟಿದ ಅಕ್ಕ, ತಂಗಿಯರು ಮತ್ತು ಗೃಹಿಣಿ. ಅವರ ಮನಸ್ಸನ್ನು ತೃಪ್ತಿ ಪಡಿಸುವಂತೆ ವರ್ತಿಸಿ. ಯತ್ರ ನಾರ್ಯಸ್ತು ಪೂಜ್ಯತೇ ತತ್ರ ಸ್ಥಿತಾ ದೇವತಾಃ ಎನ್ನುವಂತೆ ಎಲ್ಲಿ ನಾರಿಯರನ್ನು ಪೂಜನೀಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ದೇವತೆಗಳಿರುವಲ್ಲಿ ಸಕಾರಾತ್ಮಕ ಗುಣಗಳಿರುತ್ತವೆ. ಮನೆಯ ಮುಂದಿನ ರಂಗೋಲಿಯೂ ಶುಭದ ಸಂಕೇತ. ಸಂಗೀತ, ನೃತ್ಯ, ಕಲೆಗಳನ್ನು ಮನೆಯೊಳಗೆ ಅಭ್ಯಾಸ ಮಾಡುವುದರಿಂದ ಮನೆಯ ವಾತಾವರಣವೂ ಚೆನ್ನಾಗಿರುತ್ತದೆ. ಮನಸ್ಸು ಮುದಗೊಳ್ಳುತ್ತದೆ.

ಶನಿ : ಶನಿ ಕರ್ಮಸೂಚಕ. ಕರ್ಮ ಎಂದರೆ ನಾವು ಮಾಡುವ ಕೆಲಸ. ಒಳಿತನ್ನೇ ಮಾಡಿದರೆ, ಬಯಸಿದರೆ ಅದರ ಪರಿಣಾಮವೂ ಒಳ್ಳೆಯದಾಗುತ್ತದೆ. ಶನಿಯೂ ಅಷ್ಟೇ. ನಿಮ್ಮ ಕರ್ಮಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಾನೆ. ಬಡವರು, ಅಶಕ್ತರು, ತೀರಾ ಅತ್ಯವಶ್ಯವಿರುವ ಯೋಗ್ಯರನ್ನು ಸತ್ಕರಿಸಿ, ಉಪಚರಿಸಿ. ಭಿಕ್ಷುಕರಿಗೆ ಹೊದೆಯಲು ಕಪ್ಪು ಕಂಬಳಿ ಕೊಟ್ಟು ಸತ್ಕರಿಸಿ. ರಾಹು : ಸಹೋದರತ್ವ, ಮಮತೆಯ ಸಂಕೇತ. ಗುರು, ಹಿರಿಯರನ್ನು ಗೌರವಿಸಿ. ಕ್ಯಾನ್ಸರ್‌ನಂತ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕವಾಗಿ ಸಹಾಯ ಮಾಡಿ.

ಅವರನ್ನೂ ನಿಮ್ಮ ಮಕ್ಕಳಂತೆ ಉಪಚರಿಸಿ. ಕೇತು : ಹಸಿದ ಹೊಟ್ಟೆಗೆ ಊಟ ಕೊಡಿ. ಅನ್ನದಾನಕ್ಕಿಂತ ಮಹಾದಾನವಿಲ್ಲ. ಅದರಲ್ಲೂ ಹಸಿದ ಮೂಕ ಪ್ರಾಣಿಗಳಿಗೆ ಅನ್ನವನ್ನಿಟ್ಟು ಅವನ್ನು ಸಂತೃಪ್ತಿಗೊಳಿಸಿ. ಅದರ ಒಂದು ಸಂತೃಪ್ತಿಯ ನಗೆಯೇ ಕೇತು ಸಂಬಂಧ ದೋಷ ನಿವಾರಣೆಗೆ ಪೂರಕವಾಗುತ್ತದೆ. ವಾರಕ್ಕೊಮ್ಮೆಯಾದರೂ ಅದರಲ್ಲೂ ವಿಶೇಷವಾಗಿ ಮಂಗಳವಾರ ಮೌನವ್ರತವನ್ನು ಆಚರಿಸುವುದು ಒಳ್ಳೆಯದು. 95350 04448 ಜೋತಿಷ್ಯ ಸಲಹೆ ಹಾಗು ಪರಿಹಾರ ವಾಟ್ಸಪ್ ಕೂಡ ಮಾಡಿ.

LEAVE A REPLY

Please enter your comment!
Please enter your name here