ಗ್ರಹಗಳು ಆಡಿಸಿದಂತೆ ಆಡುವ ಗೊಂಬೆಗಳು ನಾವು. ಅದು ಹೇಗೆ ಗೊತ್ತಾ. ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಶಕ್ತಿ ನಮಗಿದೆ. ನಾವು ಅತ್ಯಂತ ಬುದ್ಧಿವಂತರು. ನಾವು ಮನಸ್ಸಿನಲ್ಲಿ ಅಂದುಕೊಂಡಿದ್ದು ಯಾರಿಗೂ ತಿಳಿಯದು, ಎನ್ನುವಂತಹ ಅನೇಕ ಚಿಂತನೆಗಳನ್ನು ನಾವು ಹೊಂದಿರುತ್ತೇವೆ. ಕೆಲವೊಮ್ಮೆ ನಾವು ಆಡುವ ಮಾತುಗಳು ನಮ್ಮನ್ನು ಬುದ್ಧಿವಂತರು ಎನ್ನುವಂತೆ ತೋರಿಸುವುದು. ಆದರೆ ನೈಜವಾಗಿ ಹೇಳಬೇಕು ಎಂದರೆ ನಮ್ಮ ನಡೆ ನುಡಿ, ಮಾನಸಿಕ ಸ್ಥಿತಿ ಹಾಗೂ ದೈಹಿಕ ಆರೋಗ್ಯ ಎಲ್ಲವೂ ನಮ್ಮನ್ನು ಆಳುವ ಗ್ರಹಗತಿಗಳ ಮೇಲೆ ನಿರ್ಧಾರವಾಗಿರುತ್ತದೆ.
ಗ್ರಹಗಳ ಪ್ರಭಾವ : ನಾವು ಅಂದುಕೊಳ್ಳುವ ಪ್ರತಿಯೊಂದು ಸಂಗತಿಯೂ ನಮ್ಮ ಮೇಲೆ ಪ್ರಭಾವ ಬೀರುವ ಗ್ರಹಗಳ ಪ್ರಭಾವ ಆಗಿರುತ್ತದೆ. ಗ್ರಹಗಳು ಉತ್ತಮ ಪ್ರಭಾವ ಅಥವಾ ಧನಾತ್ಮಕ ರೀತಿಯಲ್ಲಿ ಇದ್ದರೆ ನಮ್ಮ ಚಿಂತನೆಗಳು ಉತ್ತಮವಾಗಿರುತ್ತದೆ. ಜೊತೆಗೆ ನಾಲ್ಕು ಜನರ ಮುಂದೆ ಒಂದಿಷ್ಟು ಬುದ್ಧಿವಂತಿಕೆಯ ಮಾತನ್ನು ಆಡುತ್ತೇವೆ. ಜೊತೆಗೆ ಒಂದಿಷ್ಟು ಗೌರವವನ್ನು ಪಡೆದುಕೊಳ್ಳುತ್ತೇವೆ. ಅದೇ ನಕಾರಾತ್ಮಕ ಪ್ರಭಾವ ಇದ್ದರೆ ವ್ಯಕ್ತಿಯು ಬಹುತೇಕ ವಿಷಯದಲ್ಲಿ ಗೊಂದಲಕ್ಕೊಳಗಾಗುತ್ತೇವೆ. ನಾವು ಕೈಗೊಳ್ಳುವ ಕೆಲಸದಲ್ಲಿ ಅಥವಾ ಚಿಂತನೆಗಳಲ್ಲಿ ಸಾಕಷ್ಟು ಸೂಚನೆ ಹಾಗೂ ಅಂದಾಜುಗಳನ್ನು ಮಾಡುತ್ತೇವೆ.
ಆದರೆ ಯಾವುದೇ ಸಂಗತಿಯ ಫಲಿತಾಂಶವು ನಾವು ಅಂದುಕೊಂಡಂತೆ ಇರುವುದಿಲ್ಲ. ಅದೆಲ್ಲವೂ ಗ್ರಹಗತಿಗಳ ಅನುಸಾರವೇ ನಡೆಯುವುದು. ಹಾಗಾಗಿ ನಾವು ಮಾಡುವ ಕೆಲಸದಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮ ಅಥವಾ ಗ್ರಹಗಳು ಧನಾತ್ಮಕ ಪ್ರಭಾವ ಬೀರುವಂತೆ ಮಾಡುವ ಕಾರ್ಯವನ್ನು ಕೈಗೊಳ್ಳಬೇಕು. ಆಗ ಎಲ್ಲವೂ ಸುಗಮವಾಗಿ ನಡೆಯುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಅಂತಹ ಕೆಲವು ಸಂಗತಿಗಳಿಗೆ ಪರಿಹಾರ ಕ್ರಮವನ್ನು ಈ ಕೆಳಗೆ ವಿವರಿಸಲಾಗಿದೆ. ದಿನದಿಂದ ದಿನಕ್ಕೆ ನೀವು ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ಭಾವಿಸಿದರೆ, ನಂತರದ ದಿನದಿಂದ ಸುಮಾರು 100 ಗ್ರಾಂ ದ್ರಾಕ್ಷಿಯನ್ನು ತಿನ್ನಲು ಪ್ರಾರಂಭಿಸಿ.
ಗೋಧಿಯ ಚಪಾತಿ ಅಥವಾ ಗೋಧಿ ಬ್ರೆಡ್ ಸೇವಿಸಿ. ಅದು ನಿಮ್ಮ ಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಸುಧಾರಿಸುವುದು. ಮನೆಯಿಂದ ಹೋಗಲು ನೀವು ಭಯ ಪಡುತ್ತೀರಿ ಅಥವಾ ಸೂರ್ಯನ ಕಿರಣವು ನಿಮಗೆ ಸಾಕಷ್ಟು ಭಯವನ್ನು ಉಂಟುಮಾಡುತ್ತದೆ ಎಂದಾದರೆ ಕಲ್ಲಂಗಡಿ ರಸವನ್ನು ಕುಡಿಯಿರಿ. ಕಲ್ಲುಸಕ್ಕರೆಯನ್ನು ನಿಂಬೆ ಹಣ್ಣಿನ ರಸಕ್ಕೆ ಸೇರಿಸಿ ಕುಡಿಯಿರಿ. ನೂರು ಗ್ರಾಂ ನಷ್ಟು ಕಲ್ಲುಸಕ್ಕರೆಯನ್ನು ಸೇವಿದರೆ, ಸೂರ್ಯನಿಂದ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುವುದು. ಪದೇ ಪದೇ ಕಾಡುವ ಸಾ’ವಿನ ಕನಸು : ಕನಸಿನಲ್ಲಿ ಪದೇ ಪದೇ ಸಾ’ವಿನ ಕನಸನ್ನು ಕಾಣುತ್ತಿದ್ದರೆ, ಪ್ರತಿದಿನ ಶಿವನ ಜಪ ಹಾಗೂ ಮೃತ್ಯುಂಜಯ ಮಂತ್ರವನ್ನು ದಿನಕ್ಕೆ ಐದು ಬಾರಿ ಹೇಳಬೇಕು.
ಹೀಗೆ 11 ದಿನಗಳ ಕಾಲ ಮಾಡಬೇಕು. ಆಗ ಮನಸ್ಸಿಗೆ ಶಾಂತಿ ಹಾಗೂ ನಿರಾಳತೆಯನ್ನು ನೀಡುವುದು. ನಿಮಗೆ ಅಳಬೇಕು ಎಂದು ಅನಿಸಿದಾಗ ಅಳುವನ್ನು ನಿಯಂತ್ರಿಸಬಾರದು. ಅದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳುಮಾಡುವುದು. ಹಾಗಾಗಿ ಮನಸ್ಸಿಗೆ ಸಮಾಧಾನ ದೊರೆಯುವಷ್ಟು ಅತ್ತುಬಿಡಬೇಕು. ಆಗ ನಿಮ್ಮ ಮನಸ್ಸಿಗೆ ಒಂದು ಬಗೆಯ ನಿರಾಳತೆ ದೊರೆಯುವುದು. ಜೊತೆಗೆ ಮಾನಸಿಕವಾಗಿ ದೃಢತೆಯನ್ನು ಪಡೆದುಕೊಳ್ಳುವಿರಿ. ಸಮಸ್ಯೆಗಳನ್ನು ನಿರ್ವಹಿಸಲು ಸಾಧ್ಯವಾಗದೆ ಇರುವುದು : ಬಹುತೇಕ ಸಂದರ್ಭದಲ್ಲಿ ಪರಿಸ್ಥಿತಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ತೊಂದರೆಯನ್ನು ಅನುಭವಿಸುತ್ತಿದ್ದೀರಿ ಎಂದಾದರೆ ಕೆಲವು ವ್ಯಾಯಾಮಗಳನ್ನು ಮಾಡಿ.
ತಕ್ಷಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರೆ ಆ ಕ್ಷಣಕ್ಕೆ ನಿಮ್ಮ ಕೈ ಕಾಲುಗಳನ್ನು ಸ್ವಲ್ಪ ಅಲ್ಲಾಡಿಸಿ. ಅದರಿಂದ ಒಂದು ಬಗೆಯ ಮಾನಸಿಕ ಬದಲಾವಣೆಯನ್ನು ಪಡೆದುಕೊಳ್ಳುವಿರಿ. ನಾಲಿಗೆಯನ್ನು ನಿಮ್ಮ ಮೇಲ್ಬಾಗದ ದಂತದ ಒಳಭಾಗದಲ್ಲಿ ಸ್ಪರ್ಶಿಸಿ. ನಂತರ ವಿಷಯದ ಮೇಲೆ ಏಕಾಗ್ರತೆಯನ್ನು ಇರಿಸಿ. ಆಗ ಎಲ್ಲವೂ ಸುಲಭ ಎನ್ನುವ ಮನಃಸ್ಥಿತಿ ಉಂಟಾಗುವುದು. ನಿಮ್ಮ ಭಾವನೆಗಳು ಅಥವಾ ಚಿಂತನೆಗಳು ಪದೇ ಪದೇ ಸ್ಥಿರತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಅನಿಸುತ್ತಿದ್ದರೆ ಪ್ರತಿ ಬುಧವಾರ ದೇವಸ್ಥಾನಕ್ಕೆ ಹೋಗಿ, ಪೂಜೆಯನ್ನು ಸಲ್ಲಿಸಿ.
ದೇವಾಲಯಕ್ಕೆ ಮೊಸರನ್ನು ದಾನ ಮಾಡಿ. ಆಗ ನಿಮ್ಮ ಸಮಸ್ಯೆಯು ನಿಧಾನವಾಗಿ ಕಡಿಮೆಯಾಗುವುದು. 95350 04448 ಜೋತಿಷ್ಯ ಸಲಹೆ ಹಾಗು ಪರಿಹಾರ ವಾಟ್ಸಪ್ ಕೂಡ ಮಾಡಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.