ಶ್ರೀಚಕ್ರದ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ. ಇದನ್ನು ತಿಳಿದರೆ ನಿಮ್ಮ ಜೀವನದಲ್ಲಿ ಸಿರಿ ಸಂಪತ್ತು ಶಾಶ್ವತವಾಗಿ ಪ್ರಾಪ್ತಿಯಾಗುತ್ತದೆ.

0
3972

ಸಾಮಾನ್ಯವಾಗಿ ಶ್ರೀಚಕ್ರದ ಹೆಸರು ಕೇಳಿರುತ್ತೀವಿ, ದೇವಿ ದೇವಾಲಯಗಳಲ್ಲಿ ಹೆಚ್ಚಾಗಿ ಶ್ರೀ ಚಕ್ರ ಸ್ಥಾಪಿಸಿರುತ್ತಾರೆ. ಕೆಲವಾರು ಮನೆಗಳಲ್ಲಿಯೂ ಸಹ ಶ್ರೀಚಕ್ರವನ್ನು ಇಟ್ಟು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಇಂತಹ ಮನೆಗಳಲ್ಲಿ ದೇವಿ ನೆಲೆಸಿರುತ್ತಾಳೆ. ಇದರಿಂದ ದಾರಿದ್ರ್ಯ ನಾಶವಾಗಿ, ಸುಖ, ಸಮೃದ್ಧಿ, ಶಾಂತಿ ನೆಲಸುತ್ತದೆ. ಅಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಆಸ್ಪದವಿರುವುದಿಲ್ಲ. ಈ ಯಂತ್ರವು ಸ್ತ್ರೀ ಹಾಗೂ ಪುರುಷ ಶಕ್ತಿ (ಶಿವಶಕ್ತಿ)ಗಳೆರಡರ ಪ್ರತೀಕ.

ಇದರ ಬಗ್ಗೆ ಉಪನಿಷತ್ಗಳ ಕಾಲದಿಂದಲೂ ಉಲ್ಲೇಖವಿದೆ. ಇದರ ಪೂಜೆ ಸಂಪತ್ತಿನ ಜೊತೆಗೆ ಇಹಪರಗಳೆರಡರ ಉನ್ನತಿಗೆ ಸಾಧನವಾಗಿದೆ. ಇದನ್ನು ಪೂರ್ವಾಭಿಮುಖವಾಗಿ ಇಟ್ಟು, ಪೂಜಿಸುವವರು ಉತ್ತರಾಭಿಮುಖವಾಗಿ ಕುಳಿತು ಪೂಜಿಸಬೇಕು. ಶ್ರೀ ಚಕ್ರ ಯಂತ್ರ ಒಂದು ಶಕ್ತಿಯುತವಾದ ಯಂತ್ರವೆನ್ನುವುದು ನಮಗೆಲ್ಲ ತಿಳಿದ ಸಂಗತಿ. ಇದು ಜಗನ್ಮಾತೆಯಾದ ದೇವಿಯನ್ನು ಪ್ರತಿನಿಧಿಸಿವ ಒಂದು ಯಂತ್ರ. ಒಂಬತ್ತು ತ್ರಿಕೋನಗಳು ಒಂದಕ್ಕೊಂದು ಬೆಸೆದುಕೊಂಡಂತೆ ಇರುವ ಈ ಯಂತ್ರವನ್ನು ನವಚಕ್ರವೆಂದೂ ಕರೆಯುತ್ತಾರೆ.

ಈ ಎಲ್ಲ ತ್ರಿಕೋನಗಳೂ ಸೇರುವ ಮಧ್ಯದ ಬಿಂದುವಿನಲ್ಲಿ ನವಶಕ್ತಿ ಸ್ವರೂಪಳಾದ ದೇವಿ ನೆಲಸಿರುತ್ತಾಳೆ. ಅದರಿಂದಾಗಿಯೇ “ಚಕ್ರಾಂತರ ವಾಸಿನಿ” ಎಂದೂ ದೇವಿಯನ್ನು ವರ್ಣಿಸುತ್ತಾರೆ. ಶ್ರೀಚಕ್ರ ಯಂತ್ರದ ಮೇಲ್ಮುಖ ಅ’ಗ್ನಿತತ್ವವನ್ನು, ಇದರ ಸುತ್ತಲೂ ಇರುವ ವೃತ್ತ ವಾಯುತತ್ವವನ್ನು ಹೊಂದಿದ್ದರೆ ಮಧ್ಯದ ಬಿಂದು ಜಲತತ್ವ ಮತ್ತು ಅದರ ತಳ ಭೂತತ್ವವನ್ನು ಪ್ರತಿಪಾದಿಸುತ್ತದೆ.

ಒಂಬತ್ತು ತ್ರಿಕೋನಗಳು ಪರಸ್ಪರ ಬೆಸೆದು ಮತ್ತೆ 43 ಸಣ್ಣ ಸಣ್ಣ ತ್ರಿಕೋನಗಳಾಗುತ್ತವೆ. ಇದು ಪೂರ್ಣ ಬ್ರಹ್ಮಾಂಡದ ಅಥವಾ ಗರ್ಭದ ಸಂಕೇತವಾಗಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಶ್ರೀಚಕ್ರದ ಸುತ್ತಲೂ ಎಂಟು ದಳದ ಕಮಲವಿರುತ್ತದೆ ನಂತರ ಹೊರಗಡೆ ಹದಿನಾರು ದಳಗಳ ಕಮಲವಿರುತ್ತದೆ. ರೇಖಾಚಿತ್ರದ ಮೂಲಕ ದೇವಿಯನ್ನು ಪೂಜಿಸಬಹುದಾದ ಅತ್ಯುತ್ತಮ ವಿಧಾನಗಳಲ್ಲಿ ಇದು ಒಂದು.

ಇದರಲ್ಲಿ ವಿಮಾನಚಕ್ರ, ಗೋಪುರ ಚಕ್ರ, ಹಾಗೂ ಗೋಲಚಕ್ರ ಮುಖ್ಯವಾದ ಮೂರು ಮುಖ್ಯ ಪ್ರಕಾರಗಳು. ಶ್ರೀಚಕ್ರಾಕಾರದ ಮೇಲೆಯೇ ಕಟ್ಟಿರುವ ಹಲವಾರು ದೇವಾಲಯಗಳಲ್ಲಿ ತುಮಕೂರು ತಾಲೂಕಿನ ಹೆಬ್ಬುರಿನ ಕಾಮಾಕ್ಷಿ ಶಾರದಾ ದೇವಾಲಯ ಹಾಗೂ ಇಂಡೋನೇಷಿಯಾದ ಬೊರೋಬುದುರ್ ನಲ್ಲಿ ಇರುವ ಬೌದ್ಧ ದೇವಾಲಯಗಳೂ ಸೇರಿವೆ.

ಶ್ರೀಚಕ್ರವನ್ನು ಶಂಕರಾಚಾರ್ಯರು ಭಾರತದ ಹಲವಾರು ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾದವುಗಳೆಂದರೆ ವಿಜಯವಾಡ – ಕನಕಾದುರ್ಗಾ, ಶೃಂಗೇರಿ-ಶಾರದಾಂಬ, ಕೊಲ್ಲಾಪುರ-ಮಹಾಲಕ್ಷ್ಮಿ, ಕಂಚಿ-ಕಾಮಾಕ್ಷಿ, ನೆಲ್ಲೂರು-ಅಂದ್ರ, ಚೆನ್ನೈ -ಕಾಮಾಕ್ಷಿ, ಶ್ರೀರಂಗಪಟ್ಟಣ-ನಿಮಿಶಾಂಭ.

ಶಿವನಸಮುದ್ರ-ಮೀನಾಕ್ಷಿ, ಕೊಲ್ಲೂರು -ಮೂಕಾಂಬಿಕಾ, ಶ್ರೀಶೈಲ-ಭ್ರಮರಾಂಬ, ತಿರುವತ್ತಿಯೂರ್-ಕಾಳಿ, ಕಟೀಲು-ದುರ್ಗಾಪರಮೇಶ್ವರಿ, ಗೌಹತಿಯ ಕಾಮಾಕ್ಯ, ಕಾಶ್ಮೀರದ-ಜಗದಂಬ ಶಾರಿಕಾಭಾಗವತಿ ದೇವಾಲಯಗಳು ಮಖ್ಯವಾದವು. ಇದಲ್ಲದೆ ಭಾರತದಲ್ಲಿ ಬೇರೆ ಬೇರೆ ಕಡೆಗಳಲ್ಲಿಯೂ ಹಾಗೂ ನೇಪಾಳದ ಪಶುಪತಿನಾಥ ದೇವಾಲಯದಲ್ಲಿಯೂ ಶ್ರೀಚಕ್ರ ಸ್ಥಾಪನೆಯಾಗಿದೆ.

ಉತ್ತರಕಾಂಡದ ಆಲ್ಮೊರ ಜಿಲ್ಲೆಯ ಲಾಮಗಡದಲ್ಲಿ ಶ್ರೀ ಕಲ್ಯಾಣಿಕಾ ಡೋಲಾಶ್ರಮದಲ್ಲಿ 1600 ಕಿಲೋ ತೂಕದ ಶ್ರೀಚಕ್ರ ಯಂತ್ರವಿದೆ. ಇದು ಅತಿ ದೊಡ್ಡ ಶ್ರೀಚಕ್ರ ಯಂತ್ರವೆಂದು ಪರಿಗಣಿಸಲಾಗಿದೆ. ಉ’ಗ್ರ ಸ್ವರೂಪಳಾಗಿದ್ದು, ಮಾಂ’ಸಾಹಾರ ಭ’ಕ್ಷಕಳಾಗಿದ್ದ ಮಾಧುರೈ ಮೀನಾಕ್ಷಿ ದೇವಿಯನ್ನು ಪಗಡೆ ಆಟದ ನೆಪದಲ್ಲಿ ಶಂಕರಚಾರ್ಯರು ಶ್ರೀ ಚಕ್ರ ಯಂತ್ರದ ಮಧ್ಯೆ ಬಂದಿಸಿದ್ದರು. ನಂತರ ದೇವಿ ಬಿಡುಗಡೆ ಕೇಳಿದಾಗ ಮಾಂ’ಸಾಹಾರ ಬಿಟ್ಟು ಶಾಖಾಹಾರಿ ಆಗುವಂತೆ ಬೇಡಿಕೊಂಡರು.

ನಂತರ ದೇವಿ ಸೌಮ್ಯ ರೂಪಳಾಗಿ ಮೀನಾಕ್ಷಿಯಾಗಿ ನೆಲಸಿದ ನಂತರ ಶಂಕರಾಚಾರ್ಯರಿಂದ ಶ್ರೀ ಚಕ್ರ ಮೊದಲು ಸ್ಥಾಪನೆಗೊಂಡದ್ದು ಮಧುರೈನಲ್ಲೇ.(ಈ ಕಥೆಯನ್ನು ವಿಸ್ತಾರವಾಗಿ ಬರೆಯುವೆ ಒಂದೆರಡು ದಿನಗಳಲ್ಲಿ) ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿ ದೇವತೆಯ ಸಾತ್ವಿಕರೂಪವು ಉಗಮಿಸುವಂತೆ ಮಾಡಿದರು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here