ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ.

0
2115

ನಮಸ್ಕಾರ ಸ್ನೇಹಿತರೇ. ಎಲ್ಲರೂ ಕ್ಷೇಮವಾಗಿದ್ದೀರಿ ಎಂದು ಭಾವಿಸುತ್ತೇವೆ. ಏನಿದು ಟೈಟಲ್ ಅಂತ ಯೋಚಿಸುತ್ತಿದ್ದೀರಾ. ಇದನ್ನು ಪೂರ್ತಿ ಓದಿದರೆ ನಿಮಗೆ ಎಲ್ಲಾ ವಿಚಾರಗಳು ಸುಲಭವಾಗಿ ತಿಳಿದುಬಿಡುತ್ತದೆ. ಹೌದು, ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ. ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್ ಅಂದರೆ ಮುಖ ಮನಸ್ಸಿನ ಸೂಚಕ.

ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ತಿಳಿದುಕೊಳ್ಳಬಹುದಂತೆ. ಅದೇ ರೀತಿ ನೀವು ಮಾಡುವ ಸಹಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ಹೇಳಬಹುದಂತೆ. ಅದೇ ಗ್ರಾಫಾಲಜಿ. ನಿಮ್ಮ ಸಹಿಯ ಶೈಲಿಯಿಂದ ನಿಮ್ಮ ಮನಸ್ತತ್ವ, ನೀವು ಮಾಡುವ ಕೆಲಸಗಳು, ನಿಮ್ಮ ಮನೋವೃತ್ತಿ ಹೇಗಿರುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಂತೆ.

ಇದರ ಕುರಿತಾಗಿ ಎಲ್ಲರಿಗೂ ಅಲ್ಪ ಸ್ವಲ್ಪ ತಿಳಿದೇಯಿರುತ್ತದೆ.ಆದರೆ,ನಾವು ಸಾಮಾನ್ಯವಾಗಿ ಹಲವು ರೀತಿಯಾಗಿ ಸಹಿ ಮಾಡುತ್ತಿರುತ್ತೇವೆ. ಅವುಗಳನ್ನೇ ಆಧಾರವನ್ನಾಗಿರಿಸಿಕೊಂಡು ನಮ್ಮ ವ್ಯಕ್ತಿತ್ವ ಹೇಗಿರುತ್ತದೆಂದು ಪರಿಶೀಲಿಸೋಣ. ಸಹಿ ಮಾಡಿ ಕೆಳಗೆ ಗೆರೆ ಎಳೆಯುವವರು : ಇಂತಹವರು ಎಲ್ಲರಲ್ಲೂ ಹೆಚ್ಚು ವಿಶ್ವಾಸ ಇಡುತ್ತಾರೆ. ಆದರೂ ಸಹ ಇವರು ಕೆಲವು ವಿಷಯಗಳನ್ನು ಕುರುಡಾಗಿ ನಂಬುತ್ತಿರುತ್ತಾರೆ.

ನನಗೆ ತಿಳಿದಿರುವುದೇ ಸರಿ ಎನ್ನುವ ಮನಸ್ಥಿತಿ ಇವರದ್ದು. ಮನುಷ್ಯರನ್ನು ಅಷ್ಟು ಬೇಗನೆ ನಂಬಲಾರರು. ಆದರೆ ಇವರು ಯಾರನ್ನಾದರೂ ನಂಬಿದರೆ ಮಾತ್ರ ಅವರಿಗೋಸ್ಕರ ತಮ್ಮ ಪ್ರಾಣವನ್ನೇ ಕೊಡಲೂ ತಯಾರಿರುತ್ತಾರೆ. ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ : ಸಮಾಜದಲ್ಲಿ ಇವರು ಗೌರವ, ಮರ್ಯಾದೆಗಳನ್ನು ತಮ್ಮ ಶ್ರಮದಿಂದ ಗಳಿಸುತ್ತಾರೆ. ಹಾಗೂ ಇವರು ವಿಶ್ವಾಸ ಅಧಿಕವಿರುತ್ತದೆ. ಎಲ್ಲ ವಿಷಯಗಳಿಗೂ ಇವರೇ ಮುಂದಿರುತ್ತಾರೆ. ಇವರು ಬಹಳ ದೈರ್ಯವಂತರು.

ಸಹಿ ಕೆಳಮುಖವಾಗಿದ್ದರೆ : ಇವರಲ್ಲಿ ಸ್ವಾರ್ಥ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ. ಸಹಿ ಮೇಲ್ಮುಖವಾಗಿದ್ದರೆ : ಇವರಿಗೆ ಬಹಳ ತೀಕ್ಷ್ಣ ಬುದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ. ಧನಾತ್ಮಕ ವ್ಯಕ್ತಿತ್ವ ಇವರದ್ದು. ಇವರು ಯಾವುದೆ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಅಭಿವೃದ್ಧಿ ಪಥದ ಕಡೆ ನಿಮ್ಮ ಪಯಣ. ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ : ಇವರು ಹೆಚ್ಚಾಗಿ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತಾರೆ ( ನಿಮಗೆಲ್ಲಾ ಗೊತ್ತಿರುವ ಒಂದು ಉದಾಹರಣರೆ ಕೊಡುವುದಾದರೆ ಮಹಾತ್ಮ ಗಾಂಧಿ ಸಹಿಯಲ್ಲಿ ಮೊದಲ ಅಕ್ಷರದ ಗಾತ್ರ ದೊಡ್ಡದಾಗಿತ್ತು)

ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ : ಎಂದೆಂದಿಗೂ ಇವರಿಗೆ ಜಯ ಹಾಗೂ ಶ್ರೇಯಸ್ಸು ಲಭಿಸುತ್ತದೆ. ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ : ನೀವು ನಿಮ್ಮ ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತೀರಿ. ವರ್ತಮಾನದ ಬಗ್ಗೆ ನೀವು ಹೆಚ್ಚಾಗಿ ಗಮನ ಹರಿಸುವುದಿಲ್ಲ. ಸಹಿಯಲ್ಲಿ ಚುಕ್ಕೆಗಳಿದ್ದರೆ : ನಾನು ಯಾವಾಗಲೂ ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರು ನೀವು.

ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ : ಆರಂಭ ಶೂರತ್ವ ಹೆಚ್ಚಾಗಿರುತ್ತದೆ. ಒಳ್ಳೆಯ ಐಡಿಯಾಗಳು ಇರುತ್ತವೆ. ಆದರೆ, ಆಚರಣೆಗೆ ತರುವುದರಲ್ಲಿ ಮಾತ್ರ ವಿಫಲರಾಗುತ್ತಾರೆ. ನಿಮ್ಮ ಸಹಿಗೆ ಅನುಗುಣವಾಗಿ ನಿಮ್ಮ ಗುಣಗಳು ಹೊಂದಾಣಿಕೆ ಆಗುತ್ತಿದ್ದರೆ ಕೆಳಗೆ ಕಮೆಂಟ್ ಮಾಡಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here