ಗೃಹಿಣಿಯರೇ ರಿಲ್ಯಾಕ್ಸ್ ಪ್ಲೀಸ್. ನಾವು ಈ ಲೇಖನಗಳನ್ನು ನಿಮಗೋಸ್ಕರವೇ ಬರೆಯುತ್ತಿದ್ದೇವೆ. ಅಡುಗೆ ಎನ್ನುವುದು ಒಂದು ಕಲೆ. ಈ ಕಲೆಗಿಂತ ಶ್ರೇಷ್ಠವಾದ ಕಲೆ ಬೇರೆ ಯಾವುದೂ ಇಲ್ಲ. ಆದರೆ ಇಂದಿನ ಗೃಹಿಣಿಯರು ಅಡಿಗೆ ಮನೆಯ ಕೆಲಸ ಎಂದರೆ ಸಾಕು ತುಂಬಾ ಟೆನ್ಷನ್ ಮಾಡಿಕೊಳ್ಳುತ್ತಾರೆ. ಹೀಗಿರುವುದರಿಂದ ಗೃಹಿಣಿಯರ ಮನಸ್ಸನ್ನು ರಿಲಾಕ್ಸ್ ಮಾಡಿಕೊಳ್ಳಲು ಕೆಲವು ಸೂಚನೆ ಸಲಹೆಗಳನ್ನು ನೀಡಲಾಗಿದೆ.
ಹಳೆಯದೇ ಆದರೂ ಹೊಸದು ಎಂದು ಭಾವಿಸಿ ಈ ಸಲಹೆಗಳ ಬಗ್ಗೆ ನಿಮ್ಮ ಮನಸ್ಸು ಹಾಗೂ ಕಿವಿಗಳನ್ನು ಕೊಡಿ. ನೀವು ಕೆಲಸಕ್ಕೆ ಹೋಗಲು ಅಥವಾ ಮನೆಯಲ್ಲಿಯೇ ಇರಲಿ, ಅಡಿಗೆಯನ್ನು ರುಚಿಯಾಗಿ ಮಾಡಿ ಹಾಕುವುದು ನಿಮ್ಮ ಕರ್ತವ್ಯ ತಾನೇ. ಅದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ. ತುಂಬಾ ಆಳವಾಗಿ ಯೋಚಿಸಿ ನೋಡಿದಾಗ ಹೆಣ್ಣಿಗೆ ಅಡಿಗೆ ಮನೆಯಲ್ಲಿ ಕೆಲಸ ಮಾಡುವುದು ತುಂಬಾ ಕೀ’ಳರಿಮೆ ಎಂದು ಭಾವಿಸಿದಂತೆ ಕಾಣಲಾಗುವುದು.
ಕಾರಣ ಉದ್ಯೋಗಸ್ಥರ ಹೆಣ್ಣುಮಕ್ಕಳು ಅಡಿಗೆ ಮಾಡುವವರನ್ನು ಕೇವಲವಾಗಿ ಮಾತನಾಡಿಸುತ್ತಾರೆ. ಹೀಗಾಗಿ ಕೆಲವು ಗೃಹಿಣಿಯರು ಅಡಿಗೆ ಮನೆಯ ಕಡೆ ಲಕ್ಷ್ಯ ಕೊಡುವುದನ್ನು ಕಡಿಮೆ ಮಾಡುತ್ತಾರೆ. ಯಾವಾಗಲಾದರೂ ಮನೆಗೆ ಅತಿಥಿಗಳು ಬಂದಾಗ ಅಡಿಗೆ ಮನೆಗೆ ಹೋದಾಗ ಅಭ್ಯಾಸ ತಪ್ಪಿದಂತೆ ಆಗಿ ಕಂಗೆಡುತ್ತಾರೆ. ಕೆಲವು ಅತಿಥಿಗಳು ಮನೆಗೆ ಬಂದು ಸುಮ್ಮನೆ ಹೋಗುವುದಿಲ್ಲ.
ಅಯ್ಯೋ ನಾನು ಅಡಿಗೆ ಮನೆ ಕೆಲಸ ಮಾಡಲ್ಲ ಕಣ್ರೀ. ನಮ್ಮ ಯಜಮಾನ್ರು ಎಲ್ಲ ಪದಾರ್ಥಗಳನ್ನು ಹೊರಗಿನಿಂದ ತರುತ್ತಾರೆ. ನೀನು ಕಷ್ಟ ಪಡುವುದು ಬೇಡ ಎನ್ನುತ್ತಾರೆ. ಅಂತಹ ಮಾತುಗಳನ್ನು ಕೇಳಿಸಿಕೊಂಡ ಹೆಣ್ಣುಮಗಳು ಹೌದು ನನ್ನ ಗಂಡ ನನ್ನನ್ನು ಪ್ರೀತಿಸುವುದಿಲ್ಲ ಎಂದು ಭಾವಿಸುತ್ತಾಳೆ. ನಮ್ಮ ಕೆಲಸಗಳನ್ನು ನಾವು ಮಾಡುವುದು ಯಾವ ಸೀಮೆ ಅವಮಾನ. ಈ ಪ್ರಶ್ನೆಯನ್ನು ನಿಮ್ಮ ಮನಸ್ಸಿಗೆ ಹಾಕಿಕೊಳ್ಳಿ.
ನಮ್ಮ ಹಿರಿಯರು ಎಷ್ಟು ಕೆಲಸ ಮಾಡುತ್ತಿದ್ದರು, ಎಷ್ಟು ಅಡಿಗೆ ಮಾಡುತ್ತಿದ್ದರು, ಬಂದ ಅತಿಥಿಗಳನ್ನೆಲ್ಲ ಸುಧಾರಿಸುತ್ತಿದ್ದರು, ಅವರು ಎಂದಾದರೂ ಅವಮಾನ ಎಂದು ಭಾವಿಸುತ್ತಿದ್ದರೆ. ನೀವೇ ಯೋಚಿಸಿ ನೋಡಿ ಸ್ನೇಹಿತರೆ. ಇಂತಹ ಭಾವನೆಗಳನ್ನು ನಿಮ್ಮ ಮನಸ್ಸಿನಿಂದ ದೂರ ಮಾಡಿ. ಆಗ ಮನಸ್ಸು ನಿರಾಳವಾಗುತ್ತದೆ.
ಅಡಿಗೆ ಮಾಡುವುದು ತರ್ಕ ಶಾಸ್ತ್ರ. ಬದುಕು ಒಂದು ಶಾಸ್ತ್ರ ಎಂದು ಪರಿಗಣಿಸಿದರೆ ಯಾವುದೂ ಕಷ್ಟವಲ್ಲ. ಅಡಿಗೆ ಮಾಡುವ ಸಮಯವನ್ನು ನಿಗದಿ ಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ಕೆಲಸವು ಕೂಡ ಬೇಗ ಆಗುತ್ತದೆ ಮತ್ತು ನಿಮಗೆ ಆಯಾಸ ಕೂಡ ಹೆಚ್ಚಾಗುವುದಿಲ್ಲ. ಮಾಡುತ್ತಿದ್ದೇನೆ ಎಂಬುದನ್ನು ನಿಮ್ಮ ತಲೆಯಲ್ಲಿ ತಂದುಕೊಳ್ಳಿ. ಮನಸ್ಸಿನಲ್ಲಿ ಪ್ರೀತಿ ತುಂಬುವುದು. ಮನಸ್ಸು ಪ್ರೀತಿಯಿಂದ ನಲಿದರೆ ಬದುಕು ಸಂಪೂರ್ಣವಾಗುತ್ತದೆ.
ಮಲಗುವ ಮೊದಲು ರಾತ್ರಿಯೇ ನಾಳಿನ ಕೆಲಸಗಳ ಪಟ್ಟಿ ಮಾಡಿಕೊಳ್ಳಿ. ಯಾವ ಕೆಲಸ ಮೊದಲು ಮಾಡಬೇಕು ಯಾವ ಕೆಲಸ ಯಾವಾಗ ಮಾಡಬೇಕು ಎಂಬ ಪ್ರಯಾರಿಟಿ ನೋಡಿಕೊಳ್ಳಿ. ಮಕ್ಕಳು ಚಿಕ್ಕವಾದರೂ ಅವರ ಕೈಯಲ್ಲೂ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅಭ್ಯಾಸ ಮಾಡಿಸಿ. ಆಗ ಮನಸ್ಸು ರಿಲ್ಯಾಕ್ಸ್ ಆಗುವುದು. ಕೆಲಸಗಳು ಸಹ ಕಷ್ಟ ಎನಿಸುವುದಿಲ್ಲ. ನಿಮ್ಮ ಗಂಡನಿಗೂ ಕೆಲಸಗಳನ್ನು ಮಾಡುವಂತೆ ಪುಸಲಾಯಿಸಿ. ಆಗ ನಿಮಗೆ ಸ್ವಲ್ಪ ಫ್ರೀ ಆಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸಿನಲ್ಲಿ ಇರುವ ಅಹಂಕಾರವನ್ನು ತ್ಯಜಿಸಿಬಿಡಿ. ಆಗ ನಿಮ್ಮ ಬದುಕು ಸರಳವಾಗುತ್ತದೆ. ಸದಾಕಾಲ ನೀವು ಯಾವುದಾದರೂ ಕೆಲಸದಲ್ಲಿ ತಲ್ಲೀನರಾಗಿರಿ. ಆಗ ಮನಸ್ಸಿಗೆ ಪ್ರಶಾಂತತೆ ಲಭಿಸುತ್ತದೆ. ಇಂದು ನಗರಗಳಲ್ಲಿ ಗೃಹಿಣಿಯರು ತಮ್ಮನ್ನು ಹೌಸ್ವೈಫ್ ಎಂದು ಕಳೆದುಕೊಳ್ಳುವುದಿಲ್ಲ. ತಮ್ಮನ್ನು ಚೀಫ್ ಎಕ್ಸಿಕ್ಯೂಟಿವ್ ಆಫ್ ದಿ ಹೌಸ್ ಎಂದು ಕರೆದುಕೊಳ್ಳುತ್ತಾರೆ. ಜೊತೆಗೆ ಬೇರೆಯವರಿಂದ ಗೌರವವನ್ನು ಗಳಿಸುತ್ತಾರೆ.
ಹೀಗೆ ಪ್ರತಿಯೊಬ್ಬ ಸ್ತ್ರೀ ಕೂಡ ಇಂತಹ ಭಾವನೆಯನ್ನು ಮನಸ್ಸಿಗೆ ಕಂಡುಕೊಂಡರೆ ಆಗ ಮಾನಸಿಕ ಸಮತೋಲನ ಮೂಡುತ್ತದೆ ಹಾಗೂ ಮನಸ್ಸಿನಲ್ಲಿರುವ ದೌರ್ಬಲ್ಯಗಳು ದೂರವಾಗುತ್ತದೆ. ಮನೆಯಲ್ಲಿ ದೊಡ್ಡವರು ಹೇಗಿರುತ್ತಾರೋ ಹಾಗೆಯೇ ಮಕ್ಕಳು ಕೂಡ ಅದನ್ನು ನೋಡಿ ಕಲಿಯುತ್ತಾರೆ. ತಾಯಿ ಸಿಡುಕಿದರು ಮಕ್ಕಳು ತಾವೇ ತಾವಾಗಿ ಸಿಲುಕುವುದನ್ನು ಕಲಿಯುತ್ತಾರೆ.
ಇದು ಕೇಳಲು ಬಹಳ ಸಣ್ಣ ವಿಷಯ ಎಂಬಂತೆ ಕಾಣಿಸಿದರು ಇದನ್ನು ಆಚರಣೆಗೆ ತರುವುದು ಬಹಳ ಕಷ್ಟ. ಸೂಕ್ಷ್ಮ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಾರೆ. ಕಾಲದಿಂದ ಕಾಲಕ್ಕೆ ಮನಸ್ಸಿನ ಭಾವನೆಗಳು ಬದಲಾಗುತ್ತಾ ಹೋಗುತ್ತದೆ. ಬದುಕಿನ ಮೌಲ್ಯಗಳು ಬದಲಾಗುತ್ತದೆ. ಹೀಗಾಗಿ ಮಕ್ಕಳ ಮನಸ್ಸನ್ನು ಅರಿತು ನಡೆಯಲು ಸಹನೆ ತುಂಬಾ ಅವಶ್ಯಕ. ತಾಯಿಗೆ ಸಹನೆ ಇಲ್ಲದಿದ್ದರೆ ಮಕ್ಕಳ ಮಾನಸಿಕ ಬೆಳವಣಿಗೆ ಹೇಗೆ ಸಾಧ್ಯ. ನೀವೇ ಯೋಚಿಸಿ.
ಮನೆ, ಮನೆಯ ಅಂದ ಚಂದ ಗೃಹಿಣಿಯ ಮೇಲೆ ಅವಲಂಬಿಸಿದೆ. ಪ್ರಕೃತಿಯಲ್ಲಿ ಎಂತಹ ಸೌಂದರ್ಯ ಅಡಗಿದೆ ಅಲ್ಲವೇ. ಆದರೆ ನಾವೇ ಮೂರ್ಖರು. ಮನೆಯ ನಿಜವಾದ ಸೌಂದರ್ಯವನ್ನು ನಾವೇ ಹಾಳುಗೆಡವಿ ಬಿಡುತ್ತೇವೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.