ಹೇರ್ ರಿಮೂವಲ್ ಬಳಸುತ್ತಿದ್ದೀರಾ ಇದನ್ನು ನೀವು ತಿಳಿದಿರಲೇ ಬೇಕು.

0
2211

ಹೇರ್ ರಿಮೂವಲ್ ಬಳಸುತ್ತಿದ್ದೀರಾ. ಇದನ್ನು ನೀವು ತಿಳಿದಿರಲೇ ಬೇಕು. ಹೇರ್ ರಿಮೂವಲ್ ಕ್ರೀಂ ನಿಂದ ಆಗುವ ದುಷ್ಪರಿಣಾಮಗಳನ್ನು ಇಂದು ನಾವು ಈ ಲೇಖನದಲ್ಲಿ ನೋಡೋಣ. ಗಂಡು ಮಕ್ಕಳು ಮೈ ಮೇಲೆ ರೋಮಗಳು ಇದ್ದರೂ ಸಹ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಹೆಣ್ಣುಮಕ್ಕಳ ಮೈಮೇಲೆ ರೋಮವಿದ್ದರೆ ತಟ್ಟನೆ ಹತ್ತಿರದ ಬ್ಯೂಟಿ ಪಾರ್ಲರ್ ಗೆ ಹೋಗಿ ಹೇರ್ ರಿಮೂವಲ್ ಮಾಡಿಸಿಕೊಂಡು ಬರುತ್ತಾರೆ.

ಏನೇ ಮಾಡಿದರೂ ಕೆಲವರ ಮೈ ಮೇಲೆ ಅನಗತ್ಯವಾದ ಕೂದಲು ಬೆಳೆಯುತ್ತಲೇ ಇರುತ್ತದೆ. ನಿಮಗೂ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಹೇರ್ ರಿಮೂವಲ್ ಪ್ರಾಡಕ್ಟ್ಸ್ ಬಳಸಿ ಬಳಸಿ ಸಾಕಾಗಿರುತ್ತದೆ. ಪದೇ ಪದೇ ವ್ಯಾಕ್ಸಿಂಗ್ ಮಾಡುವುದು ಕೂಡ ಆಗದ ಮಾತು. ಕೂದಲು ಚಿಕ್ಕ ಚಿಕದಾಗಿ ಇದ್ದಲ್ಲಿ ವ್ಯಾಕ್ಸಿಂಗ್ ಮಾಡುವುದು ಕೂಡ ಬಹಳ ಕಷ್ಟ. ಮಳೆಗಾಲದಲ್ಲಿ ವಾಕ್ಸಿಂಗ್ ಸರಿಯಾಗಿ ಮಾಡಲು ಕೂಡ ಸಾಧ್ಯವಾಗುವುದಿಲ್ಲ.

ಹಾಗಾಗಿ ನೋವಿಲ್ಲದೆ ಕೂದಲು ತೆಗೆಯಲು ಹೇರ್ ರಿಮೊವರ್ ಒಳ್ಳೆಯದು. ಆದರೆ ಅದರಿಂದ ಅಡ್ಡ ಪರಿಣಾಮಗಳಿವೆ. ಮಹಿಳೆಯರ ಕೂದಲು ಸಂವೇದನಶೀಲವಾಗಿರುತ್ತದೆ. ಹೇರ್ ರಿಮೂವರ್ ಬಳಸಿದರೆ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಚರ್ಮ ತುಂಬಾ ಸಂವೇದನಾಶೀಲವಾಗಿದ್ದರೆ ಮೂರರಿಂದ ನಾಲ್ಕು ಗಂಟೆ ಉರಿಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ತಣ್ಣನೆಯ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಬೇಕು.

ಹೇರ್ ರಿಮೂವರ್ ಬಳಸಿದ ತಕ್ಷಣ ದಟ್ಟ ಬಿಸಿಲಿಗೆ ಹೋಗಲೇಬಾರದು. ಇದರಿಂದ ಸನ್ ಬರ್ನ್ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ನವೆ ಹಾಗೂ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಕೂಡ ಹೆಚ್ಚಿರುತ್ತದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಬ್ರಾಂಡಿನ ಹೇರ್ ರಿಮೂವರ್ ಸಿಗುತ್ತದೆ. ಉತ್ತಮ ಬ್ರಾಂಡ್ ನ ಕ್ರೀಮ್ ಯಾವುದು ಎಂಬುದನ್ನು ತಿಳಿದುಕೊಂಡು ಅದನ್ನು ಖರೀದಿ ಮಾಡಿ.

ಕಡಿಮೆ ಬೆಲೆಯ ಕ್ರೀಮ್ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗೆಯೇ ಮತ್ತೊಂದು ಬಹಳ ಮುಖ್ಯವಾದ ಅಂಶವೇನೆಂದರೆ ಹೇರ್ ರಿಮೂವರ್ ಕ್ರೀಮ್ ನಲ್ಲಿ ಸೂಚಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಕರಿ ಚರ್ಮದ ಮೇಲಿದ್ದರೆ ಕಪ್ಪುಕಲೆ ಕಾಣಿಸಿಕೊಳ್ಳುತ್ತದೆ.

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ವಿವಿಧ ಬ್ರಾಂಡ್ ಗಳ ಹೇರ್ ರಿಮೂವಲ್ ಕ್ರೀಂ ದೊರೆಯುತ್ತದೆ. ಅದರಲ್ಲಿ ಕೆಲವು ನಮ್ಮ ತ್ವಚೆಗೆ ಹಾನಿಕಾರಕ ಆಗಬಹುದು ಅಥವಾ ಆಗದೆಯೂ ಇರಬಹುದು. ನಾವು ಹೇಗೆ ಹೇರ್ ಡೈ ಅನ್ನು ಬಳಸುವ ಮೊದಲು ಅದನ್ನು ಕೊಂಚ ನಮ್ಮ ಕೈಗೆ ಅಪ್ಲೈ ಮಾಡಿಕೊಂಡು ಪರೀಕ್ಷೆ ಮಾಡುತ್ತೇವೆಯೋ ಹಾಗೆಯೇಗಳನ್ನು ಹೇರ್ ರಿಮೂವಲ್ ಕ್ರೀಂ ಅನ್ನು ಕೂಡ ಸ್ವಲ್ಪವೇ ಬಳಸಿಕೊಂಡು ಪರೀಕ್ಷೆ ಮಾಡಬೇಕು.

ಸಾಮಾನ್ಯವಾಗಿ ವ್ಯಾಕ್ಸ್ ಅಥವಾ ಹೇರ್ ರಿಮೂವಲ್ ಕ್ರೀಂ ಎಂಬ ಎರಡು ರೀತಿಯ ಹೇರ್ ರಿಮೂವಲ್ ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಮೇಣವು ಸ್ವಲ್ಪವೇ ಕಾಯಿಸಿ ಅದನ್ನು ರೋಮಗಳು ಇರುವ ಸ್ಥಳದಲ್ಲಿ ಹಚ್ಚಿ ಒಣಗಿದ ನಂತರ ಅದನ್ನು ಕೀಳುತ್ತಾರೆ. ಇದು ನಮಗೆ ಉರಿ ಉಂಟುಮಾಡುತ್ತದೆ ಜೊತೆಗೆ ನಮ್ಮ ಚರ್ಮದ ಬಣ್ಣ ಕೆಂಪಾಗುತ್ತದೆ. ತ್ವಚೆಯು ತುಂಬಾ ಶುಷ್ಕವಾಗಿದ್ದರೆ ತ್ವಚೆಗೆ ಹಾನಿ ಕೂಡ ಆಗಬಹುದು.

ಆದರೆ ಕ್ರೀಮ್ ಗಳನ್ನು ಅಪ್ಲೈ ಮಾಡುವುದರಿಂದ ಅದರಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳದಿದ್ದರೂ ಸಹ ಅದರಲ್ಲಿ ಬೇಗನೆ ಕೂದಲನ್ನು ತೆಗೆಯಬಹುದು. ಆದರೆ ಇದು ನಮ್ಮ ತ್ವಚೆಯ ರಂದ್ರಗಳ ಒಳಗೆ ಹೋಗುವುದರಿಂದ ಇದು ನಮ್ಮ ಚರ್ಮಕ್ಕೆ ಹಾನಿ ಉಂಟುಮಾಡಬಹುದು.

ಆಯುರ್ವೇದದಲ್ಲಿ ನಮ್ಮ ತ್ವಚೆಗೆ ಏಳು ಪದರಗಳಿವೆ ಎಂದು ಹೇಳಲಾಗಿದೆ ಅವೇ ಅವಭಾಶಿನಿ, ಲೋಹಿತ, ಶ್ವೇತಾ, ತಾಮ್ರ, ವೇದಿನಿ, ರೋಹಿಣಿ, ಮಾಂಸಧಾರ. ಅವ ಭಾಷಿಣಿ ಮತ್ತು ಲೋಹಿತ ಪದರಗಳು ಹಾನಿಗೊಳಗಾದರೆ ಅವು ಕಪ್ಪಾಗಿ ವಿಚಿತ್ರ ರೀತಿಯ ಕಲೆಗಳನ್ನು ನಮ್ಮ ತ್ವಚೆಯ ಮೇಲೆ ಉಂಟುಮಾಡುತ್ತದೆ.

LEAVE A REPLY

Please enter your comment!
Please enter your name here