ಬೆಳಿಗ್ಗೆ ಶಾಲೆಗೆ ತಲುಪಿ ನೋಟೀಸ್ ಬೋರ್ಡ್ ನಲ್ಲಿ ಹಾಕಿದ್ದ ವಾರ್ತೆ ನೋಡಿ ಆಶ್ಚರ್ಯವಾಯ್ತು. ಈ ಶಾಲೆಯಲ್ಲಿˌನಿಮ್ಮ ಏಳಿಗೆಯನ್ನು ಮೊಟಕುಗೊಳಿಸುವಂತಹˌನಿಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿ ನಿನ್ನೆ ಹೃದಯಾ’ಘಾತದಿಂದ ಮ’ರಣ ಹೊಂದಿದ್ದಾರೆ. ಅವರ ಭಾವಚಿತ್ರವನ್ನು ಹಾಲ್ ನಲ್ಲಿ ಇರಿಸಲಾಗಿದೆ. ಒಬ್ಬೊಬ್ಬರೇ ಹೋಗಿ ಶ್ರದ್ಧಾಂಜಲಿ ಅರ್ಪಿಸಿ ಬರಬೇಕೆಂದು ವಿನಂತಿ ಎಂದು ಬರೆಯಲಾಗಿತ್ತು.
ನಮ್ಮಲ್ಲಿನ ಸಹಕಾರ್ಯಕರ್ತನೊಬ್ಬ ನ ಮ’ರಣ ವಾರ್ತೆಯು ಆ’ಘಾತವಾಯ್ತಾದರೂˌನಮ್ಮ ಉನ್ನತಿಯನ್ನು ತಡೆಯುವಂತಹ ವ್ಯಕ್ತಿ ಯಾರೆಂದು ತಿಳಿಯುವ ಹಂಬಲ ಎಲ್ಲರಿಗೂ ಇತ್ತು.ˌಅಬ್ಬಾ ಏನೇ ಆಗಲೀ ನಮ್ಮ ಉನ್ನತಿಯನ್ನ ತಡೆಯುವಂತಹ ವ್ಯಕ್ತಿ ಮರಣ ಹೊಂದಿದನಲ್ಲವೇ ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರು.
ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರಾಗಿ ಹಾಲ್ ನತ್ತ ತೆರಳಿದರುˌಹಾಲ್ ನಲ್ಲಿಟ್ಟಿದ್ದ ಫೋಟೋ ನೋಡಿ ಬೆವರನ್ನು ಒರೆಸುತ್ತಾ ಹಿಂದೆ ಬರುತ್ತಿದ್ದರುˌ
ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯವಾಗಿತ್ತು. ಯಾಕಂದ್ರೆˌಆ ಹಾಲ್ ನಲ್ಲಿ ಕನ್ನಡಿಯೊಂದನ್ನ ಸ್ಥಾಪಿಸಲಾಗಿತ್ತು. ಎಲ್ಲರೂ ಅವರವರ ಪ್ರತಿಬಿಂಬವನ್ನೇ ನೋಡುತ್ತಿದ್ದರು. ಆ ಕನ್ನಡಿಯ ಮೇಲೆ ಈ ರೀತಿ ಬರೆದಿತ್ತು : ನಿಮ್ಮ ಉನ್ನತಿಯನ್ನು ತಡೆಯಲು ಒಬ್ಬ ವ್ಯಕ್ತಿಗೆ ಮಾತ್ರ ಸಾಧ್ಯವಾಗುವುದು.
ಆ ವ್ಯಕ್ತಿ ನೀನೇ ಆಗಿರುವೆ. ನಿನ್ನ ಸಂತೋಷವನ್ನೂ ಸ್ವಾತಂತ್ರ್ಯವನ್ನೂ ಕನಸನ್ನೂ ಸ್ವಾಧೀನ ಪಡಿಸಲು ಸಾಧ್ಯವಿರುವ ಏಕ ವ್ಯಕ್ತಿ ನೀನು ಮಾತ್ರ. ನಿಮ್ಮ ಶಿಕ್ಷಕರ ಮತ್ತು ಮುಖ್ಯೋಪಾದ್ಯಾಯರ ಬದಲಾವಣೆಯಿಂದಲೋˌಗೆಳೆಯರು ಅಥವಾ ಶಾಲೆ ಬದಲಾವಣೆಯಿಂದಲೋˌನಿನ್ನ ಜೀವನ ಬದಲಾಗಲ್ಲ ನಿನ್ನ ಜೀವನ ಬದಲಾಗಬೇಕಾದರೆˌನೀ ಬದಲಾಗಬೇಕು.
ಅದು ನಿನ್ನಿಂದ ಪ್ರಾರಂಭವಾಗಲೀ ಅದು ಇಂದೇ ಆರಂಭವಾಗಲೀ ನಿನ್ನ ಜೀವನದ ಜವಾಬ್ಧಾರಿ ನೀನೇ ಎಂದು ತಿಳಿದುಕೋ. ದುಃಖದಿಂದˌ ಬೇಸರಗಳಿಂದ ಜೀವನ ಬದಲಾಗಲ್ಲ. ನಷ್ಟಗಳು ಮಾತ್ರ ಬರಲಿದೆ. ಒಂದು ಕೋಳಿ ಮೊಟ್ಟೆ ಹೊರಗಡೆಯ ಶಕ್ತಿಯಿಂದ ಒಡೆದರೆˌ ಒಂದು ಜೀವ ನಷ್ಟಹೊಂದುತ್ತದೆ. ಒಳಗಡೆಯಿಂದ ಒಡೆದರೆˌಒಂದು ಜೀವ ಹೊರ ಬರುತ್ತದೆ.
ನೀ ಬಯಸೋ ಬದಲಾವಣೆ ಮೊದಲು ನಿನ್ನಿಂದಾಗಲಿ ಅದು ಇಂದಿನಿಂದವೇ ಆಗಲೀ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.