ದಾಂಪತ್ಯದ ಜೀವನದಲ್ಲಿ ಅನ್ಯೋನ್ಯತೆ ಕಡಿಮೆಯಾಗುತ್ತಿದೆ. ಇಂದು ಮದುವೆ ನಾಳೆ ವಿಚ್ಛೇದನ, ಮದುವೆ ಎನ್ನುವುದು ಗೊಂಬೆ ಆಟವಾಗಿದೆ .
ವಯಸ್ಸಿಗೆ ಬಂದ ಮಕ್ಕಳ ಮದುವೆ ಮಾಡುವುದು ಎಂದರೆ ತಂದೆ ತಾಯಿಯರಿಗೆ ದೊಡ್ಡ ಸವಾಲು ಎಂಬಂತಾಗಿದೆ. ಏಕೆಂದರೆ ಹಿಂದಿನ ಕಾಲದಲ್ಲಿ ಗುರು ಹಿರಿಯರು ನೋಡಿದ ಕನ್ಯೆಯನ್ನು ಮದುವೆ ಆಗುತ್ತಿದ್ದರು.
ಗುರು ಹಿರಿಯರು ನೋಡುವುದು ಅಂದ್ರೆ , ರೂಪ ಬಣ್ಣ ನೋಡುತ್ತಿರಲಿಲ್ಲ. ನಮ್ಮ ಮನೆಗೆ ಬರುವ ಕನ್ಯೆ ಲಕ್ಷ್ಮಿಯಾಗಿ, ಭೂದೇವಿಯಾಗಿರಬೇಕು ಎಂದು ವಿಚಾರಿಸಿ ನೋಡಿ ಮಾಡುತ್ತಿದ್ದರು. ಹೆಣ್ಣು ನೋಡಲಿಕ್ಕೆ ಹೋಗುವುದು ಅಂದ್ರೆ ಪಂಚಾಂಗದ ಪ್ರಕಾರ ವಾರ, ತಿಥಿ, ಯಾವ ದಿಕ್ಕಿಗೆ ರಾಹು ಇರುವುದು ನೋಡಿ ಸಮಯ ನೋಡಿಕೊಂಡು ಹೋಗುತ್ತಿದ್ದರು.
ಒಂದೊಂದು ಸಲ ಅಪರಿಚಿತರಾಗಿ ಹೆಣ್ಣಿನ ಮನೆಯವರಿಗೆ ತಿಳಿಸದೆ ಹೋಗಿ ಬರುತ್ತಿದ್ದರು. ಮದುವೆ ಆಗುವ ಹೆಣ್ಣು ಇವರು ಹೋದ ಸಮಯದಲ್ಲಿ ಏನು ಮಾಡುತ್ತಿದ್ದಳು ಎಂಬುವುದರ ಆಧಾರಿತದ ಮೇಲೆ ಅವಳ ಗುಣ ಲಕ್ಷಣಗಳು ಕಂಡು ಹಿಡಿಯುತ್ತಿದ್ದರು. ಅಷ್ಟೆಲ್ಲಾ ನೋಡಿದ ಮೇಲೆ ಇಬ್ಬರ ಹೆಸರಿನಿಂದ ತಾರವಳಿ ಕಲಿತರೆ ಮದುವೆ ಮಾಡುತ್ತಿದ್ದರು. ಇಲ್ಲಾಂದ್ರೆ ಬಿಟ್ಟು ಬಿಡುತ್ತಿದ್ದರು.
ಆ ಒಂದು ಪದ್ಧತಿ ಸಂಪ್ರದಾಯಗಳು ಬದುಕಿಗೆ ಮೌಲ್ಯದ ಆಸ್ತಿ ಆಗಿತ್ತು. ಅದರಿಂದಲೇ ತುಂಬಿದ ಕುಟುಂಬಗಳು ನೆಮ್ಮದಿಯಿಂದ ತಲೆ ತಲೆಮಾರಿನವರು ಕೂಡಿ ಬಾಳುತ್ತಿದ್ದರು. ಆದರೆ ಈಗ ಹಾಗಲ್ಲ ಎಲ್ಲವೂ ಬದಲಾಗಿದೆ. ಮಕ್ಕಳು ಒಪ್ಪಿದ ಮೇಲೆಯೇ ಮದುವೆ. ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಒತ್ತು ಕೊಡುವುದು.
ಮನೆತನ ಹೇಗೆ ಇರಲಿ ಅದು ಮುಖ್ಯ ಅಲ್ಲ. ಹಿಂದಿನವರು ಒಪ್ಪಿದರೆಷ್ಟು ಬಿಟ್ಟರೆಷ್ಟು? ತಮ್ಮ ಮನಸ್ಸಿನಂತೆ ಆಗಬೇಕು. ಪ್ರೀತಿಗಿಂತ ಆಡಂಬರದ ಜೀವನ ಶೈಲಿಯಲ್ಲಿ ಬದುಕುವ ಮನಸ್ಸುಗಳು. ಮನೆ ಮನೆತನದ ಪರಂಪರೆ ಎಲ್ಲವೂ ಬಿಟ್ಟು ಮನಬಂದಂತೆ ನಡೆಯುವುದು. ರೀತಿ ನೀತಿ ಧರ್ಮ ಎಲ್ಲವೂ ಶೂನ್ಯ.
ಯಾವಾಗ ಬೇಕಾದರೂ ಏಳುವುದು ಯಾವಾಗ ಬೇಕಾದರೂ ಮಲಗುವುದು. ಆರ್ಥಿಕ ಪರಿಸ್ಥಿತಿಗಳ ಲೆಕ್ಕ ಹಾಕುವುದಿಲ್ಲ. ತಮಗೆ ಏನು ಬೇಕೋ ಅದನ್ನು ತರಲೇ ಬೇಕು ಗಂಡ. ಇಲ್ಲಾಂದ್ರೆ ಮನೆ ಎನ್ನುವುದು ರಣರಂಗ. ಗುರು ಹಿರಿಯರ ಮಾತು ಗಾಳಿಯಲ್ಲಿ ತೂರಿ ಬಿಡುವುದು. ಅವರೆಲ್ಲ ಹಿಂದಿನ ಕಾಲದವರು ಅವರಿಗೆ ಏನು ತಿಳಿಯುವುದಿಲ್ಲ ಈಗ ಕಾಲ ಬದಲಾಗಿದೆ.
ನಾವು ಎಲ್ಲರಂತೆ ಬದುಕಬೇಕು. ಎಂದು ತಮ್ಮ ಮನಸ್ಸಿನಂತೆ ಸಂಸಾರ ಮಾಡುವರು. ಅತ್ತೆ ಮಾವ ಏನು ಹೇಳುವಂತಿಲ್ಲ. ಪಾಪ ಗಂಡನ ಗತಿ ಅಧೋಗತಿ. ಹೀಗಾಗಿ ಮನೆಗಳಲ್ಲಿ ಅಶಾಂತಿ ಶುರುವಾಗುವುದು. ದಿನ ದಿನವೂ ಮನೆಯಲ್ಲಿ ಕಿರಿಕಿರಿ ಆದಾಗ ಮಗ ಬೇರೆ ಮನೆ ಮಾಡುವುದು ಅನಿವಾರ್ಯವಾಗುತ್ತದೆ. ಒಂದು ವೇಳೆ ತಂದೆ ತಾಯಿಯ ಮಾತಿನಂತೆ ನಡೆದರೆ. ವಿಚ್ಛೇದನಕ್ಕೆ ಮುಂದಾಗುತ್ತಾರೆ.
ಯಾವುದಕ್ಕೂ ಅಂಜದ ಎದೆಗಾರಿಕೆ ಇಂದಿನ ಯುವ ಪೀಳಿಗೆ. ಮದುವೆ ಎನ್ನುವುದಕ್ಕೆ ಅರ್ಥವೇ ಇಲ್ಲ. ಆಕರ್ಷಣೆಗೆ ಒಳಗಾಗಿ ಬದುಕಿನ ವಾಸ್ತವ ಅರಿಯದೆ ದಾಂಪತ್ಯದ ಜೀವನದಲ್ಲಿ ಅನ್ಯೋನ್ಯತೆ ಕಡಿಮೆ ಆಗಿದೆ. ನಾನು ಎನ್ನುವ ಮನೋಭಾವ ಸುಖದಿಂದ ಬಾಳ್ವೆ ಮಾಡಲು ಆಗದೆ ತೋರೆದು ಹೋಗಿ ತವರು ಸೇರುವು ಇಂದಿನ ಹೆಣ್ಣು ಮಕ್ಕಳ ಗುಣವಾಗಿದೆ. ಸಂಸ್ಕಾರದ ಕೊರತೆಯಿಂದಾಗಿ ಮನುಜನ ಬದುಕು ದಿನ ದಿನಕ್ಕೂ ನರಕ ಆಗುತ್ತಿದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.