ಎಲ್ಲರಿಗೊಂದು ಪಾಠ. ನನ್ನ ಹೆಂಡತಿ ಸದಾ ರೇಗುವುದು, ಗೊಣಗುವುದು, ಬೈಯುವುದು, ಸಣ್ಣ ಸಮಸ್ಯೆಗೂ ದೊಡ್ಡದಾಗಿ ಪ್ರತಿಕ್ರಿಯಿಸುವುದು ಅವಳ ಸ್ವಭಾವವಾಗಿತ್ತು. ಅದೊಂದು ದಿನದಿಂದ ಆಕೆ ಸಂಪೂರ್ಣ ಬದಲಾದದ್ದು ಗಮನಕ್ಕೆ ಬಂತು. ನಾನು ಈ ದಿನ ಸ್ವಲ್ಪ ಕುಡಿಯುತ್ತೇನೆ ಎಂದಾಗ ಶಾಂತ ಚಿತ್ತದಿಂದ ಸರಿ ಆದರೆ ಮಿತಿಯಿರಲಿ ಎಂದಳು.
ಮತ್ತೊಂದು ದಿನ ಮಗ ಅಮ್ಮಾ ಟೆಸ್ಟ್ ಲಿ ಎಲ್ಲ ವಿಷಯಗಳಲ್ಲಿ ಕಡಿಮೆ ಅಂಕ ಬಂದಿವೆ ಎಂದು ಅಳುಕುತ್ತಾ ಹೇಳಿದಾಗ, ಪರವಾಗಿಲ್ಲ ಬಿಡು. ಇನ್ನು ಮುಂದೆ ಹೆಚ್ಚು ಓದು. ಸೆಮಿಸ್ಟರ್ ಹೋದರೆ ಹೋಗಲಿ. ಮುಂದಿನ ಪರೀಕ್ಷೆಗೆ ಟ್ಯೂಷನ್ ತೊಗೋ ಎಂದಾಗ ಮಗ ಮೈ ಚಿವುಟಿ ನೋಡಿಕೊಂಡ. ಮತ್ತೊಮ್ಮೆ ಮಗಳು ಅಮ್ಮ ಈ ದಿನ ಕಾರ್ ಸ್ವಲ್ಪ ಜಖಂ ಆಯ್ತು ಎಂದು ಅಳುತ್ತಾ ಹೇಳಿದಾಗ ಅಳಬೇಡ, ಹೋಗಿ ಈಗಲೇ ರಿಪೇರಿಗೆ ಕೊಟ್ಟು ಬಾ ಎಂದು ತಲೆ ಸವರಿದಳು. ಮಗಳ ಅಳು ತಟ್ಟನೆ ನಿಂತು ಅಚ್ಚರಿ ಮನೆ ಮಾಡಿತ್ತು.
ನಮಗೆಲ್ಲ ಅವಳ ಶಾಂತ ಪ್ರತಿಕ್ರಿಯೆ ನೋಡಿ ಚಿಂತೆಯಾಯ್ತು. ಅವಳೇನಾದರೂ ವೈದ್ಯರ ಬಳಿ ಹೋಗಿ ಯಾವುದಾದರೂ ಮಾತ್ರೆ ತಂದು ಹೀಗೆ ಮಂಕಾಗಿದ್ದಾಳಾ ಅನ್ನಿಸತೊಡಗಿತು. ಹಾಗಾಗಿ ನಾವೆಲ್ಲ ಅವಳನ್ನು ಕೂರಿಸಿ ಮಾತಾಡಿದಾಗ ಅವಳು ಕೊಟ್ಟ ಉತ್ತರದಿಂದ ನಾವು ಮೂಕ ವಿಸ್ಮಿತರಾದೆವು. ಪ್ರತಿ ಮನುಷ್ಯನೂ ತನ್ನ ಜೀವಕ್ಕೆ – ಜೀವನಕ್ಕೇ ತಾನೇ ಜವಾಬ್ದಾರನು. ನನಗೆ ಜ್ಞಾನೋದಯವಾಗಲು ಇಷ್ಟು ಸಮಯ ಬೇಕಾಯಿತು.
ನನ್ನ ಕೋಪ, ಬುದ್ದಿವಾದ, ಕಿರಿಕಿರಿ, ಬೇಸರ, ನಿದ್ರಾಹೀನತೆ, ಚಿಂತೆ, ಆತಂಕ, ನನ್ನ ಧೈರ್ಯ ಯಾವುವೂ ನಿಮ್ಮ ಸಮಸ್ಯೆಯನ್ನು ಪರಿಹರಿಸಲಾರವು ಬದಲಿಗೆ ನನ್ನ ಸಮಸ್ಯೆಯನ್ನು ಹೆಚ್ಚಿಸುವವು ಎಂದು ಅರಿವಾಗಿದ್ದೇ ಈಗ. ಎಲ್ಲರ ಕೆಲಸಗಳಿಗೆ ನಾನು ಜವಾಬ್ದಾರಳಾಗಿ ಎಲ್ಲರನ್ನೂ ಸಂತೋಷವಾಗಿರಿಸುವುದು ನನ್ನ ಕೆಲಸವಲ್ಲ. ಹಾಗಾಗಿ ನಾನೊಂದು ನಿರ್ಧಾರಕ್ಕೆ ಬಂದೆ.ಸದಾ ಶಾಂತಳಾಗಿದ್ದು ಅವರವರ ಸಮಸ್ಯೆಗೆ ಅವರೇ ಪರಿಹಾರ ಕಂಡುಕೊಳ್ಳಲಿ ಎಂದಿದ್ದು ಬಿಡುವುದು ನನ್ನ ಕರ್ತವ್ಯ. ಯೋಗ, ಧ್ಯಾನ, ವೈದ್ಯಕೀಯ ರಂಗ, ಆಧ್ಯಾತ್ಮ, ಎಲ್ಲ ಹೇಳುವುದು ಒಂದೇ ವಿಚಾರ.
ನಾನು ನನ್ನನ್ನು ಮಾತ್ರ ನಿಯಂತ್ರಿಸಿಕೊಳ್ಳಬಲ್ಲೆನೇ ಹೊರತು ಇತರರನ್ನಲ್ಲ. ಪ್ರತಿ ಜೀವಿಯೂ ಅದೆಷ್ಟೇ ದೊಡ್ಡ ಸಮಸ್ಯೆಯಾಗಿದ್ದರೂ, ತನ್ನ ಸಮಸ್ಯೆಯ ವಿರುದ್ಧ ಹೋರಾಡುವ ಚೈತನ್ಯ ಪಡೆದೇ ಬಂದಿರುತ್ತಾನೆ. ನನ್ನ ಕೆಲಸವೇನೆಂದರೆ ಎಲ್ಲರನ್ನೂ ಪ್ರೀತಿಸುವುದು, ಎಲ್ಲರಿಗಾಗಿ ಪ್ರಾರ್ಥಿಸುವುದು, ಎಲ್ಲರನ್ನೂ ಪ್ರೋತ್ಸಾಹಿಸುವುದು, ಆದರೆ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸಂತೋಷವಾಗಿರುವುದು ನಿಮಗೆ ಸಂಬಂಧಿಸಿದ್ದು.
ನಾನು ಕೇವಲ ಸಲಹೆ ಕೊಡಬಲ್ಲೆ ಅದೂ ನೀವು ಕೇಳಿದರೆ! ಅದನ್ನ ಪಾಲಿಸುವುದು ನಿಮಗೆ ಬಿಟ್ಟವಿಚಾರ. ನಮ್ಮ ನಿರ್ಧಾರಗಳು ಒಳಿತಿರಬಹುದು, ಕೆಡುಕಿರಬಹುದು , ಮತ್ತೊಂದು ಸಮಸ್ಯೆ ಎದುರಾಗಬಹುದು. ಅದರೊಡನೆ ಬದುಕುವುದನ್ನು ನಾವು ಕಲಿಯಬೇಕು. ನನ್ನ ಈ ನಿರ್ಧಾರ ನನಗೆ ಸಂತಸ ಶಾಂತಿ ನೆಮ್ಮದಿ ತಂದಿದೆ. ”
ಹೆಂಡತಿ ಹೀಗೆ ಮಾತು ಮುಗಿಸಿದಾಗ ನಾವೆಲ್ಲ ಮಾತು ಹೊರಡದೇ ಮೂಕರಾದೆವು.
ಆ ದಿನದಿಂದ ಮನೆಯಲ್ಲಿ ಎಲ್ಲ ಕೆಲಸ ಕಾರ್ಯಗಳು ಸುಲಲಿತವಾದವು ಸರಳವಾದವು. ಯಾಕೆಂದರೆ ಮನೆಯಲ್ಲಿ ಎಲ್ಲರಿಗೂ ತಮ್ಮ ಕರ್ತವ್ಯದ ಅರಿವಾಗಿತ್ತು. ಏನು ಮಾಡಿದರೆ ಏನಾಗುತ್ತದೆ ಅದಕ್ಕೇನು ಪರಿಹಾರ, ಯಾರು ಪರಿಹಾರ ಕೊಡಬೇಕು ಎಲ್ಲದರ ಬಗ್ಗೆ ಕಣ್ಣು ತೆರೆದಿತ್ತು. ಇಡೀ ಕುಟುಂಬ ಪಾಠ ಕಲಿಯಿತು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.