ತೆರೆಮೇಲೆ ಕನ್ನಡಿಗನ ಪಾತ್ರ ಮಾಡಲಿದ್ದಾರೆ ಬಾಲಿವುಡ್ ನ ಈ ದೊಡ್ಡ ಸ್ಟಾರ್!

0
108

ಕರೋನಾವೈರಸ್ ನಿಂದಾಗಿ ನಟ ಸೂರ್ಯ ಅವರು ಅಭಿನಯಿಸಿರುವ ಸುರರೈ ಪೊಟ್ಟುರ್ ಚಿತ್ರ ಬಿಡುಗಡೆಯಾಗಲು ತಡವಾಗಿದೆ, ಈ ಚಿತ್ರದ ಕಥಾಹಂದರ ನಮ್ಮ ಹಾಸನ ಜಿಲ್ಲೆಯ ಗೊರೋರಿನವರಾದ ಜಿಆರ್ ಗೋಪಿನಾಥ್ ಅವರ ಜೀವನಾಧಾರಿತ ಕಥೆಯನ್ನು ಒಳಗೊಂಡಿದೆ, ಇದೇ ಚಿತ್ರವನ್ನು ಹಾಲಿವುಡ್ ನಾ ಜನಪ್ರಿಯ ನಾಯಕನಟರಾದ ಶಾಹಿದ್ ಕಪೂರ್ ಹಿಂದಿಯಲ್ಲಿ ರಿಮೇಕ್ ಮಾಡಲಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ.

ಶಾಹಿದ್ ಕಪೂರ್ ಸೌತ್ ಸಿನಿಮಾಗಳನ್ನು ರಿಮೇಕ್ ಮಾಡಲು ಯಾವಾಗಲೂ ಮುಂದು, ಇತ್ತೀಚಿಗೆ ಬಿಡುಗಡೆಯಾದ ಕಬೀರ್ ಸಿಂಗ್ ಸೌತ್ ಸಿನಿಮಾದ ರಿಮೇಕ್ ಆಗಿದ್ದು ಅವರಿಗೆ ಬಹುದೊಡ್ಡ ಯಶಸ್ಸು ನೀಡಿದೆ, ಹಾಗಾಗಿ ಈ ಸಿನಿಮಾವನ್ನು ಅವರೇ ಮಾಡಲಿದ್ದಾರೆ ಎಂಬುವ ಮಾತುಕತೆ ಈಗಾಗಲೇ ಶುರುವಾಗಿದೆ ಇನ್ನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಖಾತರಿ ಮಾಹಿತಿ ಬರಲಿದೆ, ಈ ಮಾಹಿತಿ ಪಕ್ಕ ಆದರೆ ಶಾಹಿದ್ ಕಪೂರ್ ಮೇಲೆ ಕನ್ನಡಿಗನಾಗಿ ಅಭಿನಯ ಮಾಡಲಿದ್ದಾರೆ.

ಜಿಆರ್ ಗೋಪಿನಾಥ್ ಅವರ ಬಗ್ಗೆ ಒಂದು ಸಣ್ಣ ಮಾಹಿತಿ ತಪ್ಪದೇ ಓದಿ : ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಕರ್ನಾಟಕ ಮೂಲದ ಏರ್‌ ಡೆಕ್ಕನ್‌ ಸಂಸ್ಥಾಪಕರು. ಇವರು ಭಾರತೀಯ ವಿಮಾನಯಾನ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು. ಪ್ರಾದೇಶಿಕ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್‌ ಯೋಜನೆಯಲ್ಲಿ ಗೋಪಿನಾಥ್‌ ಅವರೂ ಕೆಲಸ ಮಾಡುತ್ತಿದ್ದಾರೆ. ಇವರ ಆತ್ಮಕಥನ simply fly. ಇವರ ಸಂಪೂರ್ಣ ಮಾಹಿತಿ, ಜೀವನ ಚಿತ್ರಣವನ್ನು ಕುರಿತಾದ ಈ ಪುಸ್ತಕ ಉದಯಭಾನು ಸುವರ್ಣ ಪುಸ್ತಕಮಾಲೆಯ ಪ್ರಕಟಣೆಯಲ್ಲಿ ಒಂದಾಗಿದೆ.

LEAVE A REPLY

Please enter your comment!
Please enter your name here